Midnight Elimination: ಬಿಗ್‌ಬಾಸ್ ಸೀಸನ್ 12 ರಲ್ಲಿ ಎರಡು ಫಿನಾಲೆಗಳಿದ್ದು, ಮೊದಲ ಫಿನಾಲೆಗೂ ಮುನ್ನವೇ ಮಧ್ಯರಾತ್ರಿ ಅನಿರೀಕ್ಷಿತ ಎಲಿಮಿನೇಷನ್ ನಡೆದಿದೆ. ಸ್ಪರ್ಧಿಗಳೇ ನಾಮಿನೇಟ್ ಆದವರ ಫೋಟೋ ಸ್ಟ್ಯಾಂಡ್ ಮುಂದಿಡುವ ಮೂಲಕ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ.
ಈ ಬಾರಿ ಸೀಸನ್ 12ರಲ್ಲಿ ಎರಡು ಫಿನಾಲೆ ಇರಲಿದೆ ಎಂದು ಬಿಗ್‌ಬಾಸ್ ನಿರೂಪಕ ಸುದೀಪ್ ಹೇಳಿದ್ದರು. ಮೊದಲ ಫಿನಾಲೆ ಇದೇ ಶನಿವಾರ ಮತ್ತು ಭಾನುವಾರ ನಡೆಯಲಿದೆ. ಅದಕ್ಕೂ ಮೊದಲೇ ಬಿಗ್‌ಬಾಸ್ ಮಿಡ್‌ನೈಟ್ ಎಲಿಮಿನೇಷನ್ ಶಾಕ್ ನೀಡಿದ್ದಾರೆ.
25
ನೇರವಾಗಿ ನಾಮಿನೇಟ್
ಅಶ್ವಿನಿ ಗೌಡ, ಸ್ಪಂದನಾ ಸೋಮಣ್ಣ, ಕಾಕ್ರೋಚ್ ಸುಧಿ, ಮಾಳು ನಿಪನಾಳ ಮತ್ತು ರಾಶಿಕಾ ಫೈನಿಲಿಸ್ಟ್ ಆಗಿದ್ದಾರೆ. ಫೈನಲಿಸ್ಟ್‌ಗಳನ್ನು ಹೊರತುಪಡಿಸಿ ಇನ್ನುಳಿದ ಸ್ಪರ್ಧಿಗಳೆಲ್ಲರೂ ನೇರವಾಗಿ ನಾಮಿನೇಟ್ ಆಗಿದ್ದಾರೆ. ಟಾಸ್ಕ್ ಆಡಿ ನೆಮ್ಮದಿಯಾಗಿ ಮಲಗಿದ್ದ ಎಲ್ಲಾ ಸ್ಪರ್ಧಿಗಳನ್ನು ಮುಖ್ಯದ್ವಾರ ಬಳಿಯಲ್ಲಿ ನಿಲ್ಲುವಂತೆ ಸೂಚನೆ ನೀಡಿದ್ದಾರೆ.
35
ಸ್ಪರ್ಧಿಗಳ ಫೋಟೋ
ಸ್ಪರ್ಧಿಗಳ ಮುಂದೆ ನಾಮಿನೇಟ್ ಆಗಿರುವ ಸ್ಪರ್ಧಿಗಳ ಫೋಟೋವುಳ್ಳ ಸ್ಟ್ಯಾಂಡ್ ನಿಲ್ಲಿಸಲಾಗಿದೆ. ಯಾರು ಮನೆಯಿಂದ ಹೊರಗೆ ಹೋಗಬೇಕೆಂದು ಹೆಸರು ಹೇಳಿ ಅವರ ಸ್ಟ್ಯಾಂಡ್‌ನ್ನು ಒಂದು ಸ್ಟೆಪ್ ಮುಂದಕ್ಕೆ ಎತ್ತಿಡಬೇಕು. ಯಾರ ಫೋಟೋವುಳ್ಳ ಸ್ಟ್ಯಾಂಡ್ ಮುಖ್ಯದ್ವಾರದ ಸಮೀಪದಲ್ಲರುತ್ತೋ ಅವರು ಮನೆಯಿಂದ ಹೊರಗೆ ಹೋಗುತ್ತಾರೆ.
ಅಶ್ವಿನಿ ಗೌಡ ಅವರು ಸ್ಪಂದನಾ ಹೆಸರು ಹೇಳಿದ್ರೆ, ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಇಬ್ಬರು ಜಾನ್ವಿ ಹೆಸರನ್ನು ಹೇಳಿ ಸ್ಟ್ಯಾಂಡ್ ಮುಂದೆ ಎತ್ತಿಟ್ಟಿದ್ದಾರೆ. ಸತೀಶ್ ಅವರು ಮಂಜು ಭಾಷಿಣಿ, ಜಾನ್ವಿ ಅವರು ರಕ್ಷಿತಾ ಶೆಟ್ಟಿ ಸ್ಟ್ಯಾಂಡ್ ಮುಂದಿರಿಸಿದ್ದಾರೆ. ಇನ್ನುಳಿದ ಸ್ಪರ್ಧಿಗಳು ಯಾರ ಹೆಸರನ್ನು ಸೂಚಿಸಿದ್ದಾರೆ ಎಂಬುದನ್ನು ಪ್ರೋಮೋದಲ್ಲಿ ತೋರಿಸಿಲ್ಲ.
ಕೆಲವರು ಸತೀಶ್ ಮನೆಯಿಂದ ಹೊರಗೆ ಬಂದಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಆದ್ರೆ ಈ ಬಗ್ಗೆ ಬಿಗ್‌ಬಾಸ್‌ನಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಮನೆಯಿಂದ ಯಾರು ಹೊರ ಬಂದಿದ್ದಾರೆ ಎಂದು ತಿಳಿದುಕೊಳ್ಳಲು ಇಂದಿನ ಸಂಚಿಕೆ ನೋಡಿ