Bigg Boss ಸುದೀಪ್ ಸರಳತೆಗೆ ಅಭಿಮಾನಿಗಳಿಂದ ಉಘೇ ಉಘೇ; ಹಿರಿಯ ನಟಿಯಿಂದ ಮೆಚ್ಚುಗೆ!

Published : Sep 06, 2026, 09:33 PM IST

ಬಿಗ್‌ಬಾಸ್ ಕಾರ್ಯಕ್ರಮದಲ್ಲಿ, ಸ್ಪರ್ಧಿ ಪ್ರಥಮಾ ಪ್ರಸಾದ್ ಅವರನ್ನು ಬೀಳ್ಕೊಡಲು ಬಂದಿದ್ದ ಹಿರಿಯ ನಟಿ ವಿನಯಾ ಪ್ರಸಾದ್ ಅವರಿಗೆ ನಟ ಸುದೀಪ್ ಅವರು ವಿಶೇಷ ಗೌರವ ಸಲ್ಲಿಸಿದ್ದಾರೆ. ವೇದಿಕೆಗೆ ಕರೆತಂದ ಸುದೀಪ್ ಅವರ ಸರಳತೆಯನ್ನು ವಿನಯಾ ಪ್ರಸಾದ್ ಶ್ಲಾಘಿಸಿದರು.

PREV
15
ಸುದೀಪ್ ಅವರ ಸರಳತೆ

ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಅಭಿನಯ ಚಕ್ರವರ್ತಿ ನಟ ಸುದೀಪ್ ಅವರ ಸರಳತೆಗೆ ಅಭಿಮಾನಿಗಳು ಹರ್ಷೋದ್ಘಾರ ವ್ಯಕ್ತಪಡಿಸಿದ್ದಾರೆ. ಹೌದು, ಬಿಗ್‌ಬಾಸ್ ಮನೆಗೆ ಸ್ಪರ್ಧಿಯಾಗಿ ಹಿರಿಯ ನಟಿ ವಿನಯಾ ಪ್ರಸಾದ್ ಅವರ ಮಗಳು ಪ್ರಥಮಾ ಆಗಮಿಸಿದ್ದಾರೆ. ಮಗಳನ್ನು ಬೀಳ್ಕೊಡಲು ಬಿಗ್‌ಬಾಸ್ ಕಾರ್ಯಕ್ರಮಕ್ಕೆ ವಿನಯಾ ಪ್ರಸಾದ್ ಆಗಮಿಸಿದ್ದರು.

25
ಪ್ರಥಮಾ ಪ್ರಸಾದ್

ಪ್ರಥಮಾ ಪ್ರಸಾದ್ ಜೊತೆ ಮಾತನಾಡುತ್ತಿರೋ ಸಂದರ್ಭದಲ್ಲಿ ನಿಮ್ಮೊಂದಿಗೆ ಯಾರು ಬಂದಿದ್ದಾರೆ ಅಂತ ಕೇಳಿದಾಗ ಪತಿ ಮತ್ತು ಅಮ್ಮಾ ಎಂದು ಹೇಳುತ್ತಾರೆ. ವಿನಯ್ ಪ್ರಸಾದ್ ಅವರನ್ನು ನೋಡಿದ ಸುದೀಪ್, ಕೈ ಮುಗಿದು ನಮಸ್ಕಾರ ಮಾಡುತ್ತಾರೆ. ವಿನಯ್ ಪ್ರಸಾದ್ ಅವರು ಪ್ರೇಕ್ಷಕರ ಗ್ಯಾಲರಿಯಿಂದಲೇ ಮಗಳ ಕುರಿತು ಮಾತನಾಡಲು ಆರಂಭಿಸುತ್ತಾರೆ.

35
ಹಿರಿಯರಿಗೆ ಗೌರವ

ಕೂಡಲೇ ವೇದಿಕೆಯಿಂದ ಕೆಳಗಿಳಿದು ವಿನಯಾ ಪ್ರಸಾದ್ ಬಳಿ ಬಂದು ಅವರ ಆಶೀರ್ವಾದ ಪಡೆದುಕೊಳ್ಳುತ್ತಾರೆ. ನೀವು ಇಲ್ಲಿ ನಿಂತು, ನಾವು ಅಲ್ಲಿ ನಿಲ್ಲೋದು ಚೆನ್ನಾಗಿರಲ್ಲ ಎಂದು ಕೈ ಹಿಡಿದುಕೊಂಡು ವೇದಿಕೆಗೆ ಕರೆದುಕೊಂಡು ಬರುವ ಮೂಲಕ ಹಿರಿಯ ನಟಿಗೆ ಗೌರವ ತೋರಿಸುತ್ತಾರೆ. ವೇದಿಕೆ ಮೇಲೆ ಬರುತ್ತಿದ್ದಂತೆ, ಈಗ ನಮ್ಮ ಸ್ಟೇಜ್‌ಗೆ ಒಂದು ಕಳೆ ಬಂತು ಎಂದು ಸುದೀಪ್ ವ್ಯಕ್ತಪಡಿಸುತ್ತಾರೆ.

45
ವಿನಯಾ ಪ್ರಸಾದ್ ಮೆಚ್ಚುಗೆ

ವೇದಿಕೆ ಮೇಲೆ ಆಗಮಿಸುತ್ತಿದ್ದಂತೆ ಸುದೀಪ್ ಅವರ ಸರಳತೆ ವಿನಯಾ ಪ್ರಸಾದ್ ಅವರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ನಿಮ್ಮ ಈ ನಡೆಯಿಂದಲೇ ನೀವು ಸುದೀಪ ಆಗಿರೋದು. ನೀವು ಇದ್ದಲ್ಲಿ ಗೌರವ ಇದ್ದೇ ಇರುತ್ತೆ, ನಿಮ್ಮ ಗೌರವಕ್ಕೆ ಆಭಾರಿಯಾಗಿದ್ದೇನೆ ಎಂದು ವಿನಯ ಪ್ರಸಾದ್ ಎಂದು ವಿನಯಾ ಪ್ರಸಾದ್ ಹೇಳುತ್ತಾರೆ.

55
ನಾಲ್ಕು ಭಾಷೆಯಲ್ಲಿ ಆರಂಭ

ಬಿಗ್‌ಬಾಸ್ ಕನ್ನಡ ಜೊತೆ ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಯಲ್ಲಿಯೂ ಆರಂಭವಾಗಿದೆ. ಈ ಬಾರಿಯ ಶೋಗೆ ಸೆಲೆಬ್ರಿಟಿಗಳ ಜೊತೆ ಕಾಮನ್ ಮ್ಯಾನ್ ಸಹ ಆಗಮಿಸುತ್ತಿದ್ದಾರೆ. ಈ ಬಾರಿಯೂ ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಬಿಗ್‌ಬಾಸ್ ನಡೆಯುತ್ತಿದೆ.=

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories