'ಅಮೃತಧಾರೆ' ಖ್ಯಾತಿಯ ನಟ ಆನಂದ್ ಕುಮಾರ್, ತಮಿಳಿನ 'ಗಟ್ಟಿಮೇಳಂ' ಸೀರಿಯಲ್‌ನಲ್ಲಿನ ತಮ್ಮ ಮೂಕಾಭಿನಯಕ್ಕಾಗಿ ಉತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಅವರು ತಮ್ಮ ತಾಯಿಗೆ ಸನ್ನೆಗಳ ಮೂಲಕವೇ ಈ ಸಂತಸದ ಸುದ್ದಿ ತಿಳಿಸಿ ಭಾವುಕ ಕ್ಷಣವನ್ನು ಸೃಷ್ಟಿಸಿದರು.
ಅಮೃತಧಾರೆ (Amruthadhaare) ಆನಂದ್ ನಿಜವಾದ ಹೆಸರು ಕೂಡ ಆನಂದ್ ಕುಮಾರ್. ಅವರ ಅಭಿನಯಕ್ಕೆ ಮನಸೋಲದವರೇ ಇಲ್ಲ ಎನ್ನಬಹುದು. ಅಮೃತಧಾರೆ ಸೀರಿಯಲ್ನಲ್ಲಿ ಗೌತಮ್ನ ಜೀವನ ಗೆಳೆಯನಾಗಿ, ಇದ್ದರೆ ಇಂಥ ಸ್ನೇಹಿತ ಇರಬೇಕು ಎಂದು ತೋರಿಸಿಕೊಟ್ಟವರು ಆನಂದ್.
26
ತಮಿಳಿನ ಸೀರಿಯಲ್ನಲ್ಲಿಯೂ ಆ್ಯಕ್ಟೀವ್
ಇವರು ಕನ್ನಡದಲ್ಲಿ ಮಾತ್ರವಲ್ಲದೇ ತಮಿಳಿನ ಸೀರಿಯಲ್ನಲ್ಲಿಯೂ ಆ್ಯಕ್ಟೀವ್ ಆಗಿದ್ದಾರೆ. ಅಲ್ಲಿ ಗಟ್ಟಿಮೇಳಂ ಎನ್ನುವ ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ. ಇದು ಕನ್ನಡದ ಲಕ್ಷ್ಮೀ ನಿವಾಸದ ರೀಮೇಕ್. ಇದರಲ್ಲಿ ಚೆಲುವಿ ಪಾತ್ರಧಾರಿ ಬದಲಾಗಿಲ್ಲ. ಆದರೆ ವೆಂಕಿ ಪಾತ್ರವನ್ನು ತಮಿಳಿನಲ್ಲಿ ಇದೇ ಆನಂದ್ ನಿರ್ವಹಿಸುತ್ತಿದ್ದಾರೆ. ಇಂದು ನಟ-ನಟಿಯರು ಬೇರೆ ಬೇರೆ ಭಾಷೆಗಳ ಸೀರಿಯಲ್ಗಳಲ್ಲಿ ನಟಿಸುವುದು ಮಾಮೂಲು. ಅದರಂತೆಯೇ ಈ ಇಬ್ಬರು ತಾರೆಯರೂ ತಮಿಳು ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ.
36
ಮೂಕಾಭಿನಯಕ್ಕೆ ಮನಸೋಲದವರೇ ಇಲ್ಲ
ಈ ಸೀರಿಯಲ್ನ ಅವರ ಮೂಕಾಭಿನಯಕ್ಕೆ ಮನಸೋಲದವರೇ ಇಲ್ಲ. ಕನ್ನಡದಲ್ಲಿ ವೆಂಕಿ ಪಾತ್ರದಲ್ಲಿ ನಟಿಸುತ್ತಿರುವ ನಟ ಚಂದ್ರಶೇಖರ್ ಶಾಸ್ತ್ರಿ ಅವರು ಹೇಗೆ ತಮ್ಮ ಮೂಕಾಭಿನಯದಿಂದ ಎಲ್ಲರ ಕಣ್ಣಿನಲ್ಲಿ ನೀರು ತರಿಸುವಂಥ ಅದ್ಭುತ ನಟನೆ ಮಾಡುತ್ತಿದ್ದಾರೋ, ತಮಿಳಿನಲ್ಲಿ ಆನಂದ್ ಅವರೂ ಅದೇ ರೀತಿಯ ಅಭಿನಯ ಮಾಡುತ್ತಿದ್ದಾರೆ.
ಈ ಪಾತ್ರಕ್ಕೆ ಆನಂದ್ ಅವರಿಗೆ ಉತ್ತಮ ನಟ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರ ಅಮ್ಮ ಹಾಜರು ಇದ್ದರು. ಬಹುಶಃ ಅವರಿಗೆ ಕಿವಿ ಕೇಳಿಸುವುದಿಲ್ಲ ಎಂದು ಎನ್ನಿಸುತ್ತದೆ. ಅದಕ್ಕಾಗಿಯೇ ತಮ್ಮ ಮೂಕ ಅಭಿನಯದಿಂದಲೇ ಆನಂದ್ ಅವರು, ತಮಗೆ ಪ್ರಶಸ್ತಿ ಸಿಕ್ಕಿದ್ದನ್ನು ತೋರಿಸಿದರು.
56
ಆಶೀರ್ವದಿಸಿದ ಅಮ್ಮ
ಪ್ರೇಕ್ಷಕರ ಜಾಗದಲ್ಲಿ ಕುಳಿತಿದ್ದ ಅಮ್ಮ ಅಲ್ಲಿಂದಲೇ ಆಶೀರ್ವದಿಸಿದರು. ಆದರೆ, ಈ ಅಮ್ಮ-ಮಗನ ಬಾಂಧವ್ಯ ಅಲ್ಲಿದ್ದವರಿಗೆ ಕಣ್ಣೀರು ತರಿಸಿತು. ಅದರಲ್ಲಿಯೂ ಆನಂದ್ ಅವರು ಮೂಕಾಭಿನಯದಿಂದ ಅಮ್ಮನಿಗೆ ವಿವರಿಸಿದ್ದನ್ನು ನೋಡಿ ಎಲ್ಲರೂ ಕಣ್ಣೀರು ಹಾಕಿದರು.
66
ಆನಂದ್ ರಿಯಲ್ ಲೈಫ್ ಸ್ಟೋರಿ
ಇನ್ನು ಆನಂದ್ ಅವರ ಕುರಿತು ಹೇಳುವುದಾದರೆ, ಪತ್ನಿಯ ಹೆಸರು ಚೈತ್ರಾ. ಇವರ ಮಗ ದುಷ್ಯಂತ್ ಅಮೃತಧಾರೆ (Amruthadhaare)ಯಲ್ಲಿ ತರ್ಲೆ ಆಕಾಶ್ ಆಗಿ ಜನಮೆಚ್ಚುಗೆ ಗಳಿಸಿದ್ದಾನೆ. ಮದುವೆ ಸಂದರ್ಭದಲ್ಲಿ ಚೈತ್ರಾ ಅವರು ದಪ್ಪ ಇರುವ ಕಾರಣದಿಂದ ಅವರಿಗೆ ಮಕ್ಕಳಾಗುವುದಿಲ್ಲ ಎಂದು ಆನಂದ್ ಮನೆಯವರು ಮದುವೆ ಒಪ್ಪಿರಲಿಲ್ಲವಂತೆ. ಅದೇ ವೇಳೆ, ಆನಂದ್ ಕಲಾವಿದ ಎಂದು ಚೈತ್ರಾ ಮನೆಯವರು ಒಪ್ಪಿರಲಿಲ್ಲ. ಈಗ ದಂಪತಿ ಸುಖೀ ಜೀವನ ನಡೆಸುತ್ತಿದ್ದಾರೆ.