ಡೋಂಟ್ ವರಿ, ನಾನು ಹೇಳಿಯೇ ಚೂರಿ ಹಾಕ್ತೀನಿ; ಸೌಂದರ್ಯಾ ಶೆಟ್ಟಿಗೆ ಕುಮಾರಿ ಕೌಂಟರ್

Published : Oct 12, 2026, 08:46 AM IST

ಮಂಜುನಾಥ್ ಮತ್ತು ಸಂಗೀತಾ ಭಟ್ ಹೊರಬಂದ ನಂತರ ಬಿಗ್‌ಬಾಸ್ ಮನೆಗೆ ಅಗ್ನಿಪರೀಕ್ಷೆ ಶೋನ ಕುಮಾರಿ ಮತ್ತು ಲಕ್ಷ್ಮೀ ಪ್ರವೇಶಿಸಿದ್ದಾರೆ. ಕುಮಾರಿ ಮನೆಯ ಸದಸ್ಯರೊಂದಿಗೆ ಬೆರೆಯುತ್ತಾ, ಸೌಂದರ್ಯಾಗೆ ಹೇಳಿಯೇ ಚೂರಿ ಹಾಕುವುದಾಗಿ ತಮಾಷೆಯಾಗಿ ಎಚ್ಚರಿಕೆ ನೀಡಿದ್ದಾರೆ.

PREV
15
ಕುಮಾರಿ ಮತ್ತು ಲಕ್ಷ್ಮೀ ಆಗಮನ

ಬಿಗ್‌ಬಾಸ್ ಮನೆಗೆ ಕುಮಾರಿ ಮತ್ತು ಲಕ್ಷ್ಮೀ ಆಗಮನವಾಗಿದೆ. ಇವರಿಬ್ಬರು ಅಗ್ನಿಪರೀಕ್ಷೆ ಶೋನ ಸ್ಪರ್ಧಿಗಳಾಗಿದ್ದು, ದೊಡ್ಮನೆಯನ್ನು ಪ್ರವೇಶಿಸಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ಮಂಜುನಾಥ್ ಮತ್ತು ಸಂಗೀತಾ ಭಟ್ ಹೊರಗೆ ಬಂದಿದ್ದರು. ಇದೀಗ ಅವರಿಬ್ಬರ ಸ್ಥಾನಕ್ಕೆ ಇಬ್ಬರ ಆಗಮನವಾಗಿದೆ.

25
ಅದ್ಧೂರಿ ಸ್ವಾಗತ

ಬಿಡುಗಡೆಯಾಗಿರುವ ಪ್ರೋಮೋ ಪ್ರಕಾರ, ಕುಮಾರಿ ಮತ್ತು ಲಕ್ಷ್ಮೀ ಅವರಿಗೆ ಬಿಗ್‌ಬಾಸ್ ಮನೆಯಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಮನೆಯೊಳಗೆ ಬರುತ್ತಿದ್ದಂತೆ ಕುಮಾರಿ, ಎಲ್ಲಾ ಸ್ಪರ್ಧಿಗಳೊಂದಿಗೆ ಮಾತನಾಡಲು ಆರಂಭಿಸಿದ್ದಾರೆ. ಇದರ ಜೊತೆಯಲ್ಲಿ ಮನೆಯಲ್ಲಿರುವ ಪುಟಾಣಿ ಸದಸ್ಯ ಗೊಂಬೆಯನ್ನು ಹಿಡಿದುಕೊಂಡು ಮುದ್ದಿಸಿದ್ದಾರೆ.

35
ನಾನು ಕಾಮಿಡಿ ಮಾಡಲ್ಲ

ಟಿವಿಯಲ್ಲಿ ಎಲ್ಲರೂ ತುಂಬಾ ಸಣ್ಣ ಕಾಣಿಸುತ್ತೀರಿ. ಆದ್ರೆ ಇಲ್ಲಿ ಎಲ್ಲರೂ ಚೆನ್ನಾಗಿಯೇ ಇದ್ದೀರಿ. ಗಗನ್‌ ಅವರಿಗೆ ಟಿವಿಯಲ್ಲಿ ಚೆನ್ನಾಗಿ ಕಾಣಿಸಲ್ಲ. ಇಲ್ಲಿ ಚೆನ್ನಾಗಿ ಕಾಣಿಸುತ್ತಿದ್ದೀರಿ ಎಂದು ರಿವ್ಯೂವ್ ನೀಡಿದ್ದಾರೆ. ನಾನು ಕಾಮಿಡಿ ಮಾಡಲ್ಲ. ನನ್ನನ್ನು ನೋಡಿ ನಗಬೇಕಷ್ಟೇ ಎಂದು ಕುಮಾರಿ ತಮ್ಮ ನಡವಳಿಕೆಯ ಸುಳಿವು ನೀಡಿದ್ದಾರೆ.

45
ಹೇಳಿಬಿಟ್ಟೇ ಚೂರಿ ಹಾಕ್ತೀನಿ

ನಂತರ ಸೌಂದರ್ಯಾ ಶೆಟ್ಟಿ ಬಳಿಗೆ ಹೋದ ಕುಮಾರಿ, ನಾನು ನಿಮ್ಮನ್ನು ಇಷ್ಟಪಡುತ್ತೇನೆ ಎಂದು ಮಾತನಾಡಲು ಆರಂಭಿಸುತ್ತಾರೆ. ಈ ವೇಳೆ ಪ್ರತಿಕ್ರಿಯಿಸಿದ ಸೌಂದರ್ಯಾ ಶೆಟ್ಟಿ, ಒಬ್ಬಳು (ಗಾನವಿ) ಬಂದ ತಕ್ಷಣ ನನಗೆ ಚೂರಿ ಹಾಕಿದ್ದು ಆಯ್ತು. ಇನ್ನು ಈ ಆ ನೋವು ಇದೆ ಅಂತಾರೆ. ಈ ಮಾತುಗಳಿಗೆ ಅಲ್ಲೇ ಕೌಂಟರ್ ನೀಡಿದ ಕುಮಾರಿ, ನಾನು ಆ ರೀತಿ ಮಾಡಲ್ಲ. ಹೇಳಿಬಿಟ್ಟೇ ಚೂರಿ ಹಾಕ್ತೀನಿ ಎಂದಿದ್ದಾರೆ.

55
ಲಕ್ಷ್ಮೀ

ಇನ್ನು ಈ ಪ್ರೋಮೋದಲ್ಲಿ ಲಕ್ಷ್ಮೀ ಅವರನ್ನು ತೋರಿಸಿಲ್ಲ. ಹೊಸ ಇಬ್ಬರು ಸ್ಪರ್ಧಿಗಳನ್ನು ಮನೆಯ ಹಳೆ ಸದಸ್ಯರು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ. ಈ ಬಾರಿ ವೀಕೆಂಡ್‌ನಲ್ಲಿ ಕ್ಲಾಸ್ ಆಗಿರೋದರಿಂದ ಎಲ್ಲಾ ಸ್ಪರ್ಧಿಗಳು ತಮ್ಮ ಆಟದ ಲಯ ಬದಲಿಸಿಕೊಳ್ಳುವ ಸಾಧ್ಯತೆಗಳಿವೆ. ಧನುಷ್ ಈ ವಾರದ ಮನೆಯ ಕ್ಯಾಪ್ಟನ್ ಆಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories