ವರ್ತೂರ್ ಸಂತೋಷ್ ಮಹತ್ವದ ಘೋಷಣೆ, ಸುದೀಪ್ ಸರ್ ಇರೋವರೆಗೆ ರನ್ನರ್ ಅಪ್ ಗೆ 10 ಲಕ್ಷ

Published : Dec 13, 2025, 01:13 PM IST

ಈ ಹಿಂದೆ ಬಿಗ್ ಬಾಸ್ ರನ್ನರ್ ಅಪ್ ಗೆ 10 ಲಕ್ಷ ಘೋಷಣೆ ಮಾಡಿ, ನಂತ್ರ ಅದನ್ನು 2 ಲಕ್ಷಕ್ಕೆ ಇಳಿಸಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರ್ ಸಂತೋಷ್ ಈಗ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ.

PREV
17
ವರ್ತೂರ್ ಸಂತೋಷ್ ಮೊದಲ ಘೋಷಣೆ

ಬಿಗ್ ಬಾಸ್ ಕನ್ನಡ ಸೀಸನ್ 12ರ ರಿಯಾಲಿಟಿ ಶೋ ಆರಂಭವಾದ ಕೆಲ ದಿನಗಳಲ್ಲಿಯೇ ವರ್ತೂರ್ ಸಂತೋಷ್ ಮಹತ್ವದ ಹೇಳಿಕೆ ನೀಡಿದ್ದರು. ಈ ಬಾರಿ ಬಿಗ್ ಬಾಸ್ ರನ್ನರ್ ಅಪ್ ಗೆ ತಮ್ಮ ಕಡೆಯಿಂದ 10 ಲಕ್ಷ ನೀಡುವುದಾಗಿ ಘೋಷಣೆ ಮಾಡಿದ್ದರು.

27
ವರ್ತೂರ್ ಸಂತೋಷ್ ಇಟ್ಟಿದ್ದ ಷರತ್ತು

ಹಳ್ಳಿಕಾರ್ ಸಂತೋಷ್ ಎಂದೇ ಹೆಸರು ಪಡೆದಿರುವ ವರ್ತೂರ್ ಸಂತೋಷ್, ರನ್ನರ್ ಅಪ್ ಗಳಿಗೆ 10 ಲಕ್ಷ ನೀಡ್ತೇನೆ, ಆದ್ರೆ ನನ್ನದೊಂದು ಷರತ್ತಿದೆ ಎಂದ್ದಿದ್ದರು. ಹಳ್ಳಿಕಾರ್ ಎತ್ತುಗಳಿಗೆ ಬಿಗ್ ಬಾಸ್ ಮನೆಗೆ ಪ್ರವೇಶ ನೀಡ್ಬೇಕು, ಇಡೀ ರಾಜ್ಯಕ್ಕೆ ಹಳ್ಳಿಕಾರ್ ಎತ್ತುಗಳನ್ನು ಪರಿಚಯಿಸಬೇಕು ಎಂದಿದ್ದರು.

37
ಒಪ್ಪಿಗೆ ನೀಡದ ಕಲರ್ಸ್ ಕನ್ನಡ

ಈ ಮಧ್ಯೆ ಕಲರ್ಸ್ ಕನ್ನಡ ಬಿಗ್ ಬಾಸ್ ಮನೆಗೆ ಹಳ್ಳಿಕಾರ್ ಎತ್ತುಗಳ ಪ್ರವೇಶಕ್ಕೆ ಒಪ್ಪಿಗೆ ನೀಡಿಲ್ಲ. ಇದೇ ಕಾರಣಕ್ಕೆ ವರ್ತೂರ್ ಸಂತೋಷ್ ತಮ್ಮ ನಿರ್ಧಾರ ಬದಲಿಸಿದ್ದಾರೆ. ರನ್ನರ್ ಅಪ್ ಗೆ ನೀಡುವ ನಗದಿನ ಬಗ್ಗೆ ಈಗ ಮತ್ತೊಂದು ಹೇಳಿಕೆ ನೀಡಿದ್ದಾರೆ.

47
ಈ ಬಾರಿ 2 ಲಕ್ಷ ನೀಡ್ತಾರೆ ವರ್ತೂರ್ ಸಂತೋಷ್

ಹಳ್ಳಿಕಾರ್ ಎತ್ತುಗಳಿಗೆ ಬಿಗ್ ಬಾಸ್ ಮನೆಗೆ ಪ್ರವೇಶ ಇಲ್ಲ ಎನ್ನುವ ಸ್ಪಷ್ಟನೆ ಸಿಕ್ಕಿದೆ. ಆದ್ರೆ ನಾನು ನನ್ನ ಮಾತಿಗೆ ಬದ್ಧನಾಗಿದ್ದೇನೆ. ಈ ಬಾರಿ ರನ್ನರ್ ಅಪ್ ಗೆ 2 ಲಕ್ಷ ನೀಡ್ತೇನೆ ಎಂದು ವರ್ತೂರ್ ಸಂತೋಷ್ ಸ್ಪಷ್ಟನೆ ನೀಡಿದ್ದಾರೆ.

57
ಸುದೀಪ್ ಇರುವವರೆಗೂ ಸಿಗಲಿದೆ 10 ಲಕ್ಷ

ಇಷ್ಟೇ ಅಲ್ಲ ವರ್ತೂರ್ ಪ್ರಕಾಶ್ ಇನ್ನೊಂದು ಘೋಷಣೆಯನ್ನು ಇದೇ ಸಂದರ್ಭದಲ್ಲಿ ಮಾಡಿದ್ದಾರೆ. ಬಿಗ್ ಬಾಸ್ ನಲ್ಲಿ ಕಿಚ್ಚ ಸುದೀಪ್ ಇರುವವರೆಗೂ ವರ್ತೂರ್ ಸಂತೋಷ್ 10 ಲಕ್ಷ ನಗದನ್ನು ರನ್ನರ್ ಅಪ್ ಗಳಿಗೆ ನೀಡಲಿದ್ದಾರೆ.

67
ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರ್ ಸಂತೋಷ್

ಬಿಗ್ ಬಾಸ್ ಕನ್ನಡ 10ರ ಸೀಸನ್ ನಲ್ಲಿ ವರ್ತೂರ್ ಸಂತೋಷ್ ಕಾಣಿಸಿಕೊಂಡಿದ್ದರು. ಹುಲಿ ಉಗುರು ಪ್ರಕರಣ ಆಗ್ಲೇ ಚರ್ಚೆಗೆ ಬಂದಿತ್ತು. ಬಿಗ್ ಬಾಸ್ ಮನೆಯಲ್ಲಿರುವಾಗ್ಲೇ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಬಿಗ್ ಬಾಸ್ ಮನೆಯಿಂದ ವಾಪಸ್ ಬಂದ್ಮೇಲೆ ವರ್ತೂರ್ ಸಂತೋಷ್ ಪ್ರಸಿದ್ಧಿ ಹೆಚ್ಚಾಗಿದೆ. ಯುವಕರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಅವರು ಆಯೋಚಿಸುತ್ತಿದ್ದಾರೆ.

77
ಬಿಗ್ ಬಾಸ್ 12ರಲ್ಲಿ ಏನಾಗ್ತಿದೆ?

ಬಿಗ್ ಬಾಸ್ ಕನ್ನಡ ಸೀಸನ್ 12ರ ಈ ವಾರ ಎಲಿಮಿನೇಷನ್ ಇಲ್ಲ. ವಿಲನ್ ಎಂಟ್ರಿ ನಂತ್ರ ಮನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಕ್ಯಾಪ್ಟನ್ ಗಾಗಿ ಜಿದ್ದಾಜಿದ್ದಿ ಪೈಪೋಟಿ ನಡೆದಿದೆ. ಗಿಲ್ಲಿ, ಅಶ್ವಿನಿ, ರಾಘು ಹಾಗೂ ರಕ್ಷಿತಾ ಹೆಸರುಗಳು ಎಲ್ಲರ ಬಾಯಲ್ಲಿ ಕೇಳಿ ಬರ್ತಿವೆ. ಸೆಲೆಬ್ರಿಟಿಗಳೂ ಗಿಲ್ಲಿ, ರಕ್ಷಿತಾಗೆ ಸಪೋರ್ಟ್ ಮಾಡ್ತಿದ್ದಾರೆ. ಯಾರು ಬಿಗ್ ಬಾಸ್ ಕಪ್ ಎತ್ತಿ ಹಿಡಿತಾರೆ, ಯಾರಿಗೆ ವರ್ತೂರ್ ಸಂತೋಷ್ ನೀಡುವ 2 ಲಕ್ಷ ಸಿಗುತ್ತೆ ಅನ್ನೋದನ್ನು ಕಾದು ನೋಡ್ಬೇಕಿದೆ.

Read more Photos on
click me!

Recommended Stories