'ಯಪ್ಪಾ ದೇವರಾಣೆಗೂ..' ಸೌಂದರ್ಯಗೆ ಲಿಖಿತ್ ಟ್ರೈ ಮಾಡಿದ್ದು ನಿಜಾನಾ? ಸತ್ಯ ರಿವೀಲ್

Published : Oct 05, 2026, 08:28 PM IST

ಈ ವಾರ ಬಿಗ್‌ ಬಾಸ್ ಮನೆಯಿಂದ ಲಿಖಿತ್ ಗೊಂದಿ ಹೊರ ಬಂದಿದ್ದಾರೆ. ಹೊರ ಬಂದ ಬೆನ್ನಲ್ಲೇ ಮಾಧ್ಯಮಗಳ ಸಂದರ್ಶನಕ್ಕೆ ಸಿಕ್ಕಿದ್ದು, ಈ ವೇಳೆ ವೀಕ್ಷಕರಿಗೆ ಇದ್ದ ಕೆಲವು ಗೊಂದಲಗಳು ಹಾಗೂ ಅನುಮಾನಗಳಿಗೆ ಅವರೇ ಖುದ್ದು ಉತ್ತರ ನೀಡಿದ್ದಾರೆ. ಏನಂದ್ರು ಲಿಖಿತ್? ಸ್ಟೋರಿ ಓದಿ..

PREV
14
ಸುಮ್ಮನೆ ಫನ್ ಅಷ್ಟೇ

ಬಿಗ್ ಬಾಸ್ ಮನೆಯಲ್ಲಿ ಸೌಂದರ್ಯ ಮೇಲೆ ಲಿಖಿತ್‌ಗೆ ಸಾಣೆ ಲವ್ ಆಗಿದೆ ಎಂದು ವೀಕ್ಷಕರು ಅನ್ಕೊಂಡಿದ್ದರು. ಜೊತೆಗೆ ಕಿಚ್ಚನ ಪಂಚಾಯ್ತಿಯಲ್ಲೂ ಟ್ರೈ ಮಾಡ್ತಿದ್ದಾರೆ ಎಂಬ ವಿಚಾರ ಚರ್ಚೆ ಆಗಿತ್ತು. ಅದಕ್ಕೆ ಉತ್ತರಿಸಿರುವ ಲಿಖಿತ್.. ಯಪ್ಪಾ ದೇವರಾಣೆಗೂ ಇಲ್ಲ. ಸೌಂದರ್ಯ ನನ್ನ ಟೈಪ್‌ ಅಲ್ಲ. ಅದೆಲ್ಲ ಸುಮ್ಮನೆ ಫನ್‌ ಅಷ್ಟೇ. ಲಿಖಿತ್ ಸೌಂದರ್ಯಗೆ ಟ್ರೈ ಮಾಡ್ತಿದ್ದಾರೆ ಅನ್ನೋ ಅನುಮಾನ ವೀಕ್ಷಕರದ್ದಾಗಿತ್ತು.

24
ಪ್ರೀತಿಯ ಫೀಲಿಂಗ್ ಇರಲಿಲ್ಲ

ನಾವಿಬ್ಬರೂ ಜಸ್ಟ್ ಗುಡ್ ಫ್ರೆಂಡ್ಸ್ ಅಷ್ಟೇ. ಮನೆಯಲ್ಲಿ ನಾನು ಅವರ ಜೊತೆ ಫ್ಲರ್ಟ್ ಮಾಡ್ತಿದ್ದದ್ದು ಕೇವಲ ಫನ್‌ಗಾಗಿ ಮಾತ್ರ. ಸಾಮಾನ್ಯವಾಗಿ ಒಬ್ಬ ಹುಡುಗನಿಗೆ ಹುಡುಗಿ ಇಷ್ಟವಾದರೆ ಆಕೆಯ ಎದುರು ಮಾತನಾಡಲು ಹೆದರುತ್ತಾರೆ. ನಡುಗುತ್ತಾರೆ. ನನಗೂ ಅಷ್ಟೇ.. ಯಾರಾದ್ರೂ ನಿಜವಾಗ್ಲೂ ಇಷ್ಟವಾದರೆ ಅವರ ಮುಂದೆ ಮಾತನಾಡಲು ಆಗೋದಿಲ್ಲ. ಬಿಗ್‌ಬಾಸ್ ಮನೆಯಲ್ಲಿ ಸೌಂದರ್ಯ ಸೇರಿದಂತೆ ಎಲ್ಲರ ಜೊತೆಯೂ ತುಂಬಾನೇ ನಾರ್ಮಲ್ ಆಗಿ, ಓಪನ್ ಆಗಿ ಮಾತಾಡ್ತಿದ್ದೆ. ಆದ್ದರಿಂದ ಅಲ್ಲಿ ಯಾವುದೇ ಪ್ರೀತಿಯ ಫೀಲಿಂಗ್ ಇರಲಿಲ್ಲ. ಅದೆಲ್ಲ ಕೇವಲ ತಮಾಷೆಗಷ್ಟೇ ಸೀಮಿತವಾಗಿತ್ತು ಎಂದಿದ್ದಾರೆ.

34
ದೂರದ ಮಾತು

ಇದೇ ವೇಳೆ ಯಶಸ್ ಮತ್ತು ಸೌಂದರ್ಯ ಕುರಿತು ಮಾತನಾಡಿ.. ಹುಡುಗ ಮತ್ತು ಹುಡುಗಿ ಅಂದ್ಮೇಲೆ ಆರಂಭದಲ್ಲಿ ಅಟ್ರಾಕ್ಷನ್ ಇದ್ದೇ ಇರುತ್ತದೆ. ಅದನ್ನು ಬಿಟ್ಟು ಅದು ಟ್ರೂ ಲವ್ ಅನ್ನೋದೆಲ್ಲ ದೂರದ ಮಾತು. ಬಹುಶಃ ಗೇಮ್‌ಗಾಗಿಯೂ ಅವರು ಹಾಗೆ ಇರಬಹುದು ಎಂದಿದ್ದಾರೆ.

44
ಅರೆಬರೆ ಜ್ಞಾನ ತುಂಬಾ ಡೇಂಜರಸ್

ಮುಂದುವರಿದು.. ಅವರಿಬ್ಬರ ಮಧ್ಯೆ ಏನಿದೆ ಅನ್ನೋದು ನನಗೆ ಕ್ಲಾರಿಟಿ ಇಲ್ಲ. ನಮ್ಮಪ್ಪ ಯಾವಾಗಲೂ ಹೇಳ್ತಿರ್ತಾರೆ.. ಫುಲ್ ನಾಲೆಡ್ಜ್ ಒಳ್ಳೆಯದು, ಹಾಫ್ ನಾಲೆಡ್ಜ್ ತುಂಬಾ ಡೇಂಜರಸ್ ಎಂದು. ಅವರಿಬ್ಬರ ಮಧ್ಯೆ ಯಾವ ರೀತಿಯ ಬಾಂಡಿಂಗ್ ಇದೆ? ಏನು ಯೋಚನೆ ಮಾಡುತ್ತಿದ್ದಾರೆ ಎಂದು ತಿಳಿಯದೇ ಮಾತನ್ನಾಡೋದು ತಪ್ಪು. ಮುಂದಿನ ದಿನಗಳಲ್ಲಿ ಎಲ್ಲರಿಗೂ ಗೊತ್ತಾಗಲಿದೆ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories