ದುಬೈನಲ್ಲಿ ಮೋಸದಿಂದ 'ಬಾರ್​ ಗರ್ಲ್'​ ಆದೆ, ಆದ್ರೆ ಆ ಅನುಭವವೇ ಸೂಪರ್​: ರಾಧಾ ಕಲ್ಯಾಣ ನಟಿ ಮಾತು ಕೇಳಿ

Published : Dec 17, 2025, 08:45 PM IST

'ರಾಧಾ ಕಲ್ಯಾಣ' ಖ್ಯಾತಿಯ ನಟಿ ಚಿತ್ರಾಲ್ ರಂಗಸ್ವಾಮಿ ಅವರು ಡಾನ್ಸ್ ಈವೆಂಟ್ ಎಂದು ನಂಬಿಸಿ ದುಬೈಗೆ ಕರೆದೊಯ್ದು ಬಾರ್ ಗರ್ಲ್ ಮಾಡಿದ ಮೋಸದ ಕಥೆಯನ್ನು ಹಂಚಿಕೊಂಡಿದ್ದಾರೆ. ಅಲ್ಲಿನ ಮೂರು ತಿಂಗಳ ಅನುಭವ, ಬಾರ್ ಗರ್ಲ್​ಗಳ ಬಗೆಗಿನ ತಪ್ಪು ಕಲ್ಪನೆಗಳು ಮತ್ತು ಅಲ್ಲಿನ ಕೋಡ್ ವರ್ಡ್​ಗಳ ಬಗ್ಗೆ ತಿಳಿಸಿದ್ದಾರೆ.

PREV
19
ಬಾರ್​ ಗರ್ಲ್​ ಸ್ಟೋರಿ

ಬಾರ್​ ಗರ್ಲ್​ ಎಂದರೆ ಸಾಮಾನ್ಯವಾಗಿ ಕನಿಷ್ಠ ರೀತಿಯಲ್ಲಿ ಕಾಣುವುದು ಇಂದಿಗೂ ಇದೆ. ಬಾರ್​ ಗರ್ಲ್ಸ್​ ಎಂದರೆ, ಅವರು ಕೇವಲ ಡಾನ್ಸ್​ ಮಾತ್ರವಲ್ಲದೇ, ಗ್ರಾಹಕರನ್ನು ಎಲ್ಲಾ ರೀತಿಯಿಂದಲೂ ತೃಪ್ತಿಪಡಿಸಬೇಕು ಎನ್ನುವ ಮಾತು ಕೂಡ ಇದೆ. ಕೆಲವರು ಖುಷಿಯಿಂದ ಈ ಕೆಲಸಕ್ಕೆ ಬಂದರೆ, ಮತ್ತೆ ಕೆಲವರು ಮೋಸದಿಂದ, ಇನ್ನು ಕೆಲವರು ಹಣಕ್ಕಾಗಿ ಬರುವುದು ಇದೆ.

29
ಚಿತ್ರಾಲ್ ರಂಗಸ್ವಾಮಿ ಸ್ಟೋರಿ

ಆದರೆ, ಮೋಸದಿಂದ ದುಬೈಗೆ ಬಾರ್​ಗರ್ಲ್​ ಆದ ರಾಧಾ ಕಲ್ಯಾಣ ನಟಿ ಚಿತ್ರಾಲ್ ರಂಗಸ್ವಾಮಿ (Chitral Rangawamy) ಅವರು ಅದರ ಅನುಭವವನ್ನು ಹಂಚಿಕೊಂಡಿದ್ದಾರೆ. ರೇಡಿಯೋಸಿಟಿಗೆ ಮಾತನಾಡಿರುವ ಚಿತ್ರಾಲ್​ ಅವರು ಬಾರ್​ ಗರ್ಲ್​ ಎನ್ನುವುದು ಕೀಳಲ್ಲ, ಅದರ ಅನುಭವ ಹೇಗಿರುತ್ತದೆ ಎನ್ನುವ ಬಗ್ಗೆ ಮಾತನಾಡಿದ್ದಾರೆ.

39
ಬಾರ್​ ಗರ್ಲ್​

‘ನನ್ನನ್ನು ಡಾನ್ಸ್​ ಈವೆಂಟ್​ಗೆ ಎಂದು ದುಬೈಗೆ ಕರೆದುಕೊಂಡು ಹೋದರು. ಆದರೆ ಅದು ಡಾನ್ಸ್​ ಆಗಿರಲಿಲ್ಲ. ಆದರೆ ಬಾರ್​ ಗರ್ಲ್​ ಆಗಿ ಸೇರಿಸಿದರು' ಎನ್ನುತ್ತಲೇ ತಮ್ಮ ಅನುಭವವನ್ನು ತೆರೆದಿಟ್ಟಿದ್ದಾರೆ ನಟಿ.

49
ನೋವಿನ ಕಥೆ

ಮೈಸೂರಿನ ಚಿತ್ರಾಲ್ ರಂಗಸ್ವಾಮಿ ಅವರದ್ದು ನೋವಿನ ಕಥೆ. ತಂದೆ 9ನೇ ಕ್ಲಾಸ್​ನಲ್ಲಿಯೇ ಬಿಟ್ಟುಹೋದರು. ಅಮ್ಮ ಅಲ್ಲಿಲ್ಲಿ ಕೆಲಸ ಮಾಡಿ ಮಗಳನ್ನು ಬೆಳೆಸಿದರು. ರಂಗಸಂಗಮ ನಾಟಕ ಸಂಸ್ಥೆಗೆ ಸೇರಿಕೊಂಡ ಚಿತ್ರಾಲ್​ ಅವರಿಗೆ ಹೆಚ್ಚು ಓದುವ ಆಸೆ. ಆದರೆ ಕಾಲೇಜು ಫೀಸು ಕಟ್ಟಲಾಗದೇ ಸೇಲ್ಸ್​ ಗರ್ಲ್​ ಆಗಿ ಸೇರಿಕೊಳ್ಳುತ್ತಾರೆ. ಆದರೆ 18 ವರ್ಷ ತುಂಬಿಲ್ಲ ಎಂದು ಅಲ್ಲಿಂದ ತೆಗೆಯಲಾಗುತ್ತದೆ. ನಟಿಯಾಗುವ ಕನಸೂ ಆ ಸಮಯದಲ್ಲಿ ಮೂಡುತ್ತದೆ.

59
ಮೋಸದಿಂದ ದುಬೈಗೆ

ಆದರೆ ಆಗಿದ್ದೇ ಬೇರೆ. ಚಿತ್ರಾಲ್​ ಅವರೇ ಹೇಳುವಂತೆ, 'ಒಂದು ದಿನ ಡ್ಯಾನ್ಸ್‌ ಇವೆಂಟ್‌ ಇದೆ ಎಂದು 1 ಲಕ್ಷ 25 ಸಾವಿರ ಸಂಬಳ ಕೊಟ್ಟು ದುಬೈಗೆ ಕರೆದುಕೊಂಡು ಹೋದರು. ಅಲ್ಲಿ ನನ್ನ ಪಾಸ್‌ಪೋರ್ಟ್‌ ಸೀಜ್‌ ಮಾಡಿಕೊಂಡು ಒಂದು ರೂಮ್‌ನಲ್ಲಿ ಲಾಕ್‌ ಮಾಡಿ ಬಾರ್‌ ಡ್ಯಾನ್ಸರ್‌ ಆಗಲು ಹೇಳಿದರು ಎಂದು ಆ ದಿನಗಳ ನೆನೆದಿದ್ದಾರೆ ನಟಿ.

69
ಕಷ್ಟ ಪಟ್ಟೆ

ಅಲ್ಲಿ ಸಿಲುಕಿಕೊಂಡು ಕಷ್ಟ ಪಟ್ಟೆ. ವಾಪಸ್‌ ಕಳುಹಿಸಲು ಕೇಳಿಕೊಂಡರೂ ನನ್ನನ್ನು ಕರೆ ತರಲು ಇಷ್ಟು ಹಣ ಖರ್ಚಾಗಿದೆ ಕೊಟ್ಟರೆ ಬಿಡುವುದಾಗಿ ಹೇಳುತ್ತಾರೆ. ನನ್ನ ಬಳಿ ಹಣ ಇರಲಿಲ್ಲ. ನನ್ನನ ತಾಯಿಗೆ ಹೇಳಿದಾಗ ಚಿನ್ನ ಅಡವಿಟ್ಟು ಸಹಾಯ ಮಾಡುವುದಾಗಿ ಹೇಳುತ್ತಾರೆ. ಅಲ್ಲಿ ನಾನು 3 ತಿಂಗಳು ಉಳಿದುಕೊಂಡು ಬಾರ್ ಡ್ಯಾನ್ಸರ್‌ ಆದೆ' ಎಂದಿದ್ದಾರೆ.

79
ಫೋರ್ಸ್​ ಮಾಡಲ್ಲ

ಆದರೆ ಇದಾಗಲೇ ನಟಿ ಹೇಳಿರುವಂತೆ, ನಾನು ಹೆಮೆಯಿಂದ ಹೇಳ್ತೇನೆ, ಆ ಎಕ್ಸ್‌ಪೀರಿಯನ್ಸ್‌ ನಾನು ಬೇಕು ಅಂತಂದ್ರು ಈಗ ಮತ್ತೆ ಸಿಗಲ್ಲ” ಎಂದಿದ್ದಾರೆ. ಸಾಮಾನ್ಯವಾಗಿ ಬಾರ್​ ಗರ್ಲ್​ ಎಂದರೆ ಸೆ*ಕ್ಸ್​ ವರ್ಕರ್​ ಎನ್ನುತ್ತಾರೆ. ಆದರೆ ದುಬೈನಲ್ಲಿ ಆ ರೀತಿ ಇಲ್ಲ. ನಮ್ಮ ಪರ್ಮಿಷನ್​ ಮುಖ್ಯವಾಗುತ್ತದೆ. ನಮಗೆ ಇಷ್ಟವಿಲ್ಲದಿದ್ದರೆ ಯಾವುದಕ್ಕೂ ಫೋರ್ಸ್​ ಮಾಡುವುದಿಲ್ಲ ಎಂದಿದ್ದಾರೆ.

89
ಕೋಡ್ ವರ್ಡ್​

ಅಲ್ಲಿ ಬರುವ ಕಸ್ಟಮರ್ಸ್​ ಫ್ಯಾಮಿಲಿ ಬಿಟ್ಟು ಕೆಲಸಕ್ಕೆ ಬಂದಿರುತ್ತಾರೆ. ಸೋ ಅಲ್ಲಿ ಇರುವವರನ್ನೇ ಫ್ಯಾಮಿಲಿ ಎನ್ನುವ ರೀತಿಯಲ್ಲಿ ನೋಡುತ್ತಾರೆ. ಅಲ್ಲಿ ಕೋಡ್​ ವರ್ಡ್​ ಇರುತ್ತದೆ, ಕಾಫಿಶಾಪ್​, ಶಾಪಿಂಗ್​ ಎಂದು ಇರುತ್ತದೆ. ಕಾಫಿಶಾಪ್​ ಎಂದರೆ ಒಂದು ಗಂಟೆ ಮಾತನಾಡುವುದು. ಆಗ ಅವರಿಗೆ ಹೆಚ್ಚು ಹಣ ಕೊಡುತ್ತಾರೆ. ಶಾಪಿಂಗ್​ ಎಂದರೆ ಅವರು ಹೊರಗೆ ಕರೆದುಕೊಂಡು ಹೋಗಿ 4 ಗಂಟೆಯ ಒಳಗೆ ನಮ್ಮನ್ನು ಬಾರ್​ಗೆ ಬಿಡಬೇಕು ಎಂದಿದ್ದಾರೆ.

99
ರೋಚಕ ಅನುಭವ

ನಾವು ಕೋಣೆಯಲ್ಲಿ ಯಾರಾದರೂ ಹುಡುಗಿ ಇಲ್ಲ ಎಂದು ತಿಳಿದ ತಕ್ಷಣ ಶಾಪಿಂಗ್​ಗೆ ಹೋಗಿರುವುದು ತಿಳಿಯುತ್ತದೆ. ಅವಳು ಬರುವವರೆಗೂ ನಮಗೆ ತುಂಬಾ ಕುತೂಹಲ ಇರುತ್ತದೆ. ಏನು ಮಾಡಿದೆ ಎಲ್ಲಿ ಹೋಗಿದೆ, ಏನಾಯ್ತು ಎಂದೆಲ್ಲಾ ಕೇಳುತ್ತವೆ. ಆ ಅನುಭವ ತುಂಬಾ ರೋಚಕವಾದದ್ದು ಎಂದಿದ್ದಾರೆ ನಟಿ.

Read more Photos on
click me!

Recommended Stories