Bigg Boss Kannada: ಕನ್ನಡ ಬಿಗ್‌ಬಾಸ್ 'ಒಂಟಿ ವರ್ಸಸ್ ಜಂಟಿ' ಥೀಮ್‌ನೊಂದಿಗೆ ಆರಂಭವಾಗಿದ್ದು, ಒಂಟಿ ಸ್ಪರ್ಧಿಗಳಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗಿದೆ. ಮೊದಲ ದಿನವೇ, ಬಿಗ್‌ಬಾಸ್ ನಿಯಮ ಮುರಿಯಲು ಯತ್ನಿಸಿದ ಗಿಲ್ಲಿ ನಟ, ಮಲ್ಲಮ್ಮನವರ ಜಾಣತನದಿಂದ ಬಕ್ರಾ ಆದರು.
ಕನ್ನಡದ ಬಿಗ್‌ಬಾಸ್ ಆರಂಭವಾಗಿದ್ದು, ಒಂಟಿಯಾಗಿ ಎಂಟ್ರಿ ಕೊಟ್ಟಿರೋ ಸ್ಪರ್ಧಿಗಳು ಕೆಲವೊಂದು ವಿಶೇಷ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಮನೆಯ ಎಲ್ಲಾ ಕೆಲಸಗಳನ್ನು ಜಂಟಿಯಾಗಿರೋರು ಮಾಡಬೇಕು ಮತ್ತು ಒಂಟಿಗಳು ಉಸ್ತುವಾರಿ ಮಾಡಬೇಕೆಂದು ಬಿಗ್‌ಬಾಸ್ ಸೂಚಿಸಿದ್ದಾರೆ
26
ಬಿಗ್‌ಬಾಸ್ ಖಡಕ್ ಆದೇಶ
ಮೊದಲ ದಿನವಾಗಿದ್ದರಿಂದ ಎಲ್ಲಾ ಸ್ಪರ್ಧಿಗಳಿಗೆ ಹೊರಗಿನಿಂದ ಬ್ರೇಕ್‌ಫಾಸ್ಟ್ ಬಂದಿತ್ತು. ಒಂಟಿ ಮತ್ತು ಜಂಟಿ ಸ್ಪರ್ಧಿಗಳಿಗೆ ಬೇರೆ ಬೇರೆಯಾಗಿ ಉಪಹಾರ ಕಳುಹಿಸಲಾಗಿತ್ತು. ಈ ಆಹಾರವನ್ನು ಯಾರೊಂದಿಗೂ ಹಂಚಿಕೊಳ್ಳುತ್ತಿಲ್ಲ ಎಂದು ಬಿಗ್‌ಬಾಸ್ ಖಡಕ್ ಆಗಿ ಆದೇಶಿಸಿದ್ದರು. ಈ ವಿಷಯ ಗೊತ್ತಿದ್ದರೂ ಗಿಲ್ಲಿ ನಟ ಈ ನಿಯಮ ಬ್ರೇಕ್ ಮಾಡಲು ಮುಂದಾಗಿದ್ದರು.
36
ಬಕ್ರಾ ಆದ್ರು ಗಿಲ್ಲಿ ನಟ
ಮಲ್ಲಮ್ಮ ಅವರು ತಮಗೆ ಬಂದಿರುವ ಜ್ಯೂಸ್ ಕುಡಿಯುತ್ತಿದ್ದರು. ಈ ವೇಳೆ ನನಗೆ ಗಂಟಲು ಉರಿಯುತ್ತಿದೆ ಮಲ್ಲಮ್ಮ ಅವರೇ ನಿಮ್ಮ ಬಳಿಯಲ್ಲಿರುವ ಜ್ಯೂಸ್ ಕೊಡಿ ಎಂದು ಕೇಳುತ್ತಾರೆ. ಆಗ ಮಲ್ಲಮ್ಮ, ನಮ್ಮದು ನಿಮಗೆ ಕೊಡುವಂತಿಲ್ಲ. ನಿಮ್ಮದನ್ನು ನಾವು ಕೇಳುವಂತಿಲ್ಲ ಎಂದು ಸರಿಯಾಗಿಯೇ ತಿರುಗೇಟು ನೀಡಿದರು. ಅಲ್ಲೇ ಕುಳಿತಿದ್ದ ಸಹ ಸ್ಪರ್ಧಿ ಅಭಿಷೇಕ್ ಮತ್ತು ಅಶ್ವಿನಿ, ಮಲ್ಲಮ್ಮ ಮತ್ತು ಮಾಳು ಅವರು ಕ್ಲೆವರ್ ಆಗಿದ್ದಾರೆ ಎಂದರು. ಮಲ್ಲಮ್ಮಾ ಅವರಿಗೆ ಮಕ್ಕರ್ ಮಾಡೋಕೆ ಹೋದ ಗಿಲ್ಲಿ ನಟ ಬಕ್ರಾ ಆಗಿದ್ದಾರೆ.
