ಬಿಗ್ ಬಾಸ್ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಅಶ್ವಿನಿ ಗೌಡ ಅವರಿಗೆ ಗಾಯ ಮಾಡಿ, ಎಂಜಲು ಉಗುಳಿದ್ದ ಚೈತ್ರಾ ಕುಂದಾಪುರ, ಇದೀಗ ತನ್ನ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದ್ದಾರೆ. ದೇವರ ಮುಂದೆ ಕುಳಿತಾಗ ತಪ್ಪು ಎನಿಸಿತು ಎಂದು ಹೇಳಿಕೊಂಡ ಚೈತ್ರಾ, ಕ್ಯಾಮೆರಾ ಇಲ್ಲದಾಗ ಅಶ್ವಿನಿ ಬಳಿ ಕ್ಷಮೆ ಕೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ 12ನೇ ವಾರ ನಡೆಯುತ್ತಿರುವ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಚೈತ್ರಾ ಕುಂದಾಪುರ ಅವರು ಅಶ್ವಿನಿ ಗೌಡ ಅವರಿಗೆ ಆಟವಾಡುವ ವೇಳೆ ಉಗುರಿನಿಂದ ಪರಚಿ ಗಾಯ ಮಾಡಿದ್ದಲ್ಲದೇ ತನ್ನದೇನೂ ತಪ್ಪಿಲ್ಲವೆಂದು ವಾದ ಮಾಡಿ, ಎಂಜಲು ಉಗುಳಿದ್ದರು. ಈ ಬಗ್ಗೆ ಎಲ್ಲ ಬಿಗ್ ಬಾಸ್ ಸಹ ಸ್ಪರ್ಧಿಗಳು ಬುದ್ಧಿ ಹೇಳಿದರೂ ಕೇಳದೇ ತನ್ನದೇ ಸರಿ ಎಂದು ವಾದಿಸಿದ್ದರು. ಟಾಸ್ಕ್ ನಡೆದು ಒಂದು ಕಳೆದ ನಂತರ ಇದೀಗ ತನ್ನ ತಪ್ಪಿನ ಅರಿವಾಗಿ ಬಿಗ್ ಬಾಸ್ ಮನೆಯವರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
26
ಗಿಲ್ಲಿನಟ ರಿವೀಲ್
ಈ ಬಗ್ಗೆ ಗಿಲ್ಲಿ ನಟ ಅವರು ಮಾತನಾಡುತ್ತಾ ಚೈತ್ರಾ ಕುಂದಾಪುರ ಅವರ ಜಗಳವನ್ನು ನೋಡಿ ಹೊರಗಡೆ ಹೋದ ಮೇಲೆಯೂ ಮಾತನಾಡಿಸುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಇತ್ತು. ಮುಂದಿನ ಜನ್ಮದಲ್ಲಿಯೂ ಮಾತನಾಡಿಸುವುದಿಲ್ಲ ಎನ್ನುವ ರೀತಿ ನಡೆದುಕೊಂಡಿದ್ದೀರಿ ಎಂದು ಕಾಲೆಳೆದರು. ಇದಾದ ನಂತರ ಚೈತ್ರಾ ಕುಂದಾಪುರ ಅವರು ಅಶ್ವಿನಿ ಗೌಡ ಅವರಿಗೆ ಕ್ಷಮೆ ಕೇಳಿದ್ದನ್ನು ರಿವೀಲ್ ಮಾಡಿದರು. ಅಶ್ವಿನಿ ಗೌಡ ಅವರ ಬಳಿ ಹೋಗಿ ನನಗೆ ಗೊತ್ತಾಗಲಿಲ್ಲ, ಕ್ಷಮಿಸಿಬಿಡಿ ಎಂದು ಕೇಳಿ ಗೋಳಾಡಿರುವುದನ್ನು ಹೇಳಿದ್ದಾರೆ.
36
ಎಲ್ಲರನ್ನೂ ಮೆಚ್ಚಿಸಬೇಕಾದ ಅಗತ್ಯವಿಲ್ಲ
ಇದಕ್ಕೆ ಉತ್ತರ ಕೊಟ್ಟ ಚೈತ್ರಾ ಕುಂದಾಪುರ ಎಲ್ಲರ ಮುಂದೆ ಕ್ಷಮೆ ಕೇಳಿದರೆ ನಾನು ಫೇಕ್ ಆಗುವುದಿಲ್ಲವೇ? ಕ್ಯಾಮೆರಾ ಇಲ್ಲದಾಗ ಕೇಳಿದರೆ ಒಂದು ಲೆಕ್ಕ. ಯಾರಿಗೆ ತಲುಪಬೇಕೋ ಅವರಿಗೆ ತಲುಪಿದೆ. ಊರಲ್ಲಿ ಇರೋರನ್ನೆಲ್ಲಾ ಮೆಚ್ಚಿಸಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.
ಆಗ ಕಾವ್ಯ ಅವರು ನಿಮ್ಮ ತಪ್ಪಿನ ಅರಿವಾಯ್ತಾ ಚೈತ್ರಕ್ಕ ಎಂದು ಕೇಳಿದಾಗ, ಹೌದು ತಪ್ಪಿನ ಅರಿವಾಗಿದೆ. ನಾನು ದೇವರ ಮುಂದೆ ಕುಳಿತುಕೊಂಡಾಗ ನಾನು ಎಂಜಲು ಉಗುಳಿದ್ದು, ಪರಚಿದ್ದು ತಪ್ಪಾಗಿದೆ ಎಂದು ಒಪ್ಪಿಕೊಂಡರು. ನಿನ್ನೆ ನಾವು ಅಷ್ಟೂ ಜನ ನೀವು ಮಾಡ್ತಿರೋದು ತಪ್ಪು ಎಂದಾಗ ಅರಿವಾಗಲಿಲ್ಲವೇ ಎಂದು ಕೇಳಿದಾಗ, ಹೌದು ನಾನು ಯಾರು ಹೇಳಿದ ಮಾತೂ ಕೇಳಲ್ಲ. ದೇವರ ಮುಂದೆ ಕುಳಿತಾಗ ತಪ್ಪು ಅನಿಸಿದರೆ ಕ್ಷಮೆ ಕೇಳ್ತೇನೆ ಎಂದು ಚೈತ್ರಾ ಕುಂದಾಪುರ ಹೇಳಿದರು.
56
ತುಂಬಾ ಸಾಫ್ಟ್ ಆದ ಅಶ್ವಿನಿ ಗೌಡ
ನಂತರ ಗಿಲ್ಲಿ ನಟ ಮಾತು ಮುಂದುವರೆಸಿ, ಅಶ್ವಿನಿ ಗೌಡ ಅವರು ತುಂಬಾ ಸಾಫ್ಟ್ ಆಗಿದ್ದಾರೆ. ತಪ್ಪು ಯಾರೇ ಮಾಡಿದ್ದರೂ ಅವರನ್ನು ಸುಮ್ಮನೆ ಮಾತನಾಡಿಸಿ ಹೋಗ್ತಾರೆ. ತಪ್ಪು ಮಾಡಿದವರನ್ನೂ ಕರೆದು ಊಟ ಕೊಡ್ತಾರೆ. ಅಶ್ವಿನಿ ಗೌಡ ಅವರು ಒಂದು ತರಹ ಅನ್ನಪೂರ್ಣೇಶ್ವರಿ ಆಗಿದ್ದಾರೆ ಎಂದು ಗಿಲ್ಲಿನಟ ಹೇಳಿದರು.
66
ಘಟನೆಯ ಹಿನ್ನೆಲೆಯೇನು?
ಬಿಗ್ ಬಾಸ್ ಮನೆಯಲ್ಲಿ ಕಳೆದೆರಡು ದಿನಗಳ ಹಿಂದೆ ತಟ್ಟೆ ಜೋಡಿಸುವ ಮೊದಲ ಟಾಸ್ಕ್ ನಲ್ಲಿ ಚೈತ್ರ ಕುಂದಾಪುರ ಅಶ್ವಿನಿ ಗೌಡ ಅವರನ್ನು ಬಗ್ಗಿಸಲು ಕೈಯಿಂದ ಉಗುರಿನಿಂದ ಪರಚಿ ಗಾಯ ಮಾಡಿದ್ದರು. 12ನೇ ವಾರದಲ್ಲಿ ನಡೆಯುತ್ತಿರುವ ಕ್ಯಾಪ್ಟನ್ ಟಾಸ್ಕ್ ಗೆ ಸ್ಪರ್ಧಿಗಳನ್ನು ಆಯ್ಕೆ ಮಾಡಲು ನೀಡಿದ ಟಾಸ್ಕ್ ನಲ್ಲಿ ತಟ್ಟೆಗಳನ್ನು ಜೋಡಿಸುವ ವೇಳೆ ಅದನ್ನು ತಡೆಯಲು ಮುಂದಾದ ಅಶ್ವಿನಿ ಗೌಡ ಅವರಿಗೆ ತುಂಬಾ ಗಾಯ ಮಾಡಿದ್ದಾರೆ.
ಟಾಸ್ಕ್ ಉಸ್ತುವಾರಿ ಆಗಿದ್ದ ರಾಶಿಕಾ ಅವರು ಉಗುರಿನಿಂದ ಪರಚಬೇಡಿ ಎಂದು ಹೇಳಿದರೂ ಕೇಳದೆ ಅಶ್ವಿನಿ ಗೌಡ ಅವರಿಗೆ ಪರಚುವುದನ್ನು ಮುಂದುವರೆಸಿ, ಬಟ್ಟೆ ಮೇಲೆ ಎತ್ತುವುದು, ಬಾಯಿಂದ ಮುಖಕ್ಕೆ ಎಂಜಲು ಉಗುಳುವುದನ್ನು ಮಾಡಿದ್ದರು. ಇದೀಗ ಅಶ್ವಿನಿ ಗೌಡ ಅವರ ಮುಂದೆ ಕ್ಷಮೆ ಕೇಳಿದ್ದಾರೆ.