ನೋಡಿದ್ದು, ಕೇಳಿದ್ದು ಸುಳ್ಳಾಗಬಹುದು; ಕನ್ನಡಿಗರನ್ನು ಕೆರಳಿಸಿದ್ದ ರಕ್ಷಿತಾ ಶೆಟ್ಟಿ ವಿಡಿಯೋ ಸತ್ಯ ಏನು?

Published : Nov 23, 2025, 12:24 PM IST

ಬೆಂಗಳೂರಿನಲ್ಲಿ ಒಮ್ಮೆ ರಕ್ಷಿತಾ ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ಆಗ ಡ್ರೈವರ್‌ಗೆ ನಿಮಗೆ ತುಳು ಬರಲ್ಲವಾ? ಮಂಗಳೂರಿನಲ್ಲಿ ನಮಗೆ ತುಳು ರಾಜ್ಯಭಾಷೆ. ನಮಗ್ಯಾಕೆ ಕನ್ನಡ ಬೇಕು ಎಂದು ರಕ್ಷಿತಾ ಶೆಟ್ಟಿ ಪ್ರಶ್ನೆ ಮಾಡಿದ್ದರು. ರಕ್ಷಿತಾ ಶೆಟ್ಟಿ ಮಾತು ಕೇಳಿ ಡ್ರೈವರ್, ನಮ್ಮ ಭಾಷೆ ಕನ್ನಡ ಎಂದಿದ್ದರು.

PREV
15
ವಿಡಿಯೋ ವೈರಲ್ ಆಗಿತ್ತು

ಈ ವಿಡಿಯೋ ವೈರಲ್ ಆಗಿತ್ತು. ರಕ್ಷಿತಾ ಅವರು ಕನ್ನಡ ವಿರೋಧಿ ಎಂದು ಹೇಳಲಾಗಿತ್ತು. ರಕ್ಷಿತಾ ಈ ಬಗ್ಗೆ ಮಾತನಾಡಬೇಕು ಎಂದು ಹೇಳಲಾಗಿತ್ತು. ಆದರೆ ಈ ವಿಡಿಯೋದ ಮುಂದುವರೆದ ಭಾಗ ಈಗ ವೈರಲ್‌ ಆಗ್ತಿದೆ. ಈ ಮೂಲಕ ಸತ್ಯ ಹೊರಬಿದ್ದಿದೆ.

25
ಕನ್ನಡದಿಂದಲೇ ಇಲ್ಲಿಗೆ ಬಂದ್ರು

ರಕ್ಷಿತಾ ಶೆಟ್ಟಿ ತಪ್ಪಾದ ಕನ್ನಡ ಮಾತುಗಳನ್ನಾಡಿದ್ದರಿಂದಲೇ ಬಿಗ್‌ ಬಾಸ್‌ ಶೋಗೆ ಬಂದಿದ್ದರು. ಬಿಗ್‌ ಬಾಸ್ ಶೋಗೆ ಬಂದಾಗಲೂ ಕನ್ನಡ ಕಲಿಯೋಕೆ ಬಂದಿದ್ದೀನಿ ಎಂದಿದ್ದರು. ಅಂದಹಾಗೆ ಬಿಗ್‌ ಬಾಸ್‌ ಶೋನಲ್ಲಿ ಆರಂಭದಲ್ಲಿ ಕಷ್ಟಪಟ್ಟು ಕನ್ನಡ ಮಾತನಾಡುತ್ತಿದ್ದ ರಕ್ಷಿತಾ, ಈಗ ಸಾಕಷ್ಟು ಕನ್ನಡ ವಾಕ್ಯಗಳನ್ನು ಮಾತನಾಡುತ್ತಾರೆ.

35
ಕನ್ನಡದ ಬಗ್ಗೆ ಹೇಳಿದ್ದೇನು?

ಮುಂದುವರೆದ ವಿಡಿಯೋದಲ್ಲಿ “ಮಂಗಳೂರಿನಲ್ಲಿ ಎಲ್ಲರೂ ತುಳು ಮಾತನಾಡುತ್ತಾರೆ, ಕನ್ನಡ ಮಾತನಾಡೋದು ಕಡಿಮೆ. ನಾನು ತುಳು ಭಾಷೆಗೆ ಎಷ್ಟು ಬೆಲೆ ಕೊಡ್ತೀನೋ ಅಷ್ಟೇ ಕನ್ನಡಕ್ಕೂ ಬೆಲೆ ಕೊಡ್ತೀನಿ. ನಾನು ಕನ್ನಡದಲ್ಲಿ ನಿರೂಪಣೆ ಮಾಡೋಣ ಅಂದರೆ ಅನುಶ್ರೀ ಇದ್ದಾರೆ. ನಾನು ಮುಂಬೈನಲ್ಲಿ ಹುಟ್ಟಿದೀನಿ. ಅನುಶ್ರೀ ಅವರು ಮಂಗಳೂರಿನಲ್ಲಿ ಹುಟ್ಟಿ ಬೆಳೆದರು” ಎಂದು ರಕ್ಷಿತಾ ಹೇಳಿದ್ದಾರೆ.

45
ಫೋನ್‌ ಮಾಡಿ, ಕನ್ನಡ ಮಾತಾಡೋಣ

“ನಾನು ಬೆಂಗಳೂರಿಗೆ ಬರೋದು ಅಪರೂಪ. ಬೆಂಗಳೂರಿನಲ್ಲಿರುವಾಗ ಬೇರೆಯವರ ಬಳಿ ಮಾತನಾಡುತ್ತ ಕನ್ನಡ ಬರುತ್ತದೆ. ಆದರೆ ನಾನು ಜಾಸ್ತಿ ಬೆಂಗಳೂರಿನಲ್ಲಿ ಇರೋದಿಲ್ಲ. ನೀವು ನನಗೆ ನಿತ್ಯವೂ ಫೋನ್‌ ಮಾಡಿ, ನಾನು ಕನ್ನಡದಲ್ಲಿ ಮಾತನಾಡ್ತೀನಿ” ಎಂದು ರಕ್ಷಿತಾ ಹೇಳಿದ್ದಾರೆ.

55
ಮಂಗಳೂರು ಟ್ರಿಪ್‌ ಮಾಡೋಣ

“ನೀವು ಈ ಆಟೋ ತಗೊಂಡು ಮಂಗಳೂರಿಗೆ ಬನ್ನಿ. ನಾವು ಮಂಗಳೂರು ಟ್ರಿಪ್‌ ಮಾಡೋಣ. ನನ್ನ ಹೆಸರು ಹೇಳಿದ್ರೆ ಸಾಕು, ಮಂಗಳೂರು ಪೂರ್ತಿ ತಿರುಗಾಡಬಹುದು” ಎಂದು ರಕ್ಷಿತಾ ಶೆಟ್ಟಿ ಹೇಳಿದ್ದರು.

Read more Photos on
click me!

Recommended Stories