ಬಿಗ್ ಬಾಸ್ ಸೀಸನ್ 12 ಆರಂಭವಾಗಿ ಭಾರಿ ಸದ್ದು ಮಾಡುತ್ತಿದೆ. ಈ ಸಮಯದಲ್ಲಿ ಬಿಗ್ ಬಾಸ್ 12ರ ಸ್ಪರ್ಧಿಗಳನ್ನು ಬಿಗ್ ಬಾಸ್ 11ರ ಸ್ಪರ್ಧಿಗಳಿಗೆ ಹೋಲಿಕೆ ಮಾಡಲಾಗಿದೆ. ಹನುಮಂತು Vs ಗಿಲ್ಲಿ, ತ್ರಿವಿಕ್ರಮನ್ನು ಧನುಷ್ ಗೂ, ಸ್ಪಂದನಾಳನ್ನು ಭವ್ಯಾ ಗೌಡಗೂ ಹೋಲಿಕೆ ಮಾಡಲಾಗುತ್ತೆ.
ಬಿಗ್ ಬಾಸ್ ಸೀಸನ್ 11 ಮತ್ತು ಸೀಸನ್ 12ರ ನಡುವೆ ಹಲವಾರು ಸಾಮ್ಯತೆ ಇದೆ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಯಮುನಾ ಮತ್ತು ಅಶ್ವಿನಿ ಗೌಡ, ಗಿಲ್ಲಿ ನಟ ಮತ್ತು ಹನುಮಂತ, ಭವ್ಯಾ ಗೌಡ ಮತ್ತು ಸ್ಪಂದನಾಗೆ ಹೋಲಿಕೆ ಮಾಡಿದ್ದಾರೆ. ಈ ಹೋಲಿಕೆ ಸರಿಯಾಗಿದೆಯೇ? ನೀವೇ ಹೇಳಿ.
28
ತ್ರಿವಿಕ್ರಮ್ Vs ಧನುಷ್
ತ್ರಿವಿಕ್ರಮ್ ಮತ್ತು ಧನುಷ್ ಗೌಡ ಇಬ್ಬರೂ ಸಹ ಕನ್ನಡ ಕಿರುತೆರೆಯ ಜನಪ್ರಿಯ ನಾಯಕರು. ಇಬ್ಬರನ್ನೂ ಜನ ಇಷ್ಟಪಟ್ಟಿದ್ದರೂ. ಆ ಹೈಟ್, ಸ್ಟ್ರಾಂಗ್ ಬಾಡಿ ಇಬ್ಬರಲ್ಲೂ ಸೇಮ್ ಟು ಸೇಮ್ ಇದೆ. ಆಟದಲ್ಲೂ ಇಬ್ಬರೂ ಇತರ ಸ್ಪರ್ಧಿಗಳಿಗೆ ಚಾಲೆಂಜಿಂಗ್ ಆಗಿದ್ದಾರೆ.
38
ಮಂಜು Vs ಕಾಕ್ರೋಜ್ ಸುಧಿ
ಉಗ್ರಂ ಮಂಜು ಮತ್ತು ಕಾಕ್ರೋಜ್ ಸುಧಿ ಇಬ್ಬರು ಸಹ ವಿಲನ್ ಮೆಟೀರಿಯಲ್. ಇಬ್ಬರು ಬಿಗ್ ಬಾಸ್ ನಲ್ಲಿ ತಮ್ಮ ವಿಲನ್ ಖದರ್ ಮೂಲಕ ಎಂಟ್ರಿ ಕೊಟ್ಟರು. ಅವರ ಮಾತು, ನಡೆ, ನುಡಿ ಕೂಡ ಒಂದೇ ರೀತಿಯಾಗಿದೆ.
ಬಿಗ್ ಬಾಸ್ ಸೀಸನ್ 11ರಲ್ಲಿ ಯಮುನಾ ಅವರು ತಮ್ಮ ಮಾತುಗಳ ಮೂಲಕವೇ ಭಾರಿ ಸದ್ದು ಮಾಡಿದ್ದರು. ಈ ಸೀಸನ್ ನಲ್ಲಿ ಅಶ್ವಿನಿ ಗೌಡ ಕೂಡ ತಮ್ಮ ಮಾತುಗಳಿಂದಲೇ ಪ್ರತಿಯೊಬ್ಬರಿಗೂ ಚಾಲೆಂಜ್ ನೀಡಿದ್ದರು. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ಹೋಲಿಕೆ ನಡೆಯುತ್ತಿದೆ.
58
ಹನುಮಂತ Vs ಗಿಲ್ಲಿನಟ
ಕಳೆದ ಸೀಸನ್ ನಲ್ಲಿ ಹನುಮಂತ ಲಾಮಣಿ ಲೇಟ್ ಆಗಿ ಎಂಟ್ರಿ ಕೊಟ್ಟು ಬಿಗ್ ಬಾಸ್ ಸೀಸನ್ ವಿನ್ನರ್ ಆಗಿದ್ದರು. ಅವರು ತಮ್ಮ ಕಾಮಿಡಿ ಪಂಚ್ ಲೈನ್ ಮೂಲಕ ಜನಮನ ಗೆದ್ದಿದ್ದರು. ಇದೀಗ ಬಿಗ್ ಬಾಸ್ ಸೀಸನ್ 12ರಲ್ಲಿ ಗಿಲ್ಲಿ ನಟ ಕೂಡ ಸಖತ್ ಕಾಮಿಡಿ ಮಾಡುತ್ತಾರೆ. ತಮ್ಮ ಕಾಮಿಡಿ ಮೂಲಕವೇ ಉಳಿದ ಸ್ಪರ್ಧಿಗಳ ಕಾಲೆಳೆಯುತ್ತಿದ್ದಾರೆ.
68
ಮೋಕ್ಷಿತಾ Vs ಕಾವ್ಯಾ
ಮೋಕ್ಷಿತಾ ಪೈ ಮತ್ತು ಕಾವ್ಯಾ ಶೈವ ಇಬ್ಬರೂ ಮುದ್ದಾದ ನಟಿಯರು. ತಮ್ಮ ಮೊದಲ ಸೀರಿಯಲ್ ನಿಂದಲೇ ಸದ್ದು ಮಾಡಿದವರು. ಇವರಿಬ್ಬರು ಸಹ ಬಿಗ್ ಬಾಸ್ ಮನೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ತಮ್ಮ ಮಾತು, ಆಟ, ಸ್ಪರ್ಧೆ ಎಲ್ಲದರಲ್ಲೂ ಸಖತ್ ಮನರಂಜನೆ ನೀಡಿದವರು ಇಬ್ಬರು.
78
ಭವ್ಯಾ ಗೌಡ Vs ಸ್ಪಂದನಾ
ಬಿಗ್ ಬಾಸ್ ಸೀಸನ್ 11 ರ ಭವ್ಯಾ ಗೌಡ ಮತ್ತು ಸೀಸನ್ 12ರ ಸ್ಪಂದನಾ ಸೋಮಣ್ಣ ತಮ್ಮ ಸೌಂದರ್ಯದಿಂದಾನೆ ವೀಕ್ಷಕರ ಮನ ಗೆಲ್ಲುತ್ತಿದ್ದಾರೆ. ಹಾಗಾಗಿ ಜನರು ಇಬ್ಬರನ್ನೂ ಹೋಲಿಕೆ ಮಾಡುತ್ತಿದ್ದಾರೆ.
88
ಧನರಾಜ್ Vs ಚಂದ್ರಪ್ರಭಾ
ಧನರಾಜ್ Vs ಚಂದ್ರಪ್ರಭಾ ಇವರಿಬ್ಬರೂ ಸಹ ಕಾಮಿಡಿ ಮೂಲಕವೇ ಬಿಗ್ ಬಾಸ್ ಮನೆಯನ್ನು ಸೇರಿದವರು. ಇಬ್ಬರ ಕಾಮಿಡಿ ಕೂಡ ಸೂಪರ್. ಧನರಾಜ್ ಆರಂಭದಿಂದ ಕೊನೆಯವರೆಗೂ ಕಾಮಿಡಿ ಮೂಲಕವೇ ಜನಮನ ಗೆದ್ದಿದ್ದರು, ಚಂದ್ರಪ್ರಭಾ ಕಾಮಿಡಿ ಇನ್ನಷ್ಟೇ ಅನಾವರಣವಾಗಲಿದೆ.