Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಸೂಪರ್ ಸಂಡೇ ವಿಥ್ ಸುದೀಪ ಎಪಿಸೋಡ್ ನಡೆದಿದೆ. ವಾಹಿನಿಯು ಪ್ರೋಮೋ ರಿಲೀಸ್ ಮಾಡಿದ್ದು, ಅದರಲ್ಲಿ ಗಿಲ್ಲಿ ನಟನಿಗೆ ಕಾವ್ಯ ಶೈವ ಅವರು ವಾರ್ನ್ ಮಾಡಿದ್ದಾರೆ.
ಈ ಜರ್ನಿಯಲ್ಲಿ ಯಾವ ದಿನಕ್ಕೆ ವಾಪಾಸ್ ಹೋಗಬಹುದು ಎಂದು ಅನಿಸುತ್ತದೆ? ಯಾವ ಘಟನೆಯನ್ನು ಸರಿ ಪಡಿಸಬಹುದು ಎಂದು ಅನಿಸುತ್ತದೆ ಎಂದು ಕಿಚ್ಚ ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ.
25
ರಕ್ಷಿತಾ ಶೆಟ್ಟಿ ಏನು ಹೇಳಿದರು?
ಆಗ ರಕ್ಷಿತಾ ಶೆಟ್ಟಿ ಅವರು ಮೊದಲ ದಿನಕ್ಕೆ ಹೋಗಲು ಬಯಸುತ್ತೇನೆ ಎಂದಿದ್ದಾರೆ. ಅಲ್ಲಿ ನಾನು ಮಾತನಾಡಬೇಕಿತ್ತು, ಮಾತನಾಡಿರಲಿಲ್ಲ ಎಂದಿದ್ದಾರೆ. ರಕ್ಷಿತಾ ಜೊತೆ ಜಗಳ ಆಗಿದೆ, ಅದೆಲ್ಲ ಆಗಬಾರದಿತ್ತು ಎಂದು ಹೇಳಿ ಅಶ್ವಿನಿ ಗೌಡ ಅವರು ಕ್ಷಮೆ ಕೇಳಿದರು.
35
ಮೊದಲ ದಿನ ಏನಾಗಿತ್ತು?
ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯೊಳಗಡೆ ಬಂದಾಗ, ಒಬ್ಬರು ಮನೆಯಿಂದ ಹೊರಗಡೆ ಹೋಗಬೇಕು ಎಂದು ಹೇಳಲಾಗುವುದು. ಆಗ ಮನೆಯವರು ರಕ್ಷಿತಾ ಶೆಟ್ಟಿಯನ್ನು ಹೊರಗಡೆ ಹಾಕಬೇಕು ಎನ್ನುತ್ತಾರೆ. ಆಗ ರಕ್ಷಿತಾ ಮಾತನಾಡದೆ ಹೊರಗಡೆ ಬಂದಿದ್ದರು.
ಗಿಲ್ಲಿ ನಟ ಅವರು ನನ್ನನ್ನು ರೇಗಿಸುತ್ತಲೇ ಇದ್ದರು, ಆರಂಭದಲ್ಲಿ ನಾನು ಗಿಲ್ಲಿಯನ್ನು ನಿಲ್ಲಿಸಿದ್ದರೆ ಇಲ್ಲಿಯವರೆಗೆ ಟ್ರಾವೆಲ್ ಆಗುತ್ತಿರಲಿಲ್ಲ. ಗಿಲ್ಲಿ, ಮತ್ತೆ ನನ್ನ ರೇಗಿಸಬೇಡ, ಇಷ್ಟ ಆಗಲ್ಲ ಎಂದು ಕಾವ್ಯ ಶೈವ ಅವರು ಗಿಲ್ಲಿ ನಟನಿಗೆ ಹೇಳಿದ್ದಾರೆ.
55
ಕಾವ್ಯಳಿಗೆ ಹೆಸರು ಬಂತು
ಗಿಲ್ಲಿ ನಟ ಅವರು ಕಾವ್ಯರನ್ನು ರೇಗಿಸುತ್ತಿದ್ದರು. ಒಂದಿಷ್ಟು ಟೈಮ್ ಕಾವ್ಯ ಶೈವ ತಡೆದರು. ಆದರೆ ಗಿಲ್ಲಿಯಿಂದಲೇ ಕಾವ್ಯ, ಕಾವ್ಯ ಪ್ರಿ ಪ್ರೊಡಕ್ಟ್ ಎನ್ನಲಾಗಿತ್ತು. ಹೀಗಾಗಿ ಗಿಲ್ಲಿಯಿಂದಲೇ ಕಾವ್ಯ ಎನ್ನೋ ಮಾತು ಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.