BBK 12: ಛೇ...ಅನ್ಯಾಯವಾಗಿ ಮಾಳು ನಿಪನಾಳ ಕೂದಲನ್ನು ಬಲಿ ಕೊಟ್ರಿ; Viral Video ಹೇಳ್ತಿರೋ ಸತ್ಯವೇ ಬೇರೆ

Published : Dec 13, 2025, 01:15 PM IST

Bigg Boss Kannada Season 12: ಈ ಬಾರಿ ವಿಲನ್‌ ಆಟ ನಡೆಯುತ್ತಿದೆ. ವಿಲನ್‌ ಹೇಳಿದಂತೆ ಬಿಗ್‌ ಬಾಸ್‌ ಸ್ಪರ್ಧಿಗಳು ಕೇಳಬೇಕು. ಆದರೆ ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ತಪ್ಪಾಗಿ ತಿಳಿದುಕೊಂಡಿದ್ದಕ್ಕೆ ಮಾಳು ನಿಪನಾಳ ಬಲಿಯಾದ್ರಾ ಎಂಬ ಪ್ರಶ್ನೆ ಮೂಡುತ್ತಿದೆ.

PREV
15
ಚಾಲೆಂಜ್‌ ಗೆದ್ದರೆ ಪಾಯಿಂಟ್ಸ್‌ ಸಿಗುತ್ತದೆ

ಅಂದಹಾಗೆ ಬಿಗ್‌ ಬಾಸ್‌ ಮನೆಯಲ್ಲಿ ಎರಡು ಟೀಂಗಳು ಇವೆ. ಇದಕ್ಕೆ ರಜತ್‌, ಅಶ್ವಿನಿ ಗೌಡ ಟೀಂ ಲೀಡರ್.‌ ವಿಲನ್‌ ಒಂದು ಚಾಲೆಂಜ್‌ ಕೊಡ್ತಾರೆ, ಅದರಲ್ಲಿ ಯಾರು ಮೊದಲು ಮಾಡ್ತೀವಿ ಎಂದು ಬಜರ್‌ ಒತ್ತುತ್ತಾರೋ ಅವರೇ ಚಾಲೆಂಜ್‌ ಗೆಲ್ಲಬೇಕು. ಆಗ ಅವರಿಗೆ ಪಾಯಿಂಟ್ಸ್‌ ಸಿಗುವುದು.

25
ರಜತ್‌ ಮಾತು ಕೇಳಲಿಲ್ಲ

ತಾನು ಕೊಟ್ಟ ಹೇರ್‌ಸ್ಟೈಲ್‌ ನಡುವೆ ಒಬ್ಬ ಪುರುಷ ಸ್ಪರ್ಧಿ ಮಾಡಿಸಬೇಕು ಎಂದು ಅಶ್ವಿನಿ ಗೌಡ ಹಾಗೂ ರಜತ್‌ ಅವರಿಗೆ ವಿಲನ್‌ ಚಾಲೆಂಜ್‌ ನೀಡಿದ್ದರು. ಆಗ ರಜತ್‌ ಅವರು ಮೊದಲು ಬಜರ್‌ ಒತ್ತಿದ್ದರು. ಆದರೆ ಅಶ್ವಿನಿ ಗೌಡ ಅವರು ನಾನೇ ಮೊದಲು ಬಜರ್‌ ಒತ್ತಿದೆ ಎಂದು ಹೇಳಿದರು. ರಜತ್‌ ಅವರು ನಾನು ಬಜರ್‌ ಒತ್ತಿದೆ, ಅಶ್ವಿನಿ ಅವರ ಬಜರ್ ಸೌಂಡ್‌ ಬರಲಿಲ್ಲ‌ ಎಂದು ಹೇಳಿದರೂ ಪ್ರಯೋಜನವಾಗಲಿಲ್ಲ. ಚೈತ್ರಾ ಕೂಡ ಅಶ್ವಿನಿಗೆ ಬೆಂಬಲ ಕೊಟ್ಟರು.

35
ಗುಂಡು ಹೊಡೆಸಿಕೊಳ್ಳೋ ಟಾಸ್ಕ್‌

ಈಗಾಗಲೇ ಕೆಲವು ಸೀಸನ್‌ನಲ್ಲಿ ಗುಂಡು ಹೊಡೆಸಿಕೊಳ್ಳೋ ಟಾಸ್ಕ್‌ ಇತ್ತು. ಆಗ ರಜತ್‌, ಕಾರ್ತಿಕ್‌ ಮಹೇಶ್‌ ಕೂಡ ಗುಂಡು ಹೊಡೆಸಿಕೊಂಡಿದ್ದರು. ಈಗ ಮಾಳು ನಿಪನಾಳ ಅವರು ಡ್ರ್ಯಾಗನ್‌ ಹೇರ್‌ಕಟ್‌ ಮಾಡಿಸಿಕೊಂಡಿದೆ. ನನಗೆ ಯಾವುದೇ ಶೂಟಿಂಗ್‌ ಇಲ್ಲ, ನಾನು ಹೇರ್‌ಕಟ್‌ ಮಾಡಿಸಿಕೊಳ್ತೀನಿ ಎಂದಿದ್ದಾರೆ.

45
ಮಾಳು ಹೊಸ ಹೇರ್‌ಸ್ಟೈಲ್

ಮಾಳು ನಿಪನಾಳ ಅವರು ವಿಲನ್‌ ಹೇಳಿದಂತೆ ಹೇರ್‌ಸ್ಟೈಲ್‌ ಮಾಡಿಸಿಕೊಂಡರು. ಎಲ್ಲರೂ ಈ ರೀತಿ ಹೇರ್‌ಸ್ಟೈಲ್‌ ಮಾಡಿಕೊಳ್ಳೋಕೆ ಒಪ್ಪೋದಿಲ್ಲ. ವಿಲನ್‌ ಮುಂದಿನ ಆದೇಶದವರೆಗೆ ಇದೇ ರೀತಿಯ ಹೇರ್‌ಸ್ಟೈಲ್‌ನಲ್ಲಿ ಇರಬೇಕು.

55
ಬಜರ್‌ ಹೊಡೆದಿರುವ ವಿಡಿಯೋ ವೈರಲ್‌

ಈಗ ಸೋಶಿಯಲ್‌ ಮೀಡಿಯಾದಲ್ಲಿ ಅಶ್ವಿನಿ ಗೌಡ, ರಜತ್‌ ಅವರು ಬಜರ್‌ ಹೊಡೆದಿರುವ ವಿಡಿಯೋ ವೈರಲ್‌ ಆಗ್ತಿದೆ. ಅಶ್ವಿನಿ ಅವರ ಬಜರ್‌ ಸೌಂಡ್‌ ಆಗಲಿಲ್ಲ, ರಜತ್‌ ಅವರೇ ಬಜರ್‌ ಒತ್ತಿದ್ದು, ಅನ್ಯಾಯವಾಗಿ ಮಾಳು ನಿಪನಾಳ ಅವರ ಕೂದಲನ್ನು ಬಲಿ ಕೊಟ್ಟರು ಎನ್ನಲಾಗ್ತಿದೆ.

Read more Photos on
click me!

Recommended Stories