
ಬಿಗ್‌ಬಾಸ್ ಕನ್ನಡ ಸೀಸನ್ 13 ಆರಂಭವಾಗಿದ್ದು, ಒಟ್ಟು 17 ಸ್ಪರ್ಧಿಗಳು ದೊಡ್ಮನೆಯನ್ನು ಸೇರಿದ್ದಾರೆ. ಇವರಲ್ಲಿ ನಾಲ್ವರು ಕಾಮನ್ ಮ್ಯಾನ್ ಆಗಿದ್ದ, 13 ಸೆಲಿಬ್ರಿಟಿಗಳಿದ್ದಾರೆ. ಇವರೆಲ್ಲರ ಮಾಹಿತಿ ಇಲ್ಲಿದೆ
ಲವ್ ಮಾಕ್ಟೇಲ್-3 ಸಿನಿಮಾದಲ್ಲಿ ಜಗ್ಗು ಮಮ್ಮಿಯಾಗಿ ಕಾಣಿಸಿಕೊಂಡಿದ್ದ ನಟ ಜಗದೀಶ್ ಬಿಗ್‌ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಆಗಮಿಸಿದ್ದಾರೆ. ಮಂಡ್ಯ ಜಿಲ್ಲೆಯ ಶೂಟಿಂಗ್ ಮಹದೇವಪುರ ನಿವಾಸಿಯಾಗಿರುವ ಜಗದೀಶ್, ಮೈಸೂರು ಡೈರಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಮನೆಗಳಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು.
ಲವ್ ಮಾಕ್ಟೇಲ್ ಸಿನಿಮಾ ಮೂಲಕ ಜನಪ್ರಿಯತೆ ಪಡೆದುಕೊಂಡ ಜಗದೀಶ್ ಅವರಿಗೆ ಮೂರ್ನಾಲ್ಕು ವರ್ಷಗಳಲ್ಲಿ 30-40 ಸಿನಿಮಾ ಮಾಡಿ, ಆಸ್ಕರ್ ಮತ್ತು ನ್ಯಾಷನಲ್ ಅವಾರ್ಡ್ ತೆಗೆದುಕೊಂಡು ಹಾಲಿವುಡ್‌ಗೆ ಹೋಗೋದಂತೆ. ಚಿನ್ನ ಅಡವಿಟ್ಟು ಸಾಲ ಪಡೆದುಕೊಂಡಿದ್ದೇನೆ. ಇಲ್ಲಿಂದ ಹಣ ಬಂದ್ರೆ ಒಡವೆಗಳನ್ನು ಬಿಡಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಸ್ಟೈಲಿಶ್ & ಕಾನ್ಫಿಡೆಂಟ್ ಹುಡುಗಿ ಮಸ್ಕತ್‌ನಲ್ಲಿ ಹುಟ್ಟಿ, ಮಂಗಳೂರಿನಲ್ಲಿ ಬೆಳೆದಿರುವ ಸೌಂದರ್ಯ ಶೆಟ್ಟಿ, ಸದ್ಯ ಮುಂಬೈನಲ್ಲಿ ವಾಸವಾಗಿದ್ದಾರೆ. ಹಿಂದಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಸೌಂದರ್ಯ ಶೆಟ್ಟಿ, ತವರೂರಿನಲ್ಲಿರಬೇಕು ಎಂದು ಬಯಸಿ ಬಿಗ್‌ಬಾಸ್‌ಗೆ ಬಂದಿರೋದಾಗಿ ಹೇಳಿದ್ದಾರೆ. ಕನ್ನಡ ಅಸ್ಪಷ್ಟವಾಗಿ ಮಾತನಾಡುವ ಕರಾವಳಿ ಚೆಲುವೆ ಸೌಂದರ್ಯ ಶೆಟ್ಟಿ ಆಟ ಹೇಗಿರಲಿದೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ನಿರಂತರ ಹುಡುಕಾಟದಲ್ಲಿರುವ ವ್ಯಕ್ತಿ. ಹಿಂದೆ ಆಗಿರೋದು, ಮುಂದೆ ಆಗೋದನ್ನ ಯೋಚಿಸದೇ ಈ ಕ್ಷಣವನ್ನು ಆನಂದಿಸುವ ವ್ಯಕ್ತಿ. ನಾನು ಸೋತಿರುವನು, ಗೆಲುವ ಬೇಕಾಗಿ ಬಿಗ್‌ಬಾಸ್‌ಗೆ ಬಂದಿದ್ದೇನೆ ಎಂದು ಅವಿನಾಶ್ ತಮ್ಮ ಪರಿಚಯ ಮಾಡಿಕೊಂಡಿದ್ದಾರೆ.
ವಿಭಿನ್ನವಾಗಿ ಕಾಣಿಸಿಕೊಳ್ಳುವ ಅವಿನಾಶ್, ಬಿಗ್‌ಬಾಸ್ ಮನೆಯಲ್ಲಿ ಹೇಗಿರ್ತಾರೆ ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ. ಬಿಗ್‌ಬಾಸ್ ಟ್ರೋಫಿ ಗೆಲ್ಲುತ್ತೇನೆ ಇಲ್ಲವೋ ಗೊತ್ತಿಲ್ಲ. ಆದ್ರೆ ನನ್ನ ಜೀವನ ಗೆಲ್ಲಲು ಇಲ್ಲಿಗೆ ಬಂದಿದ್ದೇನೆ ಎಂದು ಅವಿನಾಶ್ ಹೇಳಿದ್ದಾರೆ.
ಕನ್ನಡದ ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿ, ಕಿರುತೆರೆ ಕಲಾವಿದೆ, ಡ್ಯಾನ್ಸರ್ ಪ್ರಥಮಾ ಪ್ರಸಾದ್ 4ನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಒಂದು ವರ್ಷದಲ್ಲಿ 50 ಬಾರಿ ಆಡಿಷನ್‌ನಲ್ಲಿ ರಿಜೆಕ್ಷನ್ ನೋಡಿದ್ದೇನೆ. ಅಮ್ಮನೇ ನನ್ನ ಬಿಗ್ ಸ್ಟ್ರೆಂಥ್. ಒಂದು ವರ್ಷದ ಬಳಿಕ ಬಿಗ್‌ಬಾಸ್ ಅವಕಾಶ ಸಿಕ್ಕಿದೆ ಎಂದು ಪ್ರಥಮಾ ಹೇಳುತ್ತಾರೆ. ಮಗಳಿಗೆ ಒಳ್ಳೆಯ ಡಬ್ಬಿಂಗ್ ಆರ್ಟಿಸ್ಟ್ ಎಂದು ನಟಿ ವಿನಯಾ ಪ್ರಸಾದ್ ತಿಳಿಸಿದ್ದಾರೆ.
ಮಂಗಳಗೌರಿ ಮದುವೆ, ಸೀತಾರಾಮಾ ಸೀರಿಯಲ್‌ನ ನಟ ಗಗನ್ ಚಿನ್ನಪ್ಪ ಬಿಗ್‌ಬಾಸ್ ಮನೆಗೆ 5ನೇ ಸ್ಪರ್ಧಿಯಾಗಿ ಎಂಟ್ರಿಯಾಗಿದ್ದಾರೆ. ಸೂಪರ್ ಹಿಟ್ ಸೀರಿಯಲ್‌ಗಳ ಮೂಲಕ ತಮ್ಮದೇ ಅಭಿಮಾನಿ ಬಳಗ ಹೊಂದಿರುವ ಗಗನ್ ಚಿನ್ನಪ್ಪ, ಬಿಗ್‌ಬಾಸ್ ಸ್ಪರ್ಧೆಯ ಬಿಸಿಯನ್ನು ಹೆಚ್ಚು ಮಾಡಿದ್ದಾರೆ. ಕೊಡಗು ಮೂಲದ ಗಗನ್ ಚಿನ್ನಪ್ಪ, ಆಟೋಮೊಬೈಲ್ ಇಂಡಸ್ಟ್ರಿಯಲ್ಲಿಯೂ ಕೆಲಸ ಮಾಡಿದ್ದಾರೆ. ಅಲೆಗ್ಸಾಂಡರ್ ಎಂಬ ಸಿನಿಮಾದಲ್ಲಿಯೂ ನಾಯಕ ನಟನಾಗಿ ಗಗನ್ ಚಿನ್ನಪ್ಪ ನಟಿಸಿದ್ದಾರೆ. ಈ ಹಿಂದೆ ಮಿನಿ ಸೀಸನ್‌ನಲ್ಲಿಯೂ ಗಗನ್ ಕಾಣಿಸಿಕೊಂಡಿದ್ದರು.
ಸ್ಯಾಂಡಲ್‌ವುಡ್ ನಟಿ ಸಂಗೀತಾ ಭಟ್ ಗ್ರ್ಯಾಂಡ್ ಆಗಿ ಬಿಗ್‌ಬಾಸ್ ಮನೆಗೆ 6ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಪ್ರೀತಿ ಗೀತಿ ಇತ್ಯಾದಿ, ಎರಡನೇ ಸಲ, ದಯವಿಟ್ಟು ಗಮನಿಸಿ, ಕಿಸ್ಮತ್, ಅಂಕುಶ, ಕಪಟ ನಟಕ ಪಾತ್ರಧಾರಿ ಸೇರಿದಂತೆ ಕನ್ನಡ, ತಮಿಳು ಮತ್ತು ತೆಲಗು ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಸಂಗೀತಾ ಭಟ್ ಅವರ ಪತಿ ಸುದರ್ಶನ್ ಸಹ ಕಲಾವಿದರಾಗಿದ್ದು, ಭಾಗ್ಯಲಕ್ಷ್ಮೀ ಸೀರಿಯಲ್‌ನ ತಾಂಡವ್ ಆಗಿ ಗುರುತಿಸಿಕೊಂಡಿದ್ದಾರೆ.
ಭಾಗ್ಯಲಕ್ಷ್ಮೀ ಧಾರಾವಾಹಿಯ ಶ್ರೇಷ್ಠಾ ಖ್ಯಾತಿಯ ಕಾವ್ಯಾ ಗೌಡ ಬಿಗ್‌ಬಾಸ್ ಮನೆಗೆ ಏಳನೇ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ವೇದಿಕೆಗೆ ಬರುತ್ತಿದ್ದಂತೆ ನಟ ಸುದರ್ಶನ್ ಅವರನ್ನು ನೋಡುತ್ತಿದ್ದಂತೆ ನೀನು ಬಂದಿದೆಯಾ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ನಾನು ಶ್ರೇಷ್ಠಾ ರೀತಿಯಲ್ಲಿರುತ್ತೇನೆ ಅಂತ ಬಹುತೇಕರು ತಿಳಿದುಕೊಳ್ಳುತ್ತಾರೆ. ಆದ್ರೆ ಕಾವ್ಯಾ ತುಂಬಾನೇ ಡಿಫರೆಂಟ್. ನನಗೆ ತಾಳ್ಮೆ ಕೊಂಚ ಕಡಿಮೆ. ಸ್ವಾಭಿಮಾನಕ್ಕೆ ಧಕ್ಕೆ ಬಂದ್ರೆ ನಾನು ಸುಮ್ನೆ ಇರಲ್ಲ ಎಂದು ಕಾವ್ಯಾ ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ.
ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ, ನಟ, ಓಂ ಪ್ರಕಾಶ್ ರಾವ್ ಬಿಗ್‌ಬಾಸ್ ಮನೆಗೆ ಎಂಟನೇ ಸ್ಪರ್ಧಿಯಾಗಿ ಬಂದಿದ್ದಾರೆ. ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ವಾಹಿನಿಯ ಕ್ವಾಟ್ಲೆ ಕಿಚನ್ ಶೋನಲ್ಲಿ ಓಂ ಪ್ರಕಾಶ್ ರಾವ್ ಕಾಣಿಸಿಕೊಂಡಿದ್ದರು. ಇದೀಗ ಹಿರಿಯರ ಕೋಟಾದಲ್ಲಿ ಓಂ ಪ್ರಕಾಶ್ ರಾವ್ ಕಾಣಿಸಿಕೊಳ್ಳೋ ಸಾಧ್ಯತೆಗಳಿವೆ. ಹುಚ್ಚ, ಪಾರ್ಥ, ಕಲಾಸಿಪಾಳ್ಯ, ಸಾಹುಕಾರ, ತುಂಟ, ಹುಬ್ಬಳ್ಳಿ, ಯೋಧ, ಮಂಡ್ಯ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಬಿಗ್‌ಬಾಸ್ ಅಗ್ನಿಪರೀಕ್ಷೆ ಮೂಲಕ ಬಂದಿರುವ ಕಿರಣ್ ಶಾಸ್ತ್ರಿ ದೊಡ್ಮನೆಗೆ 9ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ವೇದಿಕೆಗೆ ಬರುತ್ತಿದ್ದಂತೆ ಸುದೀಪ್ ಅವರನ್ನು ನೋಡುತ್ತಿದ್ದಂತೆ ಕೊಂಚ ನರ್ವಸ್ ಆದರು. ಬಿಗ್‌ಬಾಸ್ ಅಗ್ನಿಪರೀಕ್ಷೆಯಲ್ಲಿ ತಮ್ಮ ಆಟ ಮತ್ತು ಮಾತುಗಳಿಂದಲೇ ಕಿರಣ್ ಶಾಸ್ತ್ರಿ ಎಲ್ಲರ ಗಮನ ಸೆಳೆದರು. ಉತ್ತರ ಕರ್ನಾಟಕದ ಪ್ರತಿಭೆಯಾಗಿರೋ ಕಿರಣ್ ಶಾಸ್ತ್ರಿ ಮನೆಯಲ್ಲಿ ಹೇಗಿರ್ತಾರೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಿದೆ. ಈ ಹಿಂದಿನ ಸೀಸನ್‌ನಗಳಲ್ಲಿ ಮಾಳು ನಿಪನಾಳ, ಮಲ್ಲಮ್ಮ, ಹನುಮಂತ ಕಾಣಿಸಿಕೊಂಡಿದ್ದರು.
ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ಮುಗಿಯುತ್ತಿದ್ದಂತೆ ನಟಿ ಆಸಿಯಾ ಫಿರ್ದೋಸ್, ಬಿಗ್‌ಬಾಸ್ ಮನೆಗೆ 10ನೇ ಸ್ಪರ್ಧಿಯಾಗಿ ಬಂದಿದ್ದಾರೆ. ಆಸಿಯಾ ಅವರಿಗೆ ಶ್ರಾವಣಿ ಪಾತ್ರ ದೊಡ್ಡಮಟ್ಟದ ಜನಪ್ರಿಯತೆಯನ್ನು ತಂದು ಕೊಡ್ತು. ಮೊದಲ ಬಾರಿಗೆ ಕನ್ಯಾಕುಮಾರಿ ಧಾರಾವಾಹಿಗೆ ನಾಯಕಿಯಾಗಿ ಆಸಿಯಾ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಚಿಕ್ಕವಳಿದ್ದಾಗಿಂದಲೂ ದೊಡ್ಡ ದೊಡ್ಡ ಕನಸುಗಳು. ಆ ಕನಸುಗಳು ನನಸು ಮಾಡಿಕೊಳ್ಳುತ್ತಾ ಸಾಗಿರುವ ಜರ್ನಿ ಬಿಗ್‌ಬಾಸ್ ವರೆಗೂ ತಲುಪಿದೆ ಎಂದು ಆಸಿಯಾ ಫಿರ್ದೋಸ್ ಹೇಳಿಕೊಂಡಿದ್ದಾರೆ. ಇದೇ ವೇಳೆ ಸಾಂಪ್ರದಾಯಿಕ ಕುಟುಂಬದಿಂದ ಇಲ್ಲಿವರೆಗಿನ ಬಂದ ದಾರಿ ನೆನೆದು ಆಸಿಯಾ ಭಾವುಕರಾಗಿ ಕಣ್ಣೀರು ಹಾಕಿದರು.
ಅಗ್ನಿಪರೀಕ್ಷೆಯ ಮತ್ತೋರ್ವ ಸ್ಪರ್ಧಿಯಾಗಿದ್ದ ಲಿಖಿತ್ ಗೋಂದಿ, ಬಿಗ್‌ಬಾಸ್ ಮನೆಗೆ 11ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ಬಾಸ್ ಅಗ್ನಿಪರೀಕ್ಷೆಗೆ ತಂದೆಯೊಂದಿಗೆ ಆಗಮಿಸಿದ್ದರು. ಅಪ್ಪ ಮತ್ತು ಮಗನ ಜೋಡಿ ಎಲ್ಲರ ಗಮನ ಸೆಳೆದಿದ್ದರು. ತಂದೆ-ಮಗ ಜೊತೆಯಾಗಿ ಬರಬಹುದು ಎಂಬ ನಿರೀಕ್ಷೆ ಹೆಚ್ಚಿತ್ತು. ಅದು ಸುಳ್ಳು ಆಗಿದೆ. ಇದಕ್ಕೂ ಮೊದಲು ಕಿರಣ್ ಶಾಸ್ತ್ರಿ ಆಗಮಿಸಿದ್ದರು.
ಕುಸ್ತಿಪಟು, ಕಿರುತೆರೆ ನಟ ಹಾಸನ ಮೂಲದ ತಾಂಡವ್ ರಾಮ್ ಬಿಗ್‌ಬಾಸ್ ಮನೆಗೆ 12ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಜೀ ಕನ್ನಡದ ಜೋಡಿಹಕ್ಕಿ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದುಕೊಂಡ ತಾಂಡವ್ ರಾಮ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅಪರಾಧ ಪ್ರಕರಣವೊಂದರಲ್ಲಿ ತಾಂಡವ್ ರಾಮ್ ಹೆಸರು ಕೇಳಿ ಬಂದಿತ್ತು. ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವೆ ಎಂದು ತಾಂಡವ್ ರಾಮ್ ಹೇಳಿಕೊಂಡಿದ್ದಾರೆ.
ಕಲರ್ಸ್ ಕನ್ನಡದ ಪ್ರೇಮಕಾವ್ಯಾ ಸೀರಿಯಲ್ ಖ್ಯಾತಿಯ ನಟಿ ವೈಷ್ಣವಿ ವಿ ಕೌಂಡಿನ್ಯ ಅವರು ಬಿಗ್‌ಬಾಸ್ ಮನೆಗೆ 13ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಪ್ರೇಮಕಾವ್ಯ ಸೀರಿಯಲ್ ಮುಕ್ತಾಯಗೊಂಡಿತ್ತು. ಈ ಹಿಂದೆ ಡೀಪ್ ನೆಕ್ ಡ್ರೆಸ್ ಧರಿಸಿದ್ದರಿಂದ ವೈಷ್ಣವಿ ಅವರನ್ನು ಅತಿಯಾಗಿ ಟ್ರೋಲ್ ಮಾಡಲಾಗಿತ್ತು. ಈ ಸಂಬಂಧ ಟ್ರೋಲರ್ಸ್ ವಿರುದ್ದ ವೈಷ್ಣವಿ ಧ್ವನಿ ಎತ್ತಿ, ಎಚ್ಚರಿಕೆ ನೀಡಿದ್ದರು.
ಅಗ್ನಿಪರೀಕ್ಷೆಯಿಂದ ಮೂರನೇ ಸ್ಪರ್ಧಿಯಾಗಿ ಧನುಷ್ ಅವರು ಬಿಗ್‌ಬಾಸ್ ಮನೆಗೆ 14ನೇ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ಸುದೀಪ್ ಅವರ ಮುಂದೆ ಬಂದು ನಿಲ್ಲುತ್ತೇನೆ ಎಂದು ನಂಬಿಕೆ ಇತ್ತು. ಇಂದು ಬಿಗ್‌ಬಾಸ್ ವೇದಿಕೆ ಮೇಲಿದ್ದೇನೆ. ಗೆಲ್ಲುತ್ತೇನೆ ಎಂಬ ನಂಬಿಕೆಯಿಂದ ಬಿಗ್‌ಬಾಸ್‌ಗೆ ಬಂದಿರೋದಾಗಿ ಧನುಷ್ ಹೇಳಿಕೊಂಡಿದ್ದಾರೆ. ಇದೇ ವೇಳೆ ತಾವು ಸುದೀಪ್ ಅವರ ದೊಡ್ಡ ಅಭಿಮಾನಿ ಎಂದು ತಿಳಿಸಿದ್ದಾರೆ.
ಪವಿತ್ರ ಬಂಧನ ಸೀರಿಯಲ್ ಆರಂಭದಲ್ಲಿದ್ದ ತಿಲಕ್ ಆಗಿ ಕಾಣಿಸಿಕೊಂಡಿದ್ದ ನಟ ಯಶಸ್ ಕೃಷ್ಣ ಅವರು ಬಿಗ್‌ಬಾಸ್ ಮನೆಗೆ 15ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಈ ವೇದಿಕೆಯಿಂದ ಮತ್ತಷ್ಟು ಅವಕಾಶಗಳು ಸಿಗುತ್ತೆ. ನಾನು ನಾನಾಗಿಯೇ ಇರುತ್ತೇನೆ. ಜನರು ಇಷ್ಟಪಡೋವರೆಗೂ ಬಿಗ್‌ಬಾಸ್ ಮನೆಯಲ್ಲಿರುತ್ತೇನೆ ಎಂದು ಯಶಸ್ ಕೃಷ್ಣ ಹೇಳಿದ್ದಾರೆ.
ಬಿಗ್‌ಬಾಸ್ ಅಗ್ನಿಪರೀಕ್ಷೆ ತೀರ್ಪುಗಾರರಿಗೆ ಓರ್ವ ಸ್ಪರ್ಧಿಯನ್ನು ದೊಡ್ಮನೆಗೆ ಕಳುಹಿಸುವ ಅವಕಾಶ ನೀಡಲಾಗಿತ್ತು. ಶೃತಿ, ವಿನಯ್ ಗೌಡ ಮತ್ತು ಚಂದನ್ ಶೆಟ್ಟಿ ಆಯ್ಕೆಯನುಸಾರವಾಗಿ ಬಿಗ್‌ಬಾಸ್ ಮನೆಗೆ 16ನೇ ಸ್ಪರ್ಧಿಯಾಗಿ ಮಾಡರ್ನ್ ಮಹಾಕವಿ ಮಂಜ ಎಂಟ್ರಿ ಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.