ಅಮೃತಧಾರೆ ಧಾರಾವಾಹಿಯಲ್ಲಿ ಆಕಾಶ್ ಹಾಗೂ ಗೌತಮ್ ಪರಿಚಯ ಆಗಿದ್ದು, ಮಗನನ್ನು ಗೌತಮ್ ಮುದ್ದು ಮಾಡಿದ್ದು ಎಲ್ಲವನ್ನು ಭೂಮಿ ನೋಡಿದ್ದಾಳೆ. “ನಮ್ಮಿಂದ ದೂರ ಇರಿ” ಅಂತ ಅವಳು ಪತಿಗೆ ಎಚ್ಚರಿಕೆ ಕೊಟ್ಟಿದ್ದಳು. ಹೀಗಾಗಿ ಭೂಮಿಯ ಮೇಲಿನ ಆಸೆಯನ್ನು ಬಿಟ್ಟು ಗೌತಮ್ ಹೊರಟಿದ್ದನು.
ಶಾಲೆ ಬಳಿ ಓರ್ವ ಕಾರ್‌ನಲ್ಲಿ ಬಂದು ಆಕಾಶ್‌ನನ್ನು ಕರೆದುಕೊಂಡು ಹೋಗಿದ್ದಾನೆ. ತನ್ನ ಫ್ರೆಂಡ್ ಗೌತಮ್ ಕಾರ್ ಕಳಿಸಿರಬಹುದು ಎಂದು ಆಕಾಶ್ ನಂಬಿ ಕಾರ್ ಹತ್ತಿದ್ದನು. ಆ ನಂತರ ಭೂಮಿಗೆ ಮಗನನ್ನು ಗೌತಮ್ ಕರೆದುಕೊಂಡು ಹೋಗಿದ್ದಾನೆ ಎಂದು ನಂಬಿ, ಫೋನ್ ಮಾಡಿದ್ದಾಳೆ.
25
ಗೌತಮ್ ಬಳಿ ಭೂಮಿಕಾ ಮನವಿ
“ದಯವಿಟ್ಟು ಮಗನನ್ನು ಕಳಿಸಿಕೊಡಿ, ನಿಮ್ಮ ಮೇಲೆ ನನಗೆ ಯಾವುದೇ ಬೇಸರ ಇಲ್ಲ, ಕೋಪ ಮಾಡಿಕೊಳ್ಳೋದಿಲ್ಲ. ಸಂಜೆ ಸಿಕ್ಕಮೇಲೆ ನಿನಗೆ ಎಲ್ಲ ವಿಷಯವನ್ನು ಹೇಳ್ತೀನಿ ಅಂತ ಆಕಾಶ್‌ಗೆ ಹೇಳಿದ್ರಿ, ನೀವೇ ಕರೆದುಕೊಂಡು ಹೋಗಿರೋದು ಅಂತ ನನಗೆ ಗೊತ್ತಿದೆ” ಎಂದು ಗೌತಮ್ ಬಳಿ ಭೂಮಿ ಮನವಿ ಮಾಡಿದ್ದಳು. ಆಗ ಗೌತಮ್, “ನಾನು ಕರೆದುಕೊಂಡು ಹೋಗಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾನೆ.
35
ಮಗನಿಗೆ ಏನೂ ಆಗೋಕೆ ಬಿಡೋದಿಲ್ಲ
ಈ ಮೊದಲೇ ಗೌತಮ್ ಓರ್ವ ವ್ಯಕ್ತಿಯನ್ನು ಭೂಮಿಕಾ, ಆಕಾಶ್ ಮೇಲೆ ಕಣ್ಣಿಡಲು ನೇಮಕ ಮಾಡಿದ್ದನು. ಇದರಿಂದಾಗಿ ಆಕಾಶ್ ಕಿಡ್ನ್ಯಾಪ್ ಆಗಿರೋದು ಅವನ ಗಮನಕ್ಕೆ ಬಂದಿತ್ತು. ಮಲ್ಲಿ ಕೂಡ ಫೋನ್ ಮಾಡಿ, ಎಂಎಲ್‌ಎ ಆಕಾಶ್‌ನನ್ನು ಅಪಹರಣ ಮಾಡಿರಬಹುದು ಎಂಬ ಸಂದೇಹ ಎಂದು ತಿಳಿಸಿದ್ದಳು. ಆಗ ಗೌತಮ್, “ಹೌದು, ಅವನೇ ಕಿಡ್ನ್ಯಾಪ್ ಮಾಡಿರೋದು, ನನ್ನ ಮಗನಿಗೆ ಏನೂ ಆಗೋಕೆ ನಾನು ಬಿಡೋದಿಲ್ಲ” ಎಂದು ಹೇಳಿದ್ದನು.
ಕೊನೆಗೂ ಗೌತಮ್, ಕಿಡ್ನ್ಯಾಪ್ ಮಾಡಿಟ್ಟ ಜಾಗವನ್ನು ಹುಡುಕಿ ಹೋಗಿದ್ದಾನೆ. ಅಲ್ಲಿ ಅವನು ಫೈಟ್ ಮಾಡಿ ಆಕಾಶ್‌ನನ್ನು ಬಿಡಿಸಿದ್ದಾನೆ. ಎಂಎಲ್‌ಎಗೂ ಕೂಡ ನಾನು ಭೂಮಿ ಗಂಡ, ಆಕಾಶ್ ತಂದೆ ಎಂದು ಹೇಳಿದ್ದಾನೆ. ಆಕಾಶ್ ಅಂತೂ ಗೌತಮ್ ಫೈಟ್ ನೋಡಿ ಫುಲ್ ಖುಷಿಯಾಗಿದ್ದಾನೆ. ಕೊನೆಗೆ ಆಕಾಶ್ ಸೇಫ್ ಆಗಿ ಮನೆಗೆ ಬರುತ್ತಾನೆ. ಮಗನನ್ನು ಕಂಡು ಭೂಮಿ ದಿಲ್ ಖುಷ್ ಆಗುವುದು.
55
ಮುಂದೆ ಏನಾಗುವುದು?
ನಮ್ಮನ್ನು ಸೇಫ್ ಮಾಡಿದ ಗೌತಮ್ ಜೊತೆ ಭೂಮಿ ಇರಲು ಒಪ್ಪಿದರೂ ಒಪ್ಪಬಹುದು. ಇನ್ನೊಂದು ಕಡೆ ಗೌತಮ್‌ನನ್ನು ಬಿಟ್ಟು ಇರೋಕೆ ಆಕಾಶ್ ಒಪ್ಪದೆ ಇರಬಹುದು. ಎಂಎಲ್‌ಎ ಕಡೆಯಿಂದಾನೋ ಅಥವಾ ಬೇರೆ ಇನ್ಯಾರಿಂದಲೋ ಭೂಮಿಗೂ, ಆಕಾಶ್‌ಗೂ ಸಮಸ್ಯೆ ಆಗಬಾರದು ಅಂತ ಗೌತಮ್ ಅಲ್ಲೇ ಉಳಿದುಕೊಂಡರೂ ಕೂಡ ಆಶ್ಚರ್ಯವಿಲ್ಲ.