Bigg Boss Kannada Season 12 Winner Gilli Nata : ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗೆದ್ದಿರುವ ಗಿಲ್ಲಿ ನಟ ಅವರು ಡಾ ಶಿವರಾಜ್‌ಕುಮಾರ್, ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರನ್ನು ಕೂಡ ಭೇಟಿ ಮಾಡಿದ್ದರು.
ಅನೇಕ ರಾಜಕೀಯ ನಾಯಕರು, ಚಿತ್ರರಂಗದವರು ಗಿಲ್ಲಿ ನಟನಿಗೆ ಶುಭಾಶಯ ತಿಳಿಸಿದ್ದರು. ಅಷ್ಟೇ ಅಲ್ಲದೆ ಗಿಲ್ಲಿ ಹೋದಲ್ಲಿ, ಬಂದಲ್ಲಿ ಅನೇಕರು ಸೇರುವುದುಂಟು. ಅಂದಹಾಗೆ ಕಿಚ್ಚ ಸುದೀಪ್ ಅವರ ಮನೆಗೆ ಹೋಗಿರುವ ಗಿಲ್ಲಿ ಅವರು ಬಿರಿಯಾನಿ ಸವಿದಿದ್ದಾರೆ.
25
ಬಿರಿಯಾನಿ ಊಟ
ಕಿಚ್ಚ ಸುದೀಪ್ ಅವರು ಅಡುಗೆ ಮಾಡೋದರಲ್ಲಿ ಎತ್ತಿದ ಕೈ. ಮನೆಗೆ ಬಂದ ಗಿಲ್ಲಿ ನಟನಿಗೆ ಬಿರಿಯಾನಿಯನ್ನು ಕೂಡ ನೀಡಿದ್ದಾರೆ.
35
ಹತ್ತು ಲಕ್ಷ ರೂಪಾಯಿ ಹಣ ಕೊಟ್ಟರು
ಅಷ್ಟೇ ಅಲ್ಲದೆ ಬಿಗ್ ಬಾಸ್ ವೇದಿಕೆ ಮೇಲೆ ಮಾತು ಕೊಟ್ಟಂತೆ ಗಿಲ್ಲಿ ನಟನಿಗೆ ಹತ್ತು ಲಕ್ಷ ರೂಪಾಯಿ ಹಣವನ್ನು ಕೂಡ ನೀಡಿದ್ದರು. ಈ ಬಗ್ಗೆ ಗಿಲ್ಲಿ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ.
ಕಿಚ್ಚ ಸುದೀಪ್ ಅವರು ಮನೆಗೆ ಕರೆಸಿ ಹತ್ತು ಲಕ್ಷ ರೂಪಾಯಿ ಹಣವನ್ನು ನೀಡಿದ್ದಾರೆ ಎಂದು ಗಿಲ್ಲಿ ನಟ ಹೇಳಿದ್ದಾರೆ, ಅಷ್ಟೇ ಅಲ್ಲದೆ ಕಿಚ್ಚ ಸುದೀಪ್ ಅವರ ಗುಣವನ್ನು, ಅವರ ಒಳ್ಳೆಯತನವನ್ನು ಹೊಗಳಿದ್ದಾರೆ.
55
ಆರಾಮಾಗಿರಿ
ಫಿನಾಲೆಯಲ್ಲಿಯೂ ಕೂಡ ಕಿಚ್ಚ ಸುದೀಪ್ ಅವರು ನನ್ನ ಹಾಗೂ ರಕ್ಷಿತಾರನ್ನು ಕರೆದು, “ಯಾವುದನ್ನೂ ತಲೆಗೆ ತಗೋಬೇಡಿ, ಆರಾಮಾಗಿರಿ, ಸೂಕ್ಷ್ಮವಾಗಿ ಹೆಜ್ಜೆ ಇಡಿ ಎಂದು ಬುದ್ಧಿ ಹೇಳಿದ್ದಾರೆ” ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.