ಮಲ್ಲಮ್ಮ ನೀವು ಮಾತ್ರ ಜ್ಯೂಸ್ ಶೇರ್ ಮಾಡಿಕೊಳ್ಳಬಹುದು ಎಂದು ಗಿಲ್ಲಿ ನಟ ಹೇಳುತ್ತಾರೆ. ಆಗ ಮಲ್ಲಮ್ಮ, ಹೊರಗಡೆ ಹೋದ್ಮೇಲೆ ನನ್ನ ಹಣದಿಂದ ನಿಮಗೆ ಜ್ಯೂಸ್ ಕೊಡಿಸುತ್ತೇನೆ. ಇಲ್ಲೇ ಕೊಟ್ಟಿಲ್ಲ, ಅಲ್ಲಿ ಕೊಡಸ್ತೀರಾ ಅಂದಿದ್ದಕ್ಕೆ, ಇದು ಬಿಗ್‌ಬಾಸ್ ಕೊಟ್ಟಿರುವ ಜ್ಯೂಸ್. ಹಾಗೆಲ್ಲಾ ಕೊಡೋದಕ್ಕೆ ಬರಲ್ಲ ಎಂದು ಬಿಗ್‌ಬಾಸ್ ಹಾಕಿದ ನಿಯಮವನ್ನು ಮಲ್ಲಮ್ಮ ಹೇಳಿದ್ದಾರೆ.
ಇನ್ನು ಮನೆಗೆ ದಿನಸಿ ಪದಾರ್ಥ ತೆಗೆದುಕೊಳ್ಳುವಲ್ಲಿ ಮಲ್ಲಮ್ಮ ಯಡವಟ್ಟು ಮಾಡಿಕೊಂಡಿದ್ದರು. ಬಿಗ್‌ಬಾಸ್ ನೀಡಿದ ಸೂಚನೆ ಮಲ್ಲಮ್ಮ ಅವರಿಗೆ ಅರ್ಥವಾಗದ ಹಿನ್ನೆಲೆ ಈ ವಾರ ಮನೆ ಹೆಚ್ಚುವರಿ ದಿನಸಿ ಪದಾರ್ಥಗಳನ್ನು ಕಳೆದುಕೊಳ್ಳಬೇಕಾಯ್ತು. ನಂತರ ಮಲ್ಲಮ್ಮ ಅವರ ಸಮಸ್ಯೆ ಅರ್ಥ ಮಾಡಿಕೊಂಡು ಮತ್ತೊಂದು ಅವಕಾಶ ನೀಡಿದರು. ಈ ವೇಳೆ ಸಹ ಸ್ಪರ್ಧಿಗಳು ಮಲ್ಲಮ್ಮ ಅವರಿಗೆ ಆಟವನ್ನು ವಿವರಿಸಿದರು.
ಮೊದಲ ದಿನ ಯಾವುದೇ ಟಾಸ್ಟ್ ಇಲ್ಲದ ಹಿನ್ನೆಲೆ ಸ್ಪರ್ಧಿಗಳು ತಮ್ಮಲ್ಲಿನ ಪ್ರತಿಭೆಯನ್ನು ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಮಾಳು ಚೆಂದದ ಹಾಡು ಹೇಳಿದ್ರೆ ಹುಡುಗಿಯರು ಅದಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು. ಕರಿಬಸವಯ್ಯ ಸಿನಿಮಾ ಡೈಲಾಗ್ ಹೇಳಿ ಎಲ್ಲರನ್ನು ರಂಜಿಸಿದರು. ಮಲ್ಲಮ್ಮ ಅವರು ಹೈಹೀಲ್ಸ್ ಹಾಕಿಕೊಂಡು ಎಲ್ಲರನ್ನು ಅಚ್ಚರಿಗೊಳಿಸಿದರು. ಕಾಕ್ರೋಚ್ ಸುಧಿ ನಿದ್ದೆ ಮಾಡಿದಕ್ಕೆ ನಾಯಿ ಬೊಗಳಲು ಆರಂಭಿಸಿತು.