ಸರಿಗಮಪ ಖ್ಯಾತಿಯ ಗಾಯಕಿ ಸುಹಾನ ಸೈಯದ್, ತಮ್ಮ ಪತಿ ನಿತಿನ್ ಶಿವಾಂಶ್ ಜೊತೆ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ. ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಮದುವೆಯಾಗಬೇಕೆಂಬ ತಮ್ಮ ಪ್ರಾರ್ಥನೆ ರಾಯರ ಕೃಪೆಯಿಂದ ನೆರವೇರಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸರಿಗಮಪ ರಿಯಾಲಿಟಿ ಶೋ ಖ್ಯಾತಿಯ ಗಾಯಕಿ ಸುಹಾನ ಸೈಯದ್ ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದುಕೊಂಡಿದ್ದಾರೆ. ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ನಂತ್ರ ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಸುಹಾನಾ ಸೈಯದ್ ಹಂಚಿಕೊಂಡಿದ್ದಾರೆ.
25
ಮದುವೆ
ನಮ್ಮಿಬ್ಬರ ಮದುವೆ ಸುಲಭ ಅಲ್ಲ ಎಂದು ಗೊತ್ತಿದ್ರೂ ರಾಯರಿಂದ ಸಣ್ಣ ಪವಾಡವನ್ನು ಕೇಳುತ್ತಿದೆ. ಎರಡು ಕುಟುಂಬಗಳ ಆಶೀರ್ವಾದದೊಂದಿಗೆ ನಮ್ಮಿಬ್ಬರ ಮದುವೆ ಆಗಬೇಕೆಂದು ಮಂತ್ರಾಲಯಕ್ಕೆ ಬಂದಾಗೆಲ್ಲಾ ಕೇಳಿಕೊಳ್ಳುತ್ತಿದೆ. ಅದು ಇದೀಗ ನೆರವೇರಿದೆ.
35
ಮಂತ್ರಾಲಯಕ್ಕೆ ಭೇಟಿ
ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಈ ಹಿಂದೆಯೂ ಹಲವು ಬಾರಿ ಮಂತ್ರಾಲಯಕ್ಕೆ ಭೇಟಿ ನೀಡಿರುವ ಮಾಹಿತಿಯನ್ನು ಸುಹಾನಾ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಬಾಲ್ಯದ ಗೆಳೆಯ ನಿತಿನ್ ಶಿವಾಂಶ್ ಅವರ ಜೊತೆ ಮಂತ್ರಮಾಂಗಲ್ಯ ಮೂಲಕ ಮದುವೆಯಾಗಿದ್ದರು. ಇದೀಗ ಪತಿ ನಿತಿನ್ ಜೊತೆ ಮಂತ್ರಾಲಯಕ್ಕೆ ಬಂದಿದ್ದಾರೆ.
ನಮ್ಮಿಬ್ಬರ ಮದುವೆಯಾಗಿದ್ದು, ನಿತಿನ್ ಜೊತೆಯಲ್ಲಿ ಸಂತೋಷವಾಗಿದ್ದೇನೆ. ನಮ್ಮ ಎರಡೂ ಕುಟುಂಬಗಳು ಸಹ ಒಂದಾಗಿವೆ. ನನ್ನ ಪ್ರಾಮಾಣಿಕ ಕನಸು ನನಸು ಆಗಿದೆ. ನನ್ನ ಹೃದಯವು ಕೃತಜ್ಞತೆಯಿಂದ ತುಂಬಿದೆ. ಇದು ನನ್ನ ಪ್ರಾರ್ಥನೆಗೆ ಉತ್ತರ ಎಂದು ಸುಹಾನಾ ಸೈಯದ್ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
55
ಅಕ್ಟೋಬರ್ 17ರಂದು ಮದುವೆ
ರಿಯಾಲಿಟಿ ಶೋನಲ್ಲಿ ಹಿಜಾಬ್ ಧರಿಸಿಕೊಂಡು ಭಕ್ತಿ ಗೀತೆ ಹಾಡಿದ್ದಕ್ಕೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ನಂತರ ಸುಹಾನಾ ಮದುವೆ ವಿಷಯವೂ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಅಕ್ಟೋಬರ್ 17ರಂದು ಬೆಂಗಳೂರಿನ ಹೊರವಲಯದಲ್ಲಿ ನಿತಿನ್ ಮತ್ತು ಸುಹಾನಾ ಮದುವೆಯಾಗಿತ್ತು.