ಧಾರಾವಾಹಿ ನಟಿಗೆ ಸ್ತನ ಕ್ಯಾನ್ಸರ್;‌ ಮಾರಕ ಕಾಯಿಲೆಯಿಂದ ಚೆಂದದ ಬೆಡಗಿ ಇಂದು ಹೀಗೆ ಆಗಿದ್ದಾರಾ?

Published : Dec 13, 2025, 12:44 PM IST

Actress Vahini Cancer: ಕ್ಯಾನ್ಸರ್‌ ಎಂಬ ಮಹಾಮಾರಿ ಕಾಯಿಲೆ ಈಗಾಗಲೇ ಅನೇಕರನ್ನು ಬಲಿ ತೆಗೆದುಕೊಂಡಿದೆ. ಸಾಕಷ್ಟು ಜನರು ಕ್ಯಾನ್ಸರ್‌ ವಿರುದ್ಧ ಹೋರಾಡಿ ಗೆದ್ದಿದ್ದುಂಟು. ಕೆಲವರು ಒಮ್ಮೆ ಕ್ಯಾನ್ಸರ್‌ ಪ್ರೀ ಆದರೂ ಕೂಡ, ಮತ್ತೆ ಈ ಕಾಯಿಲೆ ಬಂದ ಉದಾಹರಣೆ ಇದೆ. ಈಗ ನಟಿಯೋರ್ವರಿಗೆ ಕ್ಯಾನ್ಸರ್‌ ಬಂದಿದೆ. 

PREV
15
ನಟಿ ವಾಹಿನಿ ಆರೋಗ್ಯ ಸ್ಥಿತಿ ಗಂಭೀರ

ಒಂದು ಕಾಲದಲ್ಲಿ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ಹಿರಿಯ ನಟಿ ವಾಹಿನಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕಿರುತೆರೆಯಲ್ಲಿ ಫೇಮಸ್ ಆಗಿದ್ದ ಈ ನಟಿ ಸ್ತನ ಕ್ಯಾನ್ಸರ್‌ನಿಂದಾಗಿ ಗುರುತು ಸಿಗದಷ್ಟು ಬದಲಾಗಿದ್ದಾರೆ. ಆರೋಗ್ಯ ಹದಗೆಟ್ಟಿದ್ದು, ಆರ್ಥಿಕ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ.

25
25 ವರ್ಷದಿಂದ ಸೀರಿಯಲ್‌ಗಳಲ್ಲಿ ನಟನೆ

ಒಂದು ಕಾಲದಲ್ಲಿ ತೆಲುಗು ಕಿರುತೆರೆಯಲ್ಲಿ ಜನಪ್ರಿಯರಾಗಿದ್ದ ನಟಿ ವಾಹಿನಿ. 25 ವರ್ಷಗಳಿಂದ ಹಲವು ಸೀರಿಯಲ್‌ಗಳಲ್ಲಿ ನಟಿಸಿ, ಸದ್ಯ ಆರೋಗ್ಯ ಸಮಸ್ಯೆಯಿಂದಾಗಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿಲ್ಲ.

35
ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಕಲ್ಯಾಣಿ

ನಟಿ ಕರಾಟೆ ಕಲ್ಯಾಣಿ ಅವರು ವಾಹಿನಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ವಾಹಿನಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗೆ 35 ಲಕ್ಷ ಬೇಕಾಗಿದೆ.

45
ಚಿಕಿತ್ಸೆಗೆ ಮನವಿ

ಕರಾಟೆ ಕಲ್ಯಾಣಿ ಸೋಶಿಯಲ್ ಮೀಡಿಯಾದಲ್ಲಿ ವಾಹಿನಿ ಚಿಕಿತ್ಸೆಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಅವರ ಬ್ಯಾಂಕ್ ವಿವರಗಳನ್ನು ಹಂಚಿಕೊಂಡು, ಎಲ್ಲರೂ ಸಹಾಯ ಮಾಡಿ ಜೀವ ಉಳಿಸೋಣ ಎಂದು ಕೋರಿದ್ದಾರೆ.

55
ಅನಾರೋಗ್ಯದಿಂದಾಗಿ ನಟನೆಯಿಂದ ದೂರ

ಜಯವಾಹಿನಿ ಎಂದೂ ಕರೆಯಲ್ಪಡುವ ವಾಹಿನಿ, ತೆಲುಗು ಮತ್ತು ತಮಿಳು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. 'ಶ್ವೇತ ನಾಗು' ಚಿತ್ರದ ವಾಸುಕಿ ಪಾತ್ರದಿಂದ ಹೆಸರುವಾಸಿಯಾಗಿದ್ದರು. ಅನಾರೋಗ್ಯದಿಂದಾಗಿ ನಟನೆಯಿಂದ ದೂರ ಉಳಿದಿದ್ದಾರೆ.

Read more Photos on
click me!

Recommended Stories