ಗಿಲ್ಲಿನಟನ ಗೆಲುವಿನ ಬಗ್ಗೆ ಜಗದೀಶ್ ಶಾಕಿಂಗ್ ಹೇಳಿಕೆ; ಆಸಿಯಾ ಮಾತುಗಳು ಅರ್ಥ ಏನು?

Published : Oct 06, 2026, 11:03 AM IST

ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಜಗದೀಶ್ ಮತ್ತು ಆಸಿಯಾ ಅವರು ಹಿಂದಿನ ಸೀಸನ್ ವಿನ್ನರ್ ಗಿಲ್ಲಿನಟನ ಗೆಲುವಿನ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ್ದಾರೆ. ಮತ್ತೊಂದೆಡೆ ವೈಲ್ಡ್ ಕಾರ್ಡ್ ಸ್ಪರ್ಧಿ ಪ್ರಶಾಂತ್ ಹೊರಗಿನ ವಿಚಾರಗಳನ್ನು ಸೌಂದರ್ಯಾಗೆ ಹೇಳುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ.

PREV
15
ಗಿಲ್ಲಿನಟ ಗೆದ್ದಿದ್ದು ಹೇಗೆ?

ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ, ಸೀಸನ್ 12ರ ವಿನ್ನರ್ ಹಾಸ್ಯ ಕಲಾವಿದ ಗಿಲ್ಲಿನಟ ಗೆದ್ದಿದ್ದು ಹೇಗೆ ಎಂಬುದರ ಬಗ್ಗೆ ಚರ್ಚೆಗಳು ನಡೆದಿವೆ. ಬಿಗ್‌ಬಾಸ್ ಸೀಸನ್ 13 ಇದೀಗ ಐದನೇ ವಾರಕ್ಕೆ ಕಾಲಿಟ್ಟಿದೆ. ಇಷ್ಟು ದಿನ ತಾವು ಹೇಗೆ ಆಡಬೇಕು ಎಂಬುದರ ಬಗ್ಗೆ ಯೋಚಿಸುತ್ತಿದ್ದ ಸ್ಪರ್ಧಿಗಳು, ಇದೀಗ ಎದುರಾಳಿಗಳ ಆಟ ಹೇಗಿದೆ ಎಂಬುದರ ವಿಶ್ಲೇಷಣೆಯಲ್ಲಿ ತೊಡಗಿಕೊಂಡಿದ್ದಾರೆ.

25
ಆಸಿಯಾ & ಜಗದೀಶ್ ಮಾತು

ಹೌದು, ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳಾಡುವ ಪ್ರತಿಯೊಂದು ಮಾತುಗಳನ್ನು ವೀಕ್ಷಕರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಭಾನುವಾರದ ಸಂಚಿಕೆಯಲ್ಲಿ ಜಗದೀಶ್ ಮತ್ತು ಆಸಿಯಾ ಫಿರ್ದೋಸ್ ಅವರ ಸಂಭಾಷಣೆ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಹಿಂದಿನ ವಿನ್ನರ್‌ಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಆಸಿಯಾ ಮತ್ತು ಜಗದೀಶ್ ವ್ಯಕ್ತಪಡಿಸಿದ್ದಾರೆ. ಆದ್ರೆ ಇವರಿಬ್ಬರ ಸಂಭಾಷಣೆ ಗಿಲ್ಲಿನಟ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

35
ಟಾಸ್ಕ್ ಎಷ್ಟು ಮುಖ್ಯ?

ವೈರಲ್ ಆಗುತ್ತಿರುವ ವಿಡಿಯೋ ಪ್ರಕಾರ, ಜಗದೀಶ್ ಮತ್ತು ಆಸಿಯಾ ಮಾತುಗಳು ಹೀಗಿವೆ. ಗಿಲ್ಲಿನಟ ಕೇವಲ ಕಾಮಿಡಿ ಮಾಡಿಕೊಂಡೇ ಸೀಸನ್ ಗೆದ್ದಬಿಟ್ಟ ಎಂದು ಜಗದೀಶ್ ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ಆಸಿಯಾ, ಹಿಂದಿನ ಸೀಸನ್‌ಗಳಲ್ಲಿ ವಿನ್ನರ್ ಆದವ್ರು ಅಥವಾ ಫಿನಾಲೆಗೆ ಬಂದವರು ಕೇವಲ ಟಾಸ್ಕ್ ಆಡ್ಕೊಂಡು ಗೆದ್ದಿದ್ದಾರೆ ಅಂತೇನಿಲ್ಲ ಎಂಬ ಮಾತುಗಳನ್ನಾಡುತ್ತಾರೆ.

45
ನಿಯಮ ಉಲ್ಲಂಘಿಸಿದ ಪ್ರಶಾಂತ್

ಇನ್ನು ವೈಲ್ಡ್ ಕಾರ್ಡ್ ನಲ್ಲಿ ಬಂದಿರುವ ಪ್ರಶಾಂತ್, ಬಿಗ್‌ಬಾಸ್ ಮನೆಯ ಮೂಲನಿಯಮವನ್ನು ಬ್ರೇಕ್ ಮಾಡಿದ್ದಾರೆ. ಮೂರು ವಾರಗಳ ನಂತರ ಬಿಗ್‌ಬಾಸ್ ಶೋಗೆ ಆಗಮಿಸಿರುವ ಸ್ಪರ್ಧಿಗಳಿಗೆ ಹೊರಗಿನ ವಿಚಾರಗಳು ಗೊತ್ತಿರುತ್ತವೆ. ಆದ್ರೆ ಈ ವಿಷಯಗಳನ್ನು ಯಾರೊಂದಿಗೆ ಹಂಚಿಕೊಳ್ಳುವಂತಿಲ್ಲ ಎಂಬ ನಿಯಮವಿದೆ. ಆದ್ರೆ ಪ್ರಶಾಂತ್ ಈ ನಿಯಮವನ್ನು ಬ್ರೇಕ್ ಮಾಡಿದ್ದಾರೆ.

55
ಸೌಂದರ್ಯಾ ಶೆಟ್ಟಿಗೆ ಹೇಳಿದ್ದೇನು?

ವೀಕ್ಷಕರು ಸೌಂದರ್ಯಾ ಶೆಟ್ಟಿ, ಯಶಸ್ ಕೃಷ್ಣ ಮತ್ತು ಆಸಿಯಾ ಅವರನ್ನು ಹೇಗೆ ನೋಡ್ತಿದ್ದಾರೆ ಎಂಬ ಮಾಹಿತಿಯನ್ನು ಪ್ರಶಾಂತ್ ರಿವೀಲ್ ಮಾಡಿದ್ದಾರೆ. ಇದರಿಂದಾಗಿ ಸೌಂದರ್ಯಾ ಶೆಟ್ಟಿ ಕೊಂಚ ಅಲರ್ಟ್ ಆಗಿದ್ದಾರೆ. ಈ ವೀಕೆಂಡ್‌ನಲ್ಲಿ ಪ್ರಶಾಂತ್‌ ಅವರಿಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories