ಭಾವನಾ ತಿರುಗೇಟಿಗೆ ಥಂಡಾ ಹೊಡೆದ್ರು ರೇಣುಕಾ, ನೀಲು! ಇನ್ಮುಂದೆ ಏನಿದ್ರೂ ಸಿದ್ದೇಗೌಡರ ಮೇಡಂ ಆಟ!

Published : Oct 16, 2025, 07:30 AM IST

ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ, ತನ್ನ ವಿರುದ್ಧ ಅತ್ತೆ ಮತ್ತು ಓರಗಿತ್ತಿ ರೂಪಿಸಿದ ಸಂಚನ್ನು ಅರಿತ ಭಾವನಾ, ಅದನ್ನೇ ತಿರುಮಂತ್ರವಾಗಿಸಿ ಅವರಿಗೆ ಶಾಕ್ ನೀಡುತ್ತಾಳೆ. ವ್ರತದ ಮೂಲಕ ತನ್ನನ್ನು ದೂರ ಮಾಡಲು ಯತ್ನಿಸಿದಾಗ, ಭಾವನಾ ಪತಿ ಸಿದ್ದೇಗೌಡರಿಗೆ ಮತ್ತಷ್ಟು ಹತ್ತಿರವಾಗುತ್ತಾಳೆ.

PREV
15
ಲಕ್ಷ್ಮೀ ನಿವಾಸ ಸೀರಿಯಲ್

ಲಕ್ಷ್ಮೀ ನಿವಾಸ ಸೀರಿಯಲ್ ಸಣ್ಣದಾಗಿ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಬದಲಾವಣೆಗೆ ಪ್ರೇಕ್ಷಕರಿಗೂ ಇಷ್ಟವಾಗುತ್ತಿದೆ. ಸಿದ್ದೇಗೌಡರನ್ನು ಮದುವೆಯಾಗಿ ಭಾವನಾ ಬಂದಾಗಿನಿಂದ ಓರಗಿತ್ತಿಯನ್ನು ಮನೆಯಿಂದ ಹೇಗೆ ಹೊರಗೆ ಹಾಕಬೇಕೆಂದು ನೀಲು ಸಂಚು ರೂಪಿಸುತ್ತಿದ್ದಾರೆ. ಇದೀಗ ಈ ಕೆಲಸಕ್ಕೆ ನೀಲುಗೆ ಅತ್ತೆಯ ಸಾಥ್ ಸಿಕ್ಕಿದೆ.

25
ಭಾವನಾಗೆ ಕಠಿಣ ವ್ರತ

ಮನೆಯ ಹಿರಿಯ ಸೊಸೆ ಜೊತೆ ಸೇರಿ ಭಾವನಾಳನನ್ನು ಸಿದ್ದೇಗೌಡನ ಜೀವನದಿಂದ ದೂರ ಮಾಡಲು ರೇಣುಕಾ ಪ್ಲಾನ್ ಮಾಡಿದ್ದಾರೆ. ನೀಲು ಹೇಳಿದಂತೆ ಭಾವನಾಗೆ ಕಿರುಕುಳ ನೀಡಲು ಆರಂಭಿಸುತ್ತಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ರೇಣುಕಾ ಮತ್ತು ನೀಲು ಜ್ಯೋತಿಷಿ ಬಳಿ ಸುಳ್ಳು ಹೇಳಿಸಿ ಭಾವನಾಗೆ ಕಠಿಣ ವ್ರತ ಮಾಡುವಂತೆ ಮಾಡಿದ್ದ

35
ನೀಲು ಮತ್ತು ರೇಣುಕಾ ಸಂಚು

ಇದೀಗ ನೀಲು ಮತ್ತು ರೇಣುಕಾ ಸಂಚು ಭಾವನಾಗೆ ಗೊತ್ತಾಗಿದೆ. ಹಾಗಾಗಿ ಅವರ ಮಂತ್ರವನ್ನೇ ತಿರುಮಂತ್ರವನ್ನಾಗಿ ಮಾಡಿ ಅತ್ತೆ ಮತ್ತು ಓರಗಿತ್ತಿಗೆ ಶಾಕ್ ಕೊಟ್ಟಿದ್ದಾಳೆ. ವ್ರತದಿಂದಾಗಿ ದೂರವಾಗಿದ್ದ ಸಿದ್ದೇಗೌಡರಿಗೆ ಹತ್ತಿರವಾಗಿದ್ದಾಳೆ. ಇದರಿಂದ ಸಿದ್ದೇಗೌಡರು ಫುಲ್ ಖುಷಿಯಾಗಿದ್ದು, ದೇವರಿಗೆ ನಮಸ್ಕಾರ ಮಾಡಿದ್ದಾರೆ.

45
ಅತ್ತೆಗೆ ಶಾಕ್

ಸಂಚು ಅರಿತಿರೋ ಭಾವನಾ ಶಾಂತ ಸ್ವಭಾವದಿಂದಲೇ ಅತ್ತೆಗೆ ಶಾಕ್ ಕೊಟ್ಟಿದ್ದಾರೆ. ಅತ್ತೆ ಏನೇ ಬೈದ್ರೂ ಅಳದೇ ಭಾವನಾ ಸಂತೋಷವಾಗಿರೋದನ್ನು ಕಂಡು ನೀಲುಗೆ ಶಾಕ್ ಆಗಿದೆ. ನಮ್ಮ ಕಣ್ಮುಂದೆ ಇಬ್ಬರು ದೂರವಿದ್ದು, ಹೊರಗಡೆ ಗಂಡನೊಂದಿಗೆ ಭಾವನಾ ಚೆನ್ನಾಗಿರುವ ಅನುಮಾನ ಬಂದಿದೆ.

ಇದನ್ನೂ ಓದಿ: ಮದುವೆ ಮೇಕಿಂಗ್ ವಿಡಿಯೋ ರಿಲೀಸ್‌ ಮಾಡಿ Karna ಸೀರಿಯಲ್ ವೀಕ್ಷಕರ ತಲೆಗೆ ಹುಳ ಬಿಟ್ಟ ನಿರ್ದೇಶಕರು

55
ವಾಂತಿ

ಇದರಿಂದ ಭಾವನಾ ಜೊತೆಯಲ್ಲಿಯೇ ರೇಣುಕಾ ಮತ್ತು ನೀಲು ಹೊರಗಡೆ ಮಲಗಿಕೊಂಡಿದ್ದಾರೆ. ಇಬ್ಬರಿಗೂ ಶಾಕ್ ಕೊಡಲು ಹೊಟ್ಟೆ ಸರಿಯಾಗಿಲ್ಲ ಅತ್ತೆ, ಬೆಳಗ್ಗೆಯಿಂದ ಹೊಟ್ಟೆ ತೊಳಿಸಿದ ಹಾಗೆ ಆಗಿ ವಾಂತಿ ಬಂದಂತೆ ಆಗ್ತಿದೆ ಎಂದು ಭಾವನಾ ಹೇಳಿದನ್ನು ಕೇಳಿ ರೇಣುಕಾ ಮತ್ತು ನೀಲು ಶಾಕ್ ಆಗಿದ್ದಾರೆ. ಈ ಪ್ರೋಮೋ ನೋಡಿದ ವೀಕ್ಷಕರು ಇನ್ಮುಂದೆ ಏನಿದ್ರ ಸಿದ್ದೇಗೌಡರ ಹೆಂಡರ ಆಟ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಸೊಸಿ ಚೆಂದ ಇರೋದು ಬೇಡ್ರಿ ಎಂದ Bigg Boss ಮಲ್ಲಮ್ಮ! ಕಾರಣ ಕೇಳಿ, ನಿಮ್​ ಲೆವೆಲ್ಲೇ ಬೇರೆ ಬಿಡಿ ಎಂದ ಫ್ಯಾನ್ಸ್​

Read more Photos on
click me!

Recommended Stories