ಅಪ್ಪ-ಅಮ್ಮನ ಮುಂಚೆ ನಾನೇ ಸಾಯಬೇಕೆಂದ ರಕ್ಷಿತಾ ಶೆಟ್ಟಿಗೆ ಮಲ್ಲಮ್ಮ ಫುಲ್ ಕ್ಲಾಸ್

Published : Oct 12, 2025, 09:43 PM IST

Mallamma and Rakshitha Shetty conversation: ಮಕ್ಕಳ ಸಾವಿನ ಬಗ್ಗೆ ಪೋಷಕರಿಗಾಗುವ ನೋವಿನ ಕುರಿತು ಚರ್ಚೆ. ರಕ್ಷಿತಾ ಪದೇ ಪದೇ ಕೇಳಿದ ಪ್ರಶ್ನೆಯಿಂದ ಬೇಸರಗೊಂಡ ಮಲ್ಲಮ್ಮ, ಆಟವಾಡಲು ಬಂದ ಜಾಗದಲ್ಲಿ ಇಂತಹ ಮಾತುಗಳು ಬೇಡವೆಂದು ರಕ್ಷಿತಾಗೆ ಖಡಕ್ ಕ್ಲಾಸ್ ತೆಗೆದುಕೊಳ್ಳುತ್ತಾರೆ.

PREV
15
ರಕ್ಷಿತಾ ಶೆಟ್ಟಿ ಮತ್ತು ಮಲ್ಲಮ್ಮ

ರಕ್ಷಿತಾ ಶೆಟ್ಟಿ, ಮಲ್ಲಮ್ಮ ಮತ್ತು ಧ್ರವಂತ್ ಮೂವರು ಡೈನಿಂಗ್ ಟೇಬಲ್‌ನಲ್ಲಿ ಕುಳಿತು ಮಾತನಾಡುತ್ತಿರುತ್ತಾರೆ. ಅಪ್ಪ ಮತ್ತು ಅಮ್ಮನ ಮುಂದೆ ಮಕ್ಕಳು ಸಾಯಬಾರದು. ಒಂದು ವೇಳೆ ಮಕ್ಕಳು ನಿಧನವಾದ್ರೆ ಅಪ್ಪ-ಅಮ್ಮನಿಗೆ ತುಂಬಾ ನೋವು ಆಗುತ್ತದೆ ಅಲ್ಲವಾ ಎಂದು ಮಲ್ಲಮ್ಮ ಅವರಿಗೆ ರಕ್ಷಿತಾ ಶೆಟ್ಟಿ ಹೇಳುತ್ತಾರೆ. ಈ ಮಾತುಗಳು ನಿಮಗೆ ಅರ್ಥವಾಯ್ತಾ ಎಂದು ಮಲ್ಲಮ್ಮ ಅವರನ್ನು ಪ್ರಶ್ನೆ ಮಾಡುತ್ತಾರೆ.

25
ರಕ್ಷಿತಾ ಮಾತುಗಳಿಗೆ ಮಲ್ಲಮ್ಮ ಬೇಸರ

ರಕ್ಷಿತಾ ಶೆಟ್ಟಿ ಮಾತುಗಳಿಗೆ ಬೇಸರ ವ್ಯಕ್ತಪಡಿಸಿದ ಮಲ್ಲಮ್ಮ, ನೀನು ನನಗಿಂತ ದೊಡ್ಡವಳಾ? ನನಗೆ ಇದೆಲ್ಲಾ ಅರ್ಥವಾಗಲ್ಲವಾ? ಹೀಗೆ ಹೀಗೆ ಪದೇ ಪದೇ ಅರ್ಥ ಆಯ್ತು ಎಂದು ಕೇಳಿದ್ರೆ ನನಗೆ ಕೋಪ ಬರುತ್ತೆ ಎಂದು ಮಲ್ಲಮ್ಮ ಹೇಳುತ್ತಾರೆ. ಇವರಿಬ್ಬರ ಪಕ್ಕದಲ್ಲಿಯೇ ಕುಳಿತಿದ್ದ ಧ್ರವಂತ್, ಏನು ಮಾತಿದೆ? ಯಾಕೆ ಈ ಟಾಪಿಕ್ ಚರ್ಚೆ ಮಾಡುತ್ತಿರೋದು ಎಂದು ಇಬ್ಬರನ್ನು ಪ್ರಶ್ನೆ ಮಾಡುತ್ತಾರೆ.

35
ನೋವು ತಡೆದುಕೊಳ್ಳುವ ಶಕ್ತಿ

ತಂದೆ-ತಾಯಿಗಿಂತ ಮುಂಚೆ ಅಥವಾ ಅವರಿಗಿಂತ ಮೊದಲೇ ಮಕ್ಕಳು ಸತ್ತರೇ ಪೋಷಕರಿಗೆ ನೋವು ಆಗಲ್ಲವಾ ಎಂದು ನನಗೆ ಕೇಳುತ್ತಾಳೆ ಅಂತ ಮಲ್ಲಮ್ಮ ಹೇಳುತ್ತಾರೆ. ಮಕ್ಕಳ ಮುಂದೆ ಪೋಷಕರು ನಿಧನರಾದ್ರೆ ಅವರಿಗೆ ತಡೆದುಕೊಳ್ಳುವ ಶಕ್ತಿ ಇರುತ್ತೆ ಎಂದು ರಕ್ಷಿತಾ ಹೇಳುತ್ತಾರೆ. ಇಲ್ಲಿ ಸಾಯುವ ಮಾತುಗಳನ್ನಾಡಬಾರದು ಎಂದು ಮೇಜು ಕುಟ್ಟಿ ಮಲ್ಲಮ್ಮ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಇಲ್ಲಿ ಆಟ ಆಡಲು ಬಂದಿದ್ದೇವೆ. ಅಂತಹ ಮಾತುಗಳನ್ನು ಹೇಳಬಾರದು ಎಂದು ಮಲ್ಲಮ್ಮ ಹೇಳುತ್ತಾರೆ.

45
ಯಾರು ಈ ರಕ್ಷಿತಾ ಶೆಟ್ಟಿ?

ತುಳುನಾಡಿನ ಮೂಲದವರಾದ ರಕ್ಷಿತಾ ಶೆಟ್ಟಿ, ತಮ್ಮ ಯುಟ್ಯೂಬ್ ವಿಡಿಯೋಗಳಿಂದಲೇ ಜನಪ್ರಿಯತೆಯನ್ನು ಪಡೆದುಕೊಂಡಿರುವ ಪ್ರತಿಭೆ. ಮುಂಬೈನಲ್ಲಿ ಹುಟ್ಟಿ ಬೆಳೆದಿರುವ ರಕ್ಷಿತಾ ಶೆಟ್ಟಿ ಪೋಷಕರು ಉಡುಪಿಯವರು. ಹಾಗಾಗಿ ಮನೆಯಲ್ಲಿ ತುಳು ಮಾತನಾಡುತ್ತಾರೆ.

ಇದನ್ನೂ ಓದಿ: ಬಿಗ್‌ಬಾಸ್ ಮನೆ ಪುಟ್ಟಿಯ ಪ್ರಯತ್ನಕ್ಕೆ ವೀಕ್ಷಕರ ಮೆಚ್ಚುಗೆ; ಸುದೀಪ್ ಪ್ರಶ್ನೆಗೆ ರಕ್ಷಿತಾ ಶೆಟ್ಟಿ ತಬ್ಬಿಬ್ಬು

55
ನಾಮಿನೇಟ್‌ನಿಂದ ಸೇವ್ ಆಗಿರುವ ರಕ್ಷಿತಾ ಶೆಟ್ಟಿ

ಬಿಗ್‌ಬಾಸ್‌ಗೆ ಬಂದ ಮೊದಲ ದಿನವೇ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿ ಸೀಕ್ರೆಟ್ ರೂಮ್ ಸೇರಿದ್ದರು. ಎರಡನೇ ವಾರ ರಕ್ಷಿತಾ ಶೆಟ್ಟಿ ಬಿಗ್‌ಬಾಸ್‌ಗೆ ಕಮ್ ಬ್ಯಾಕ್ ಮಾಡಿದ್ದರು. ಈ ವಾರ ನಾಮಿನೇಟ್ ಆಗಿದ್ದ ರಕ್ಷಿತಾ ಶೆಟ್ಟಿ ಶನಿವಾರದ ಸಂಚಿಕೆಯಲ್ಲಿಯೇ ಸೇವ್ ಆಗಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ 7ರಲ್ಲಿ ದೀಪಿಕಾ ದಾಸ್ ತುಟಿಗೆ ಕಿಸ್ ಕೊಟ್ಟಿದ್ಯಾರು? ಅಚ್ಚರಿಯ ದೃಶ್ಯ ವೈರಲ್!

Read more Photos on
click me!

Recommended Stories