kannada bigg boss season 12: ವೈಲ್ಡ್ ಕಾರ್ಡ್ ಸ್ಪರ್ಧಿಯು ಯಾವ ಸ್ಪರ್ಧಿಯ ಹಾರ್ಟ್‌ನ್ನು ತನ್ನ ಬಳಿ ಇಟ್ಟುಕೊಳ್ತಾರೋ ಅವರು ನಾಮಿನೇಶನ್‌ನಿಂದ ಬಚಾವ್ ಆಗ್ತಾರೆ, ಯಾವ ಸ್ಪರ್ಧಿಯ ಹಾರ್ಟ್‌ನ್ನು ಒಡೆದುಹಾಕ್ತಾರೋ ಅವರು ಎಲಿಮಿನೇಶನ್‌ಗೆ ನಾಮಿನೇಟ್ ಆಗ್ತಾರೆ.
ಗಿಲ್ಲಿ ನಟ ಅವರು, “ರಿಷಾ ಅವರನ್ನು ನಾನು ಮೊದಲ ಬಾರಿಗೆ ಭೇಟಿ ಮಾಡಿದ್ದೇನೆ, ಆದರೆ ಯಾವುದೋ ಜನ್ಮದ ಅನುಬಂಧ ಅನಿಸುತ್ತಿದೆ. ನಾನು ಮನೆಯಲ್ಲಿರುವ ಮೊಟ್ಟೆ, ಹಣ್ಣು ಕದಿಯುತ್ತೇನೆ, ಆದರೆ ನೀವು ನನ್ನ ಮನಸ್ಸನ್ನು ಕದಿಯುತ್ತೀರಿ. ಬಿಗ್ ಬಾಸ್ ಮನೆಯಲ್ಲಿರುವ ಎಲ್ಲ ಕ್ಯಾಮರಾದಲ್ಲಿಯೂ ನೀವು ಚೆನ್ನಾಗಿ ಕಾಣಿಸುತ್ತೀರಿ, ಫೋಟೋಜೆನಿಕ್ ಫೇಸ್ ನಿಮ್ಮದು, ಬಿಗ್ ಬಾಸ್ ಮನೆಯಲ್ಲಿರುವ ಕೇಸರಿ ಬಾತ್‌ಯಲ್ಲಿ ಗೋಡಂಬಿ ನೀವು, ಮೊಸರನ್ನದಲ್ಲಿ ನೀವು ದಾಳಿಂಬೆ ಇದ್ದ ಹಾಗೆ, ಗಾರ್ಡನ್ ಏರಿಯಾದಲ್ಲಿ ಮಾಡರ್ನ್ ಸುಂದರಿ” ಎಂದು ಹೊಗಳಿದ್ದರು.
25
ಮೂವರನ್ನು ನಾಮಿನೇಟ್ ಮಾಡಿದ ರಿಷಾ
ರಿಷಾ ಅವರು “ಕಾವ್ಯಾ ಶೈವ ಜೊತೆ ಜಾಸ್ತಿ ಮಾತನಾಡಿದೆ, ಆದರೆ ಅವರು ಮ್ಯಾನಿಪ್ಯುಲೇಟ್ ಮಾಡೋದು ಕಮ್ಮಿ ಮಾಡಬೇಕು” ಎಂದು ನಾಮಿನೇಟ್ ಮಾಡಿದ್ದಾರೆ. ರಾಶಿಕಾ ಅವರನ್ನು ಕೂಡ ನಾಮಿನೇಟ್ ಮಾಡಿದ್ದಾರೆ.
35
ಗಿಲ್ಲಿ ಹಾರ್ಟ್ ಒಡೆದು ಹಾಕಿದ ರಿಷಾ
ರಿಷಾ ಅವರು, “ನಾನು ಅಲ್ಲದೆ ಬೇರೆ ಯಾವ ಹುಡುಗಿ ಬಂದಿದ್ರೂ ಅಷ್ಟೇ ಅಟೆನ್ಶನ್ ಎಲ್ಲರಿಗೂ ಸಿಗುತ್ತಿತ್ತು. ಆದರೆ ಗಿಲ್ಲಿ ತುಂಬ ಚೆನ್ನಾಗಿ ನೋಡಿಕೊಂಡ, ಎಂಟರ್‌ಟೇನ್‌ಮೆಂಟ್ ಮಾಡಿದ. ಮನೆಯೊಳಗಡೆ ಹಾರ್ಟ್ ಕೊಡೋಣ ಅಂತ ಅಂದುಕೊಂಡಿದ್ದೀನಿ” ಎಂದು ಹೇಳಿ ಗಿಲ್ಲಿ ಹೃದಯವನ್ನು ಒಡೆದು ಹಾಕಿದ್ದಾರೆ.
ರಿಷಾ ಅವರು ಗಿಲ್ಲಿಯನ್ನು ನಾಮಿನೇಟ್ ಮಾಡಿದ್ದಕ್ಕೆ ಉಳಿದ ಎಲ್ಲರೂ ಖುಷಿಪಟ್ಟಿದ್ದಾರೆ. ಗಿಲ್ಲಿಯಂತೂ ಬೇಡ ಬೇಡ ಎಂದರೂ ಕೇಳದೆ ರಿಷಾ ಅವರು ನಾಮಿನೇಟ್ ಮಾಡಿದರು. “ಗಿಲ್ಲಿ ಯಾವಾಗಲೂ ಕಾವು ಕಾವು ಅಂತಿದ್ದ, ಹಸಿದಿರೋ ಕೋಳಿಗೆ ಅಲ್ಲಲ್ಲಿ ಅಕ್ಕಿ ಹಾಕಿದರೆ ಹೇಗೆ ಹಿಂದೆ ಹಿಂದೆ ಹೋಗುತ್ತಿರುತ್ತದೆ, ಹಾಗೆ ಗಿಲ್ಲಿ ಕೋಳಿ, ಅಕ್ಕಿಕಾಳು ನೀವು” ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ.
55
ಕ್ಲೀನ್ ಶೇವ್ ಮಾಡಬೇಕಂತೆ
ಅದಾದ ಬಳಿಕ ಗಿಲ್ಲಿ ನಟ ಅವರು ಕಾವ್ಯ ಶೈವ ಮನಸ್ಸನ್ನು ಒಲಿಸಲು ನೋಡಿದ್ದಾರೆ. ಆದರೆ ಕಾವ್ಯ ಮಾತ್ರ ಮಾತನಾಡಿಲ್ಲ. “ಕ್ಲೀನ್ ಶೇವ್ ಮಾಡಿದ್ರೆ ಮಾತ್ರ ನಾನು ಮಾತನಾಡ್ತೀನಿ” ಎಂದು ಕಾವ್ಯ ಶೈವ ಹೇಳಿದಾಗ, ಗಿಲ್ಲಿ ಆರಂಭದಲ್ಲಿ ಒಪ್ಪಿಲ್ಲ. ಆದರೆ ಗಿಲ್ಲಿ ಕ್ಲೀನ್ ಶೇವ್ ಮಾಡೋಕೆ ಒಪ್ಪಿದ್ದು, ನಾಳೆ ಅವರು ಹೇಳಿದಂತೆ ಕೇಳ್ತಾರೋ ಇಲ್ಲವೋ ಎಂದು ಕಾದು ನೋಡಬೇಕಿದೆ.