ಬಿಗ್‌ಬಾಸ್ ರಿಯಾಲಿಟಿ ಶೋ ಟಿಆರ್‌ಪಿಗಾಗಿ ವಿವಾದ ಮತ್ತು ಅಸಭ್ಯತೆಯನ್ನು ಬಳಸಿಕೊಳ್ಳುತ್ತದೆ ಎಂದು ವಿಶ್ಲೇಷಿಸಲಾಗಿದೆ. ಇದೇ ಕಾರಣಕ್ಕೆ ಖ್ಯಾತ ನಟಿ ಜಯಶ್ರೀ ಬಿ.ರಾಜ್ ಅವರು ಶೋನಲ್ಲಿ ಗೆಲ್ಲಲು ಯಾವುದೇ ಮಟ್ಟಕ್ಕೆ ಇಳಿಯಲು ಸಾಧ್ಯವಿಲ್ಲ ಎಂದು ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡಿದ್ದಾರೆ.
ಬಿಗ್‌ಬಾಸ್ (Bigg Boss) ಎಲ್ಲಾ ಭಾಷೆಗಳಲ್ಲಿಯೂ ಅತಿ ಹೆಚ್ಚು ಟಿಆರ್ಪಿ ಹೊಂದಿರುವ ರಿಯಾಲಿಟಿ ಷೋ. ಇದನ್ನು ಉಗಿಯುತ್ತಲೇ ಮಜಾ ತೆಗೆದುಕೊಳ್ಳುವ ಮನಸ್ಥಿತಿಯವರು ಹಲವರು ಇರುವ ಕಾರಣ ಈ ಷೋ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಕಾಲ ಕ್ರಮೇಣ ಬಿಗ್‌ಬಾಸ್ ತನ್ನ ಜನಪ್ರಿಯತೆ ಕಳೆದುಕೊಂಡು ವೀಕ್ಷಕರ ಸಂಖ್ಯೆ ಕಡಿಮೆ ಆಗುತ್ತಿದೆ ಎಂದಾಗಲೆಲ್ಲಾ, ಟಿಆರ್ಪಿ ಹೆಚ್ಚಿಸಲು ಉದ್ದೇಶಪೂರ್ವಕವಾಗಿ ಕಾಂಟ್ರವರ್ಸಿ ಕ್ರಿಯೇಟ್ ಮಾಡುವುದು, ಬಿಗ್‌ಬಾಸ್ ಸ್ಪರ್ಧಿಗಳ ಅಸಹ್ಯ, ಅಸಭ್ಯ ಎನ್ನಿಸುವಂಥ, ಕೊನೆಗೆ ಮಂಚದ ವಿಷಯಕ್ಕೂ ಬಂದು ಅಶ್ಲೀಲ ನಡವಳಿಕೆ ತೋರಿಸಿ ಆ ಬಳಿಕ ಹೋಸ್ಟ್ ಮಾಡುವವರು ಸ್ಪರ್ಧಿಗಳನ್ನು ಬೈಯುವುದು... ಇವೆಲ್ಲವೂ ಹಿಂದಿಯಂಥ ಬಿಗ್‌ಬಾಸ್ ನೋಡುಗರಿಗೆ ಹೊಸ ವಿಷಯವೇನಲ್ಲ.
26
ಷೋಗೆ ಹೋಗಲು ನಿರಾಕರಣೆ
ಬಿಗ್ಬಾಸ್ನ ಬೆರಳೆಣಿಕೆ ಸೀಸನ್ಗಳನ್ನು ಹೊರತುಪಡಿಸಿದರೆ, ಬಹುತೇಕ ಎಲ್ಲಾ ಸೀಸನ್ಗಳಲ್ಲಿಯೂ ಹೊಡೆದಾಟ, ಕಿರುಚಾಟಗಳ ಅಬ್ಬರ ಇದ್ದೇ ಇದೆ. ಇದನ್ನೇ ವೀಕ್ಷಕರು ಕುತೂಹಲದಿಂದ ನೋಡುವ ಕಾರಣ ಷೋ ಓಡಿಸಲು ಇದು ಅವರಿಗೆ ಅನಿವಾರ್ಯವೂ ಆಗಿರುವುದು ನಿಜವೇ. ಇದೇ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಸೆಲೆಬ್ರಿಟಿಗಳು, ಈ ಷೋಗೆ ಹೋಗಲು ನಿರಾಕರಿಸುತ್ತಾರೆ ಎನ್ನುವ ಮಾತನ್ನು ಇದಾಗಲೇ ಸಂದರ್ಶನಗಳಲ್ಲಿ ಹೇಳುವುದೂ ಇದೆ.
36
ನಖಶಿಖಾಂತ ಉರಿ
ಬಿಗ್‌ಬಾಸ್ ಅನ್ನು ವಿರೋಧಿಸುವವರು ಎಷ್ಟು ಮಂದಿ ಇದ್ದಾರೋ ಆರಾಧಿಸುವವರ ಸಂಖ್ಯೆ ಕೂಡ ಅಷ್ಟೇ ಇದೆ. ಈ ಷೋ ಅನ್ನು ಆಸ್ವಾದಿಸುವ ವೀಕ್ಷಕರಿಗೆ, ಅದರ ವಿರುದ್ಧ ಮಾತನಾಡುವವರನ್ನು ಕಂಡರೆ ನಖಶಿಖಾಂತ ಉರಿಹತ್ತುವುದು ಇದೆ. ಇದೇ ಕಾರಣಕ್ಕೆ ಸಂದರ್ಶನಗಳಲ್ಲಿ ಸೆಲೆಬ್ರಿಟಿಗಳು ಇದರ ವಿರುದ್ಧ ಮಾತನಾಡಿದರೆ ತಮ್ಮ ಡಿಕ್ಷನರಿಯಲ್ಲಿ ಇರುