Bigg Boss ಶೋ ಆರಂಭದಲ್ಲಿಯೇ ಬಿಗ್ ಟ್ವಿಸ್ಟ್; ವಿಶೇಷ ವ್ಯಕ್ತಿಗೆ ಸಿಕ್ತು ಕಿಚ್ಚನ ಮೊದಲ ಚಪ್ಪಾಳೆ

Published : Sep 06, 2026, 07:42 PM IST

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 13ಕ್ಕೆ ಕಿಚ್ಚ ಸುದೀಪ್ ಅದ್ಧೂರಿಯಾಗಿ ಚಾಲನೆ ನೀಡಿದ್ದಾರೆ. ಈ ಬಾರಿ ವಿಶ್ವದ ಅದ್ಭುತಗಳ ಮಾದರಿಯ ಮನೆಯನ್ನು ನಿರ್ಮಿಸಲಾಗಿದ್ದು, ಸ್ಪರ್ಧಿಗಳಿಗೆ ಆರಂಭದಲ್ಲೇ ಸವಾಲೊಂದು ಎದುರಾಗಿದೆ. ಮೊದಲ ಸ್ಪರ್ಧಿಯಾಗಿ ಜಗ್ಗ ಮಮ್ಮಿ ಖ್ಯಾತಿಯ ಜಗದೀಶ್ ಆಗಮಿಸಿದ್ದಾರೆ.

PREV
15
ಬಿಗ್‌ಬಾಸ್ ಸೀಸನ್ 13ಕ್ಕೆ ಅದ್ಧೂರಿ ಚಾಲನೆ

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋಗೆ ಬಿಗ್‌ಬಾಸ್ ಸೀಸನ್ 13ಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಕಾರ್ಯಕ್ರಮದ ನಿರೂಪಕ, ನಟ ಕಿಚ್ಚ ಸುದೀಪ್, ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ರಿಯಾಲಿಟಿ ಶೋಗೆ ಚಾಲನೆ ನೀಡಿದರು. ಈ ಬಾರಿಯ ಮನೆಯಲ್ಲಿ ವಿಶ್ವದ ಪ್ರಮುಖ ಅದ್ಭುತಗಳ ಮಾದರಿಯನ್ನು ಸೃಷ್ಟಿಸಲಾಗಿದೆ.

25
ಕಿಚ್ಚನ ಚಪ್ಪಾಳೆ

ಬಿಗ್‌ಬಾಸ್ ಮನೆಯೊಳಗೆ ಬಂದ ಸುದೀಪ್, ಅಲ್ಲಿರೋ ವಿಶೇಷತೆಗಳ ಬಗ್ಗೆ ವೀಕ್ಷಕರಿಗೆ ಮಾಹಿತಿ ನೀಡಲು ಆರಂಭಿಸಿದರು. ಈ ವೇಳೆ ಸ್ಟ್ಯಾಚು ಆಫ್ ಲಿಬರ್ಟಿಯನ್ನು ನೋಡಿ, ಅದರಲ್ಲಿ ಮಾಡಲಾಗಿರುವ ಸಣ್ಣ ಬದಲಾವಣೆಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸ್ಟ್ಯಾಚುಗೆ ಮೂಗುತಿಯನ್ನ ಹಾಕಿ ನಮ್ಮ ಸಂಪ್ರದಾಯದ ಸ್ಪರ್ಶವನ್ನು ನೀಡಲಾಗಿತ್ತು. ಹಾಗೆಯೇ ಮೂರ್ತಿಯ ಕೈಯಲ್ಲಿ "ಕಿಚ್ಚನ ಚಪ್ಪಾಳೆ" ಬರಹವುಳ್ಳ ಪತ್ರವಿತ್ತು.

35
ಬಿಗ್‌ಬಾಸ್‌ಗೆ ಕಿಚ್ಚನ ಚಪ್ಪಾಳೆ

ಈ ಮೂರ್ತಿ ಸೇರಿದಂತೆ ಸುಂದರವಾದ ಮನೆಯನ್ನು ನಿರ್ಮಿಸಿರೋದಕ್ಕೆ ಬಿಗ್‌ಬಾಸ್‌ ಅವರಿಗೆ ಸುದೀಪ್ ತಮ್ಮ ಚಪ್ಪಾಳೆಯನ್ನು ನೀಡಿದರು. ಶೋ ಆರಂಭದಲ್ಲಿ ಬಿಗ್‌ಬಾಸ್‌ಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಒಂದು ವಾರದ ಆಟವನ್ನು ಗಮನಿಸಿ ಉತ್ತಮವಾಗಿ ಆಡಿರುವ ಓರ್ವ ಸ್ಪರ್ಧಿಗೆ ಸುದೀಪ್ ಅವರಿಂದ ಕಿಚ್ಚನ ಚಪ್ಪಾಳೆ ಸಿಗುತ್ತದೆ. ಈ ಚಪ್ಪಾಳೆಗಾಗಿ ಸ್ಪರ್ಧಿಗಳು ಸತತವಾಗಿ ಪ್ರಯತ್ನಿಸುತ್ತಿರುತ್ತಾರೆ.

45
ಸ್ಪರ್ಧಿಗಳಿಗೆ ಮೊದಲ ಸವಾಲು

ಇನ್ನು ಬಿಗ್‌ಬಾಸ್ ಶೋ ಆರಂಭದಲ್ಲಿ ಸುದೀಪ್ ಟ್ವಿಸ್ಟ್‌ವೊಂದನ್ನು ನೀಡಿದ್ದಾರೆ. ವೇದಿಕೆಗೆ ಬರುವ ಸ್ಪರ್ಧಿಗಳು ನೇರವಾಗಿ ಬಿಗ್‌ಬಾಸ್ ಮನೆಯನ್ನು ಪ್ರವೇಶ ಮಾಡಲ್ಲ. ಅದಕ್ಕೂ ಮುಂಚೆ ಸ್ಪರ್ಧಿಗಳು ಸವಾಲೊಂದನ್ನು ಎದುರಿಸಬೇಕು ಎಂದು ಸುದೀಪ್ ಮಾಹಿತಿ ನೀಡಿದ್ದಾರೆ.

55
ದೊಡ್ಡದಾದ ಸೆಟ್

ಈ ಬಾರಿ ದಕ್ಷಿಣ ಭಾರತದ ನಾಲ್ಕು ಭಾಷೆಯಲ್ಲಿ ಬಿಗ್‌ಬಾಸ್ ಏಕಕಾಲದಲ್ಲಿಯೇ ಆರಂಭವಾಗುತ್ತಿರೋದು ಮತ್ತೊಂದು ವಿಶೇಷವಾಗಿದೆ. ಕನ್ನಡದ ಬಿಗ್‌ಬಾಸ್ ಸೀಸನ್ 13ರ ಶೋಗಾಗಿ ಬೆಂಗಳೂರು ಹೊರವಲಯದಲ್ಲಿ ದೊಡ್ಡದಾದ ಸೆಟ್ ಹಾಕಲಾಗಿದೆ. ಇಲ್ಲಿಂದಲೇ ಶೋ ನಡೆಯಲಿದೆ. ಮೊದಲ ಸ್ಪರ್ಧಿಯಾಗಿ ಲವ್ ಮಾಕ್ಟೇಲ್ ಸಿನಿಮಾದ ಜಗ್ಗ ಮಮ್ಮಿ ಖ್ಯಾತಿಯ ಜಗದೀಶ್ ಆಗಮಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories