DKD ವೇದಿಕೆಯಲ್ಲಿ ಸೀರೆಯುಟ್ಟ ನಾರಿಯ ಧಮಾಕಾ ಪರ್ಫಾಮೆನ್ಸ್​: ಅಪ್ಪು ಡಾನ್ಸ್​ಗೆ ಚಿಂದಿ ಉಡಾಯಿಸಿದ ಗೃಹಿಣಿ!

Published : Nov 23, 2025, 12:05 PM IST

ಜೀ ಕನ್ನಡದ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ ಗೃಹಿಣಿಯೊಬ್ಬರು ಸೀರೆಯಲ್ಲೇ ಪುನೀತ್ ರಾಜ್‌ಕುಮಾರ್ ಅವರ ಹಾಡಿಗೆ ಅದ್ಭುತವಾಗಿ ನೃತ್ಯ ಮಾಡಿದ್ದಾರೆ.ತೀರ್ಪುಗಾರರಾದ ಶಿವರಾಜ್‌ಕುಮಾರ್, ವಿಜಯ ರಾಘವೇಂದ್ರ ಮತ್ತು ರಚಿತಾ ರಾಮ್ ದಿಗ್ಭ್ರಮೆಗೊಂಡಿದ್ದು, ಶಿವಣ್ಣ  ಚಪ್ಪಾಳೆ ತಟ್ಟಿ ಶ್ಲಾಘಿಸಿದ್ದಾರೆ.

PREV
16
ಎಲ್ಲರಲ್ಲಿಯೂ ಪ್ರತಿಭೆ

ಪ್ರತಿಭೆ ಎನ್ನುವುದು ಯಾರಲ್ಲಿ ಹೇಗೆ ಅಡಗಿರುತ್ತದೆ ಎಂದು ಊಹಿಸುವುದೂ ಕಷ್ಟ. ಎಲ್ಲರಲ್ಲಿಯೂ ಒಂದೊಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಆದರೆ ಅದನ್ನು ಅನಾವರಣಗೊಳಿಸಲು ಅವರಿಗೆ ಒಂದು ವೇದಿಕೆ ಸಿಕ್ಕಿರುವುದಿಲ್ಲವಷ್ಟೇ. ಆದರೆ ಕೆಲವೇ ಕೆಲವು ಪ್ರತಿಭೆಗಳಿಗೆ ತಮ್ಮ ಟ್ಯಾಲೆಂಟ್​ ಪ್ರದರ್ಶಿಸುವ ಅವಕಾಶ ಹೇಗೋ ಸಿಕ್ಕಿಬಿಡುತ್ತದೆ. ಅಂಥ ಅದೃಷ್ಟವಂತ ಮಹಿಳೆಯೊಬ್ಬರ ಧಮಾಕಾ ಪರ್ಫಾಮೆನ್ಸ್​ ಡಾನ್ಸ್​ ಕರ್ನಾಟಕ ಡಾನ್ಸ್​ ವೇದಿಕೆಯಲ್ಲಿ ನೋಡಬಹುದಾಗಿದೆ.

26
ಅಪ್ಪು ಹಾಡಿಗೆ ಗೃಹಿಣಿ ಡಾನ್ಸ್​

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ Dance Karnataka Dance ವೇದಿಕೆಯಲ್ಲಿ ಗೃಹಿಣಿಯೊಬ್ಬರು ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರ 2008 ರಲ್ಲಿ ಬಿಡುಗಡೆಯಾದ 'ಬಿಂದಾಸ್' ಚಲನಚಿತ್ರದ ಥರ ಥರ ಥರ ಒಂಥರಾ ಹಾಡಿಗೆ ಸ್ಟೆಪ್​ ಹಾಕಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

36
ಸೀದಾ ಸಾದಾ ಸೀರೆ

ಸಾಮಾನ್ಯವಾಗಿ ಇಂಥ ನೃತ್ಯ ಮಾಡುವಾಗ, ವಿಭಿನ್ನ ರೀತಿಯ ಡ್ರೆಸ್​ ಹಾಕಲಾಗುತ್ತದೆ. ಅದಕ್ಕಾಗಿಯೇ ಸಂಪೂರ್ಣ ಲುಕ್​ ಚೇಂಜ್​ ಮಾಡಿಕೊಂಡು ಪ್ರದರ್ಶನ ನೀಡಲಾಗುತ್ತದೆ. ಆದರೆ, ಸೀದಾ ಸಾದಾ ಸೀರೆಯುಟ್ಟು ಈ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿದ್ದಾರೆ ಮಹಿಳೆ.

46
ತೀರ್ಪುಗಾರರ ಅಚ್ಚರಿ

Dance ಕರ್ನಾಟಕ Dance-2025 'ಮೆಗಾ ಆಡಿಷನ್'ನಲ್ಲಿ ಈ ದೃಶ್ಯ ಕಂಡು ಬಂದಿದೆ. ಇದನ್ನು ನೋಡಿ ತೀರ್ಪುಗಾರರಾಗಿರುವ ಶಿವರಾಜ್​ಕುಮಾರ್​, ವಿಜಯ ರಾಘವೇಂದ್ರ ಮತ್ತು ರಚಿತಾ ರಾಮ್​ ಅವರು ದಿಗ್ಭ್ರಮೆಗೊಂಡಿದ್ದಾರೆ.

56
ಶಿವಣ್ಣ ಶ್ಲಾಘನೆ

ಅಪ್ಪು ಮಾಡುವ ಡಾನ್ಸ್​ಗೆ ಸ್ಟೆಪ್​ ಹಾಕುವುದು ಅಷ್ಟು ಸುಲಭದ ಮಾತಲ್ಲ. ಆದರೆ ನೀವು ಅದನ್ನು ಸಾಧಿಸಿ ತೋರಿಸಿದ್ದೀರಿ ಎಂದು ಎದ್ದುನಿಂತು ಚಪ್ಪಾಳೆ ತಟ್ಟಿದ್ದಾರೆ ಶಿವರಾಜ್​ ಕುಮಾರ್​.

66
ಪ್ರತಿಭೆಗೆ ವಯಸ್ಸಿಲ್ಲ

Age ಅನ್ನೋದೊಂದು ನೆಪ... ಈ‌ ಪ್ರತಿಭೆ ಡ್ಯಾನ್ ಅಂತೂ ಯಪ್ಪಾ! ಎನ್ನುವ ಶೀರ್ಷಿಕೆ ಜೊತೆ ಜೀ ಕನ್ನಡ ಇದನ್ನು ಶೇರ್​ ಮಾಡಿದೆ. ವಯಸ್ಸಾದವರಲ್ಲಿ ಪ್ರತಿಭೆ ಇರುವುದು ದೊಡ್ಡ ವಿಷಯ ಅಲ್ಲವೇ ಅಲ್ಲ. ಆದರೆ, ಇಂಥ ಡ್ರೆಸ್​ನಲ್ಲಿ ಕೂಡ ಸಾಧಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಈ ಮಹಿಳೆ.

Read more Photos on
click me!

Recommended Stories