ಕಡಲು,ಸೂರ್ಯ ಹಾಗೂ ನನ್ನ ಕಿರಣಾ… ಪತಿ ಜೊತೆ ಶ್ವೇತಾ ಚೆಂಗಪ್ಪ ಸ್ಪೆಷಲ್ ಡೇಟ್

Published : Dec 06, 2025, 02:50 PM IST

ಕನ್ನಡ ಕಿರುತೆರೆಯಲ್ಲಿ ನಟಿಯಾಗಿ, ನಿರೂಪಕಿಯಾಗಿ ಜನಪ್ರಿಯತೆ ಪದೆದ ಶ್ವೇತಾ ಚೆಂಗಪ್ಪ ಇದೀಗ ಗಂಡನ ಜೊತೆಗಿನ ಬೀಚ್ ಫೋಟೋಸ್ ಶೇರ್ ಮಾಡಿದ್ದಾರೆ. ಜೊತೆಗೆ ಡಿಸೆಂಬರ್ 4 ಆಚರಿಸಲು ವಿಶೇಷವಾದ ದಿನ ಎಂದು ಬರೆದುಕೊಂಡಿದ್ದಾರೆ ಸುಂದರಿ.

PREV
16
ಶ್ವೇತಾ ಚೆಂಗಪ್ಪ

ಕನ್ನಡ ಕಿರುತೆರೆಗೆ ನಟಿಯಾಗಿ ಎಂಟ್ರಿಕೊಟ್ಟು, ಬಳಿಕ ನಿರೂಪಕಿಯಾಗಿ ಮೋಡಿ ಮಾಡಿ, ಕಳೆದ ಇಪ್ಪತ್ತು ವರ್ಷಗಳಿಂದ ಮನರಂಜನೆ ನೀಡುತ್ತಿರುವ ನಟಿ ಶ್ವೇತಾ ಚೆಂಗಪ್ಪ. ಇದೀಗ ವಿಶೇಷ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

26
ಸ್ಪೆಷಲ್ ಫೋಟೋಸ್

ಹೌದು, ಶ್ವೇತಾ ಕೆಲ ದಿನಗಳ ಹಿಂದೆ ತಮ್ಮ ಇನ್’ಸ್ಟಾಗ್ರಾಂನಲ್ಲಿ ಗಂಡನ ಜೊತೆಗಿನ ಮುದ್ದಾದ ಅನ್ನೋದಕ್ಕಿಂತ ರೊಮ್ಯಾಂಟಿಕ್ ಬೀಚ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇದು ವಿಶೇಷ ದಿನದ ಸಲುವಾಗಿ ಜೋಡಿ ಹಂಚಿಕೊಂಡ ವಿಶೇಷ ಫೋಟೊ ಆಗಿದೆ.

36
ಗಂಡನಿಗೆ ಪ್ರೀತಿಯ ವಿಶಸ್

ಕಡಲು,ಸೂರ್ಯ ಹಾಗೂ ನನ್ನ ಕಿರಣಾ…"ಡಿಸೆಂಬರ್ 4" ನೆನಪಿಟ್ಟುಕೊಳ್ಳಲು ಮತ್ತು ಆಚರಿಸಲು ಬಹಳ ವಿಶೇಷವಾದ ದಿನ ಎಂದು ನಟಿ ಕ್ಯಾಪ್ಶನ್ ಹಾಕಿದ್ದಾರೆ. ಕಾಮೆಂಟ್ ಸೆಕ್ಷನ್ ನಲ್ಲಿ ಜನ ಎಂಗೇಜ್ ಮೆಂಟ್ ಆನಿವರ್ಸರಿಯ ಶುಭಾಶಯಗಳು ಎಂದಿದ್ದಾರೆ.

46
ಕಪ್ಪು ಉಡುಗೆಯಲಿ ಶ್ವೇತಾ

ಕೂರ್ಗಿನ ಬ್ಯೂಟಿ ಶ್ವೇತಾ ಚೆಂಗಪ್ಪ ಕಪ್ಪು ಬಣ್ಣದ ಟಾಪ್ ಮತ್ತು ಪ್ಯಾಂಟ್ ಧರಿಸಿದ್ದು, ತುಂಬಾನೆ ಸುಂದರವಾಗಿ, ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಗಂಡನ ಕೈಹಿಡಿದು, ಕಣ್ಣಲ್ಲಿ ಕಣ್ಣಿಟ್ಟು ನೋಡುವ, ನೀರಿನ ಅಲೆಗಳ ಜೊತೆ ಆಡುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

56
ನಮ್ಮ ಕಾದಂಬರೀನಾ?

ಇನ್ನು ಕಾಮೆಂಟ್ ನಲ್ಲಿ ಒಬ್ಬರು ಅಭಿಮಾನಿ ಶ್ವೇತಾ ಅವರ ಉಡುಪನ್ನು ನೋಡಿ, ಇವರು ನಮ್ಮ ಕಾದಂಬರೀನಾ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಹಲವು ಜನರು ಮುದ್ದಾದ ಜೋಡಿಗಳು, ಯಾವುದೇ ದೃಷ್ಟಿ ಬೀಳದೇ ಇರಲಿ ಎಂದು ಹಾರೈಸಿದ್ದಾರೆ.

66
ಶ್ವೇತಾ ಚೆಂಗಪ್ಪ ಮದುವೆ

ಶ್ವೇತಾ ಚೆಂಗಪ್ಪ ಅವರು ಕಿರಣ್ ಅಪ್ಪಚ್ಚು ಎನ್ನುವ ಕೊಡಗಿನವರನ್ನೆ ಪ್ರೀತಿಸಿ ಮದುವೆಯಾದರು. ಕಿರಣ್ ಅವರು ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ದಂಪತಿಗಳಿಗೆ ಜಿಯಾನ್ ಎನ್ನುವ ಏಳು ವರ್ಷದ ಮುದ್ದಾದ ಮಗ ಕೂಡ ಇದ್ದಾನೆ.

Read more Photos on
click me!

Recommended Stories