Bigg Boss: ಅಶ್ವಿನಿ ಗೌಡ ಅಷ್ಟೆಲ್ಲ ಮಾತಾಡಿದ್ರೂ ಯಾಕೆ ಕೇಳಲಿಲ್ಲ? ಗ್ರಹಚಾರ ಬಿಡಿಸಿಲ್ಲ? ಕಿಚ್ಚ ಸುದೀಪ್‌ ಉತ್ತರ

Published : Dec 18, 2025, 07:52 AM ISTUpdated : Dec 18, 2025, 08:03 AM IST

Actor Kiccha Suddep On Bigg Boss: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಕಿಚ್ಚ ಸುದೀಪ್‌ ಅವರು ಅಶ್ವಿನಿ ಗೌಡಗೆ ಬೈಯ್ಯಲಿಲ್ಲ, ಗಿಲ್ಲಿ ನಟನಿಗೆ ಅಥವಾ ರಕ್ಷಿತಾಗೆ ಬೈದ್ರು, ಬೇಧ-ಭಾವ ಮಾಡುತ್ತಾರೆ ಎಂಬ ಮಾತು ಕೇಳಿಬಂದಿದೆ. ಈ ಬಗ್ಗೆ ಸಂದರ್ಶನದಲ್ಲಿ ಅವರು ಪರೋಕ್ಷವಾಗಿ ಮಾತನಾಡಿದ್ದಾರೆ. 

PREV
16
ಕಿಚ್ಚ ಸುದೀಪ್‌ ಬಗ್ಗೆ ವೀಕ್ಷಕರ ಅಸಮಾಧಾನ

ಬಿಗ್‌ ಬಾಸ್‌ ಶೋನಲ್ಲಿ ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿಗೆ ಅಭಿಮಾನಿ ಬಳಗವಿದೆ. ಇವರ ಆಟವನ್ನು ವಿಮರ್ಶೆ ಮಾಡಿ ಕಿಚ್ಚ ಸುದೀಪ್‌ ಕಿವಿ ಹಿಂಡಿದರೆ ಅಥವಾ ಬೈದರೆ ಕೆಲವರು ವೀಕ್ಷಕರು ಸಹಿಸೋದಿಲ್ಲ. ಹೀಗಾದಾಗ ಕಿಚ್ಚ ಸುದೀಪ್‌ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದುಂಟು. ಈಗ ಈ ವಿಚಾರವಾಗಿ ಸುದೀಪ್‌ ಅವರು ಪರೋಕ್ಷವಾಗಿ ಮಾತನಾಡಿದ್ದಾರೆ.

26
ಬಿಗ್‌ ಬಾಸ್‌ನಲ್ಲಿ ಜೀವನಪಾಠ ಹೇಳುವುದು ಹೇಗೆ?

ನಾನು ರೆಡಿ ಮಾಡಿಕೊಂಡು ಮಾತನಾಡೋದಿಲ್ಲ, ಓದಿಕೊಂಡು ಮಾತನಾಡೋದಿಲ್ಲ, ನನ್ನ ಅನುಭವಕ್ಕೆ ಬಂದಿರೋ ಮಾತುಗಳು, ಕಲಿಕೆಯಿಂದ ಇವೆಲ್ಲ ಬರುತ್ತವೆ. ನಮ್ಮಲೇ ಉತ್ತರ ಇದೆ, ನಾವು ಒಪ್ಪುತ್ತಿಲ್ಲ. ಇದರಿಂದಲೇ ಕಲಿಯುತ್ತೇವೆ. ಹೇಳುವಾಗ ಒಬ್ಬರನ್ನು ನೋವು ಮಾಡಿಕೊಂಡು ಹೇಳಬಹುದು, ಸರಳವಾಗಿ ಹೇಳಬಹುದು, ಅರ್ಥ ಆಗುವ ಹಾಗೆ ಹೇಳಬಹುದು. ಹೇಳಿದ್ಮೇಲೆ ನೆಮ್ಮದಿಯಾಗಿ ನಿದ್ದೆ ಮಾಡಿ, ಅದನ್ನು ಬಿಟ್ಟು ಹೇಳಿಲ್ಲ ಎನ್ನೋ ಪಶ್ಚಾತ್ತಾಪ ಬೇಡ.

36
ಬಿಗ್‌ ಬಾಸ್‌ ಎಪಿಸೋಡ್‌ ನೋಡ್ತೀರಾ?

ಬಿಗ್‌ ಬಾಸ್‌ ವೇದಿಕೆಯಲ್ಲಿ ಕೋಟ್ಸ್‌ ಹೇಳಬೇಕು, ಹೇಳಬಾರದು ಎನ್ನೋ ಒಪ್ಪಂದ ಇಲ್ಲ. ಸ್ವಲ್ಪ ಸಮಯ ಸಿಕ್ಕಾಗ, ಕಾರ್‌ನಲ್ಲಿ ನಿದ್ದೆ ಮಾಡುವಾಗ ಎಪಿಸೋಡ್‌ ಹಾಕಿಕೊಂಡು ನೋಡ್ತೀನಿ. ಒಮ್ಮೊಮ್ಮೆ ಪಾಯಿಂಟ್ಸ್‌ ಇಟ್ಟುಕೊಂಡು ಮಾತನಾಡ್ತೀನಿ. ಲೈವ್‌ನಲ್ಲಿ ಸ್ಪರ್ಧಿಗಳ ಜೊತೆ ಮಾತನಾಡ್ತೀನಿ, ಅಲ್ಲಿ ಪ್ರಾಂಪ್ಟ್‌ ಇರಲ್ಲ. ಆರಂಭದಲ್ಲಿ ಇಂಟ್ರಡಕ್ಷನ್‌, ಯೆಸ್‌ ಆರ್‌ ನೋ ಪ್ರಶ್ನೆ ಮಾತ್ರ ನಮಗೆ ಕ್ಲೂ ಕೊಡ್ತಾರೆ ಅಷ್ಟೇ. ಇನ್ನೊಮ್ಮೆ ಪಾಯಿಂಟ್ಸ್‌ ಎತ್ತಿಕೊಡಿ, ಮರೆತು ಹೋಗುತ್ತದೆ, ಫ್ಲೋದಲ್ಲಿ ಬರಬೇಕು ಎಂದು ಟೀಂನವರೇ ಹೇಳಿರುತ್ತಾರೆ.

46
ಎಲ್ಲ ಸ್ಪರ್ಧಿಗಳನ್ನು ತರಾಟೆಗೆ ತಗೊಂಡಿಲ್ಲ ಅಂತಾರೆ?

ಬಿಗ್‌ ಬಾಸ್‌ ಶೋ ನಡೆಸಿಕೊಡೋದು ಸುಲಭ ಅಲ್ಲ, ಆ ವೇದಿಕೆ ಮೇಲೆ ಹೋದಾಗಲೇ ಗೊತ್ತಾಗುತ್ತದೆ, ಅವರಿಗೆ ಹೇಳಿದ್ರು, ಇವರಿಗೆ ಹೇಳಿದ್ರು, ಅವರಿಗೆ ಹೇಳಲಿಲ್ಲ, ಇವರಿಗೆ ಹೇಳಲಿಲ್ಲ ಅಂತ ಜನರು ಹೇಳ್ತಾರೆ. ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಯೋರ್ವರು ಎಸ್‌ ಎನ್ನೋ ಪದ ಮಾತನಾಡ್ತಾರೆ, ನಾನು ಅದರ ಬಗ್ಗೆ ಪ್ರಶ್ನೆ ಕೇಳಿದಾಗ ಎಸ್‌ ಅಂದ್ರೆ ಸಿಲ್ಲಿ ಅಣ್ಣಾ ಅಂತ ವಾದ ಮಾಡಿದರೆ, ಅಲ್ಲಿಗೆ ಚರ್ಚೆಯೇ ವೇಸ್ಟ್.‌ t ಗಾಂಚಾಲಿ ಅಂದ್ರೆ ತಲೆ ಗಾಂಚಾಲಿ ಅಂತಾರೆ. ಆಗ ಏನು ಹೇಳೋದು?

56
ಯಾಕೆ ಬಿಗ್‌ ಬಾಸ್‌ನಲ್ಲಿ ಎಲ್ಲ ಟೈಮ್‌ನಲ್ಲಿ ಮಾತನಾಡಲ್ಲ?

ಇಬ್ಬರ ಮಧ್ಯೆ ಜಗಳ ಆಗುವಾಗ ನಾವು ಏನೋ ತುರುಕೋಕೆ ಆಗೋದಿಲ್ಲ. ಕೆಲವರಿಗೆ ಒಬ್ಬ ವ್ಯಕ್ತಿ ಕ್ಲೋಸ್‌ ಆದಾಗ, ಇಷ್ಟ ಆದಾಗ ಏನು ಮಾಡಿದ್ರೂ, ಏನು ಮಾತಾಡಿದ್ರೂ ತಪ್ಪು. ಒಂದು ಎಪಿಸೋಡ್‌ ನಡೆಸಿಕೊಟ್ಟವರಿಗೆ ಅಸಲಿ ವಿಷಯ ಗೊತ್ತಾಗುತ್ತದೆ. ಸ್ವಲ್ಪ ಹೆಚ್ಚು ಕಡಿಮೆ ಆದರೆ ಗಂಡು-ಹೆಣ್ಣು, ಜಾತಿ, ಸಾಮಾಜಿಕ ವಿಷಯ ಬರಬಹುದು. ಇವುಗಳ ಬಗ್ಗೆ ಎಚ್ಚರಿಕೆ ಇರಬೇಕು. ಎಲ್ಲಿ ತಮಾಷೆ ಮಾಡಬೇಕು? ಎಲ್ಲಿ ಸೀರಿಯಸ್‌ ಆಗಿ ಮಾತನಾಡಬೇಕು ಎನ್ನೋದು ಗೊತ್ತಿರಬೇಕು.

66
ಕೆಲ ಸ್ಪರ್ಧಿಗಳಿಗೆ ಬೈದಿದ್ದಕ್ಕೆ ವಿರೋಧ ಬಂತು

ಕೆಲವರು ಚೆನ್ನಾಗಿ ಆಡುವಾಗ ಮೂರ್ಖತನದಿಂದ ಆಟ ಹಾಳು ಮಾಡಿಕೊಂಡಿರ್ತಾರೆ, ಅದನ್ನೇ ಬೈದು ಹೇಳಿದಾಗ ಕೆಲವರು ಬೇಸರ ಮಾಡಿಕೊಳ್ಳುತ್ತಾರೆ. ಹೊರಗಡೆಯವರಿಗೆ ಇದು ತಪ್ಪು ಎನಿಸಬಹುದು, ಆದರೆ ಫಿನಾಲೆ ಹೋಗುವವರು ಆಟ ಹಾಳು ಮಾಡಿಕೊಳ್ಳಬಾರದು ಎಂದು ಹೇಳಿರ್ತೀವಿ. ಆಮೇಲೆ ಅದೇ ಸ್ಪರ್ಧಿಗಳು ನನ್ನಿಂದ ತಪ್ಪಾಯ್ತು ಎಂದು ಮುಂದಿನ ವಾರ ಹೇಳುತ್ತಾರೆ.

Read more Photos on
click me!

Recommended Stories