BBK 12: ಕ್ಯಾಪ್ಟನ್ ಗಿಲ್ಲಿ ನಟ ಹೇಳಿದ ಈ ರೂಲ್ಸ್ ಮನೆಯಲ್ಲಿ ಎಷ್ಟು ಜನ ಫಾಲೋ ಮಾಡ್ತಾರೆ?

Published : Dec 28, 2025, 02:34 PM IST

Captain Gilli Nata: ಫಿನಾಲೆ ಹತ್ತಿರವಿರುವ ಈ ಸಮಯದಲ್ಲಿ, ಮನೆಯ ಕ್ಯಾಪ್ಟನ್ ಗಿಲ್ಲಿ ನಟ ಈ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ಅವರ ನಿಯಮಗಳು ಜಾರಿಯಾಗುತ್ತವೆಯೇ ಎಂಬ ಕುತೂಹಲ ಮೂಡಿದೆ.

PREV
15
ಗಿಲ್ಲಿ ನಟ ಮನೆಯ ಕ್ಯಾಪ್ಟನ್

ಈ ವಾರ ಗಿಲ್ಲಿ ನಟ ಮನೆಯ ಕ್ಯಾಪ್ಟನ್ ಆಗಿದ್ದು, ಮುಂದಿನ ದಿನಗಳಲ್ಲಿ ಜವಾಬ್ದಾರಿಗಳನ್ನು ಹೇಗೆ ನಿರ್ವಹಣೆ ಮಾಡ್ತಾರೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ. ಬಿಗ್‌ಬಾಸ್ ಮನೆ ಪ್ರವೇಶಕ್ಕೂ ಮುನ್ನ ಸ್ಪರ್ಧಿಗಳು ತಾವೇಕೆ ಈ ಶೋ ಆಯ್ಕೆ ಮಾಡಿಕೊಂಡಿದ್ದೇವೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾತನಾಡಿರುತ್ತಾರೆ. ಇದೀಗ ಗಿಲ್ಲಿ ನಟ ಅವರ ಹಳೆ ಹೇಳಿಕೆ ಮುನ್ನಲೆಗೆ ಬಂದಿದೆ.

25
ಕ್ಯಾಪ್ಟನ್ ಗಿಲ್ಲಿ ರೂಲ್ಸ್

ಬಿಗ್‌ಬಾಸ್‌ ಮನೆ ಪ್ರವೇಶಕ್ಕೂ ಮುನ್ನ ಗಿಲ್ಲಿ ನಟ, ಕ್ಯಾಪ್ಟನ್ ಆದ್ರೆ ತಾವು ತೆಗೆದುಕೊಂಡು ಬರುವ ನಿಯಮಗಳ ಬಗ್ಗೆ ಮಾತಾಡಿದ್ದರು. ಈ ವಿಡಿಯೋವನ್ನು ಕಲರ್ಸ್ ಕನ್ನಡ ವಾಹಿನಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ, ಕ್ಯಾಪ್ಟನ್ ಗಿಲ್ಲಿ ರೂಲ್ಸ್ ಫಾಲೋ ಮಾಡ್ತಾರಾ ಮನೆಮಂದಿ ಎಂಬ ಶೀರ್ಷಿಕೆಯಡಿಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಹಾಗಾದ್ರೆ ಗಿಲ್ಲಿ ನಟ ಹೇಳಿದ ರೂಲ್ಸ್ ಏನು?

35
ಗಿಲ್ಲಿ ನಟ ರೂಲ್ಸ್ ಏನು?

ಮನೆಯಲ್ಲಿ ಯಾರು ಜಗಳ ಮಾಡುವಂತಿಲ್ಲ. ಎಲ್ಲರೂ ಖುಷಿ ಖುಷಿಯಾಗಿ ನಗುತ್ತಿರಬೇಕು. ನಾನು ಏನಾದ್ರು ಕಾಮಿಡಿ ಮಾಡಿದ್ರೆ ಮನೆಯ ಸದಸ್ಯರೆಲ್ಲರೂ ನಗಬೇಕು. ಇದುವೇ ನಾನು ತೆಗೆದುಕೊಂಡು ಬರುವ ಮೊದಲ ನಿಯಮ ಎಂದು ಗಿಲ್ಲಿ ನಟ ಹೇಳಿಕೊಂಡಿದ್ದರು. ಇದೀಗ ಈ ನಿಯಮ ಜಾರಿಗೆ ಬರುತ್ತಾ? ನಿಯಮ ಚಾಲ್ತಿಗೆ ಬಂದರೂ ಎಷ್ಟು ಜನರು ಅನುಸರಿಸುತ್ತಾರೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.

45
ಫಿನಾಲೆ ಸಮೀಪದಲ್ಲಿ ಬಿಗ್‌ಬಾಸ್

ಬಿಗ್‌ಬಾಸ್ ಸೀಸನ್ 12 ಫಿನಾಲೆ ಸಮೀಪದಲ್ಲಿದ್ದು, ಉಳಿದುಕೊಳ್ಳುವ ಸ್ಪರ್ಧಿಗಳು ಆಟದಲ್ಲಿ ನೂರಕ್ಕೆ ನೂರರಷ್ಟು ಶ್ರಮವನ್ನು ಹಾಕಿ ಆಡುತ್ತಾರೆ. ಹಾಗಾಗಿ ಗಿಲ್ಲಿ ನಟ ಮಾಡುವ ತಮಾಷೆಯನ್ನು ಯಾರು ಹೇಗೆ ಸ್ವೀಕರಿಸುತ್ತಾರೆ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಇದನ್ನೂ ಓದಿ: BBK 12: ಮನೆಗೆ ಬಂದಿರೋ ಅಕ್ಕನ ಮುಂದೆ ನಡೆಯಿತು ಸ್ವಯಂವರ: ರಘುನಲ್ಲಿ ಮಗು ಕಂಡ ಅಶ್ವಿನಿ ಗೌಡ

55
ಜವಾಬ್ದಾರಿ

ಮನೆಯ ಕ್ಯಾಪ್ಟನ್ ಆಗುವ ಸ್ಪರ್ಧಿ ಬಿಗ್‌ಬಾಸ್ ನೀಡುವ ಆಟಗಳಿಗೆ ಉಸ್ತುವಾರಿಯಾಗಿ ಕೆಲಸ ಮಾಡಬೇಕು. ಈ ಸಮಯದಲ್ಲಿ ವಾಕ್ಸಮರ, ಜಗಳ ನಡೆಯುತ್ತದೆ. ಆಟದಲ್ಲಿ ಕ್ಯಾಪ್ಟನ್ ಯಾವುದೇ ನಿರ್ಧಾರ ತೆಗೆದುಕೊಂಡ್ರು ಒಬ್ಬರಿಗೆ ಬೇಸರ ಖಂಡಿತ ಆಗುತ್ತದೆ. ಹಾಗಾಗಿ ಗಿಲ್ಲಿ ನಟ ಈ ಜವಾಬ್ದಾರಿ ಹೇಗೆ ನಿರ್ವಹಿಸುತ್ತಾರೆ ಎಂದು ನೋಡಲು ವೀಕ್ಷಕರು ಕಾಯುತ್ತಿದ್ದಾರೆ.

ಇದನ್ನೂ ಓದಿ: BBK 12: ವೀಕ್ಷಕರು, ಸ್ಪರ್ಧಿಗಳ ಊಹೆ ಸುಳ್ಳಾಗಿಸಿದ ಬಿಗ್‌ಬಾಸ್? ರಕ್ಷಿತಾ ಫ್ಯಾನ್ಸ್‌ಗೆ ಅತಿದೊಡ್ಡ ಆಘಾತ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories