BBK 12: ಕಿಚ್ಚ ಸುದೀಪ್‌ ಇದ್ರೂ ಕ್ಯಾರೆ ಎನ್ನಲಿಲ್ಲ. ಅಸಭ್ಯ ಎಂದು ಕಿತ್ತಾಡ್ಕೊಂಡ ರಜತ್‌, ಧ್ರುವಂತ್!

Published : Dec 06, 2025, 03:11 PM IST

Bigg Boss Kannada 12: ಈ ವಾರ ಯಾವೆಲ್ಲ ವಿಷಯಗಳು ಚರ್ಚೆ ಆಗಲಿವೆ ಎಂಬ ಪ್ರಶ್ನೆ ಇತ್ತು. ಈಗ ವಾಹಿನಿಯು ಹೊಸ ಪ್ರೋಮೋ ರಿಲೀಸ್‌ ಮಾಡಿದ್ದು ಧ್ರುವಂತ್‌ ಹಾಗೂ ರಜತ್‌ ಅವರ ನಡುವೆ ವಾದ-ವಿವಾದ ಆಗಿವೆ. ಆಗ ಒಂದಿಷ್ಟು ಪ್ರಶ್ನೆಗಳು ಇವೆ ಎಂದು ಕಿಚ್ಚ ಸುದೀಪ್‌ ಅವರು ಕಿಚ್ಚನ ಪಂಚಾಯಿತಿಯಲ್ಲಿ ಹೇಳಿದ್ದಾರೆ.

PREV
15
ಮನೆ ಬಿಟ್ಟು ಹೋಗಬೇಕು ಎನ್ನೋದು ಯಾಕೆ?

ಮನೆ ಬಿಟ್ಟು ಹೋಗುವಂಥದ್ದು ಏನಾಯ್ತು ಎಂದು ವೀಕ್ಷಕರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಧ್ರುವಂತ್‌ ಅವರು ಉತ್ತರ ನೀಡಿದ್ದಾರೆ.

“ನಿರಂತರವಾಗಿ ಕೆಲವೊಂದಿಷ್ಟು ಆರೋಪಗಳನ್ನು ಮಾಡಲಾಯ್ತು, ಅದರಲ್ಲಿರುವ ಡ್ಯಾಮೇಜ್‌ ನನಗೆ ಬೇಕಾ?” ಎಂದು ಧ್ರುವಂತ್‌ ಅವರು ಹೇಳಿದ್ದಾರೆ.

25
ಅಸಭ್ಯವಾಗಿ ವರ್ತಿಸುತ್ತಾರಾ?

ಆಗ ರಜತ್‌ ಅವರು, “ಧ್ರುವಂತ್‌ ಅವರೇ ಡ್ಯಾಮೇಜ್ ಮಾಡಿಕೊಳ್ಳುತ್ತಿದ್ದಾರೆ. ಅಸಭ್ಯವಾಗಿ ಮಾತನಾಡೋದು, ಅಸಭ್ಯವಾಗಿ ವರ್ತಿಸೋದು ಮಾಡುತ್ತಿದ್ದಾನೆ” ಎಂದಿದ್ದಾರೆ. ಈ ಜಗಳ ಮತ್ತೆ ಮುಂದುವರೆದಿದೆ. ಕೊನೆಯಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.

35
ಇದು ತಪ್ಪು ಹೇಳಿಕೆ

ಧ್ರುವಂತ್‌, “ಇದು ತಪ್ಪು ಹೇಳಿಕೆ” ಎಂದಿದ್ದಾರೆ. ಆಗ ರಜತ್‌ ಅವರು, “ನಾನು ಮಾತನಾಡುವಾಗ ತಡೆದುಕೋ” ಎಂದಿದ್ದಾರೆ. ಆಗ ಧ್ರುವಂತ್‌, “ನೀನು ಇದನ್ನೆಲ್ಲ ನನ್ನ ಹತ್ರ ಮಾತಾಡಬೇಡ. ಎಷ್ಟರಲ್ಲಿ ಇರಬೇಕೋ ಅಷ್ಟು ಇರು” ಎಂದು ಹೇಳಿದ್ದಾರೆ.

45
ಜಗಳ ಆಡಿಕೊಂಡ ರಜತ್‌, ಧ್ರುವಂತ್‌

ಕಿಚ್ಚ ಸುದೀಪ್‌ ಮುಂದೆ ಧ್ರುವಂತ್‌, ರಜತ್‌ ಅವರು ಜಗಳ ಆಡಿಕೊಂಡಿದ್ದಾರೆ. ಇಷ್ಟುದಿನಗಳ ಕಾಲ ವೀಕ್‌ ಡೇಸ್‌ಗಳಲ್ಲಿ ಕೂಗಾಡಿಕೊಂಡು, ಜಗಳ ಆಡುತ್ತಿದ್ದವರು, ಈಗ ಕಿಚ್ಚ ಸುದೀಪ್‌ ಮುಂದೆ ಕೂಗಾಡಿದ್ದಾರೆ. ಆಗ ಸುದೀಪ್‌ ಏನು ಹೇಳಲಿದ್ದಾರೆ ಎಂದು ಕಾದು ನೋಡಬೇಕಿದೆ.

55
ಧ್ರುವಂತ್‌ ವರ್ತನೆ ಬಗ್ಗೆ ಸುದೀಪ್‌ ಏನಂದ್ರು?

ಧ್ರುವಂತ್‌ ಅವರು ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇವರ ಜೊತೆ ಅವರ ಜಗಳ ಆಗಿದೆ. ರಕ್ಷಿತಾ ಮುಖವಾಡ ಹಾಕಿಕೊಂಡಿದ್ದಾಳೆ, ವಯಸ್ಸಿಗೆ ತಕ್ಕಂತೆ ಮಾತನಾಡೋದಿಲ್ಲ, ವರ್ತಿಸೋದಿಲ್ಲ ಎಂದಿದ್ದರು. ಇನ್ನು ಜಗಳ ಆಡುವಾಗ ವಿಚಿತ್ರವಾಗಿ ಡ್ಯಾನ್ಸ್‌ ಕೂಡ ಮಾಡಿದ್ದರು. ಇವೆಲ್ಲವೂ ಟ್ರೋಲ್‌ ಆಗಿತ್ತು.

ಕಿಚ್ಚ ಸುದೀಪ್‌ ಏನು ಹೇಳ್ತಾರೆ? ಎಪಿಸೋಡ್‌ ನೋಡಬೇಕಿದೆ

Read more Photos on
click me!

Recommended Stories