Gicchi Gili Gili Show ವಿಜೇತರ ಜೊತೆ ಮದುವೆ ಆಗೋಕೆ ರೆಡಿಯಾದ್ರಾ 'ಮಜಾ ಭಾರತ' ಶೋ ಮಾನಸಾ? ಸತ್ಯ ಏನು?

Published : Nov 23, 2025, 11:32 AM IST

ಗಿಚ್ಚಿ ಗಿಲಿಗಿಲಿ ಶೋ, ಮಜಾಭಾರತ ಶೋನಲ್ಲಿ ಭಾಗವಹಿಸಿದ್ದ ಜಗಪ್ಪ, ಸುಷ್ಮಿತಾ ಗೌಡ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಈ ಶೋನಲ್ಲಿ ಭಾಗವಹಿಸಿದ ಕೆಲವರು ಪ್ರೀತಿ ಮಾಡುತ್ತಿದ್ದಾರೆ ಎಂಬ ಗಾಸಿಪ್‌ ಆಗೀಗ ಹರಡುತ್ತಿರುತ್ತದೆ. ಈಗ ಇನ್ನೊಂದು ಜೋಡಿ ಹೆಸರು ಕೇಳಿ ಬರುತ್ತಿದೆ. 

PREV
15
ರಾಘವೇಂದ್ರ ಜೊತೆ ಗಾಸಿಪ್

ಈ ಹಿಂದೆ ಮಾನಸಾ, ರಾಘವೇಂದ್ರ ಪ್ರೀತಿ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಮಾನಸಾ ಮಾತನಾಡಿ, “ರಾಘವೇಂದ್ರ ನನ್ನ ತಮ್ಮನಿದ್ದಂತೆ. ಯಾರು ಈ ರೀತಿ ಗಾಸಿಪ್‌ ಸೃಷ್ಟಿ ಮಾಡಿದರು ಎನ್ನೋದು ಗೊತ್ತಿಲ್ಲ” ಎಂದು ಹೇಳಿದ್ದರು.

25
ಪೃಥ್ವಿ ಭಟ್‌, ಅಭಿಷೇಕ್‌ ಮದುವೆ

ಸೀರಿಯಲ್‌, ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಎಷ್ಟೋ ನಟ, ನಟಿಯರು ಪ್ರೀತಿಸಿ ಮದುವೆಯಾಗಿದ್ದಾರೆ. ಸರಿಗಮಪ ಖ್ಯಾತಿಯ ಪೃಥ್ವಿ ಭಟ್‌, ಅಭಿಷೇಕ್‌ ಅವರು ಕೂಡ ಪ್ರೀತಿಸಿ ಮದುವೆಯಾಗಿದ್ದರು.

35
ಶಿವಕುಮಾರ್‌ ಜೊತೆ ಮದುವೆನಾ?

ಅಂದಹಾಗೆ ಈಗ ಶಿವಕುಮಾರ್‌, ಮಾನಸಾ ಅವರು ಮದುವೆ ಆಗುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದೇ ತಿಂಗಳು ಇವರ ನಿಶ್ಚಿತಾರ್ಥ ಕೂಡ ಇದೆ ಎನ್ನಲಾಗುತ್ತಿದೆ. ಸದ್ಯ ಇವರ ನಿಶ್ಚಿತಾರ್ಥ ಎನ್ನಲಾಗುತ್ತಿರುವ ಆಹ್ವಾನ ಪತ್ರಿಕೆಯು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

45
ನೀ ಇರಲು ಜೊತೆಯಲಿ

ನೀ ಇರಲು ಜೊತೆಯಲಿ ಧಾರಾವಾಹಿಯಲ್ಲಿ ಮಾನಸಾ ಗುರುಸ್ವಾಮಿ ಅವರು ನಟಿಸುತ್ತಿದ್ದಾರೆ. ಈ ಹಿಂದೆ ಇವರು ಕೂಡ ಮಜಾಭಾರತ, ಗಿಚ್ಚಿ ಗಿಲಿಗಿಲಿ ಶೋನಲ್ಲಿ ಭಾಗವಹಿಸಿದ್ದರು. ಕಾಮಿಡಿ ಶೋನಲ್ಲಿಯೇ ಭಾಗವಹಿಸಿ ಹೆಸರು ಗಳಿಸಿದ್ದಾರೆ.

55
ಸತ್ಯ ಏನು?

ಶಿವಕುಮಾರ್‌, ಮಾನಸಾ ಅವರು ನಿಜಕ್ಕೂ ನಿಶ್ಚಿತಾರ್ಥ ಮಾಡಿಕೊಳ್ತಿದ್ದಾರಾ ಎಂಬ ಬಗ್ಗೆ ಬಗ್ಗೆ ಮಾಹಿತಿ ಇಲ್ಲ, ಈ ಬಗ್ಗೆ ಇವರಿಬ್ಬರು ಯಾವುದೇ ಮಾಹಿತಿ ನೀಡಿಲ್ಲ. ಅಂದಹಾಗೆ ಅರ್ಥವಿಲ್ಲದಂತೆ ಕೆಲವೊಮ್ಮೆ ಗಾಸಿಪ್‌ಗಳು ಹುಟ್ಟಿಕೊಳ್ಳುತ್ತವೆ. ಅಂದಹಾಗೆ ಸೋಶಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯೆಯನ್ನು ನೀಡಿಲ್ಲ.

Read more Photos on
click me!

Recommended Stories