Bigg Boss Kannada Season 12 Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಒಬ್ಬರ ಮೇಲೆ ಕೈ ಎತ್ತೋದು ನಿಯಮ ಉಲ್ಲಂಘನೆ ಆಗುವುದು. ಆದರೆ ಗಿಲ್ಲಿ ನಟನ ಮೇಲೆ ರಿಷಾ ಗೌಡ ಕೈ ಎತ್ತಿದ್ದರು. ಈ ಕಾರಣಕ್ಕೆ ರಿಷಾ ಗೌಡ ಔಟ್ ಆದರಾ ಎಂದು ಕಾದು ನೋಡಬೇಕಿದೆ. ವಾಹಿನಿಯು ಪ್ರೋಮೋ ರಿಲೀಸ್ ಮಾಡಿದೆ.
ಬಾತ್‌ರೂಮ್‌ವೊಳಗಡೆ ಹೋಗಿದ್ದ ರಿಷಾ ಗೌಡ ಅವರು ಬಕೆಟ್ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಗಿಲ್ಲಿ ನಟ ಅವರು ರಿಷಾರ ಬಟ್ಟೆಯನ್ನು ಬಾತ್‌ರೂಮ್ ಏರಿಯಾದಲ್ಲಿ ಇಟ್ಟಿದ್ದರು. ಆಮೇಲೆ ಗಿಲ್ಲಿಗೆ ರಿಷಾ ಹೊಡೆದಿದ್ದರು. ಇದುವರೆಗೂ ಕ್ರಮ ಕೈಗೊಂಡಿರಲಿಲ್ಲ. ವೀಕೆಂಡ್ ಎಪಿಸೋಡ್‌ನಲ್ಲಿ ಚರ್ಚೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಈಗ ನಿರ್ಧಾರಕ್ಕೆ ಬಂದಿದ್ದಾರೆ.
25
ಕಿಚ್ಚ ಸುದೀಪ್ ಪಾಠ ಏನು?
“ಕೈ ಇರೋದನ್ನು ಒಳ್ಳೆಯದಕ್ಕೆ ಅಥವಾ ಗೆಲ್ಲೋದಿಕ್ಕೆ ಬಳಸಿಕೊಳ್ಳಬೇಕು. ಇದೇ ಥರ ಒಬ್ಬ ಹುಡುಗ ಏನಾದರೂ ಹುಡುಗಿಗೆ ಹೊಡೆದಿದ್ದರೆ ಏನೇನೆಲ್ಲ ಆಗಿರೋದು! ಬಿಗ್ ಬಾಸ್ ಮನೆಯಲ್ಲಿ ಮತ್ತೆ ಈ ರೀತಿ ಆಗಬಾರದು” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
35
ಸ್ಪರ್ಧಿಗಳ ನಿರ್ಧಾರ
“ಬಿಗ್ ಬಾಸ್ ಮನೆಯಲ್ಲಿ ಹೀಗೆ ಆಗಬಾರದು, ಅದಿಕ್ಕೆ ಈಗ ಶಂಕುಸ್ಥಾಪನೆ ಆಗಬೇಕು. ಸ್ಪರ್ಧಿಗಳ ಮುಂದೆ ಎರಡು ಕಾರ್ಡ್ ಇದೆ. ಯೆಲ್ಲೋ ಕಾರ್ಡ್ ಕೊಟ್ಟು ವಾರ್ನ್ ಮಾಡಿ ಸುಮ್ಮನೆ ಬಿಡಬಹುದು ಅಥವಾ ರೆಡ್ ಕಾರ್ಡ್ ಕೊಟ್ಟು, ಹೊರಗಡೆ ಹೋಗಿ ಎಂದು ಹೇಳಬೇಕು” ಎಂದಿದ್ದಾರೆ ಕಿಚ್ಚ ಸುದೀಪ್.
ಈಗ ಯಾವ ಸ್ಪರ್ಧಿಗಳು ಯೆಲ್ಲೋ ಕಾರ್ಡ್ ಕೊಡುತ್ತಾರೆ, ರೆಡ್ ಕಾರ್ಡ್ ಕೊಡುತ್ತಾರೆ ಎಂದು ಕಾದು ನೋಡಬೇಕಿದೆ. ಅಂದಹಾಗೆ ಸ್ಪರ್ಧಿಗಳು ಬಹುತೇಕ ರೆಡ್ ಕಾರ್ಡ್ ಕೊಡುತ್ತಾರೆ ಎಂದು ಕಾಣುತ್ತಿದೆ. ಇದಕ್ಕಾಗಿಯೇ ರಿಷಾ ಗೌಡ ಅವರು ಅತ್ತಿದ್ದಾರೆ.
55
ಗಿಲ್ಲಿ ನಟನಿಗೆ ಕ್ಲಾಸ್ ತಗೋತಾರಾ?
ರಿಷಾ ಗೌಡ ಅವರು ಎಲಿಮಿನೇಟ್ ಆಗಿಲ್ಲ ಎಂದು ಕಾಣುತ್ತಿದೆ. ಇದರ ಬದಲಿಗೆ ಅವರು ಅಲ್ಲಿಯೇ ಉಳಿದುಕೊಂಡಿರಬಹುದು, ರಿಷಾ ಅವರು ಹೊರಗಡೆ ಬಂದಿದ್ದರೆ ಇಷ್ಟೊತ್ತಿಗೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಆಗುತ್ತಿತ್ತು.
ಹೆಣ್ಣು ಮಕ್ಕಳ ಬಟ್ಟೆಯನ್ನು ಮುಟ್ಟಿದ್ದಕ್ಕೆ ಗಿಲ್ಲಿ ನಟನಿಗೆ ಕ್ಲಾಸ್ ತಗೊಂಡಿದ್ದಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.