ಹಲವು ರೋಚಕ ತಿರುವುಗಳ ನಡುವೆ ಕ್ಯಾಪ್ಟನ್ ಪಟ್ಟಕ್ಕಾಗಿ ಆಡಲು ಸೂರಜ್, ರಘು, ಗಿಲ್ಲಿ ನಟ ಮತ್ತು ಕಾವ್ಯಾ ಆಯ್ಕೆಯಾಗಿದ್ದಾರೆ. ಇದೀಗ ನಾಲ್ವರು ಜಂಟಿಯಾಗಿ ಕ್ಯಾಪ್ಟನ್ಸಿ ಟಾಸ್ಕ್ ಆಡುತ್ತಿದ್ದಾರೆ. ಈ ಆಟದಲ್ಲಿ ಸೂರಜ್-ಕಾವ್ಯಾ ಮತ್ತು ರಘು-ಗಿಲ್ಲಿ ಜೊತೆಯಾಗಿದ್ದಾರೆ. ಈ ಆಟದ ಉಸ್ತುವಾರಿಯನ್ನು ಕ್ಯಾಪ್ಟನ್ ರಾಶಿಕಾ ಮಾಡುತ್ತಿದ್ದಾರೆ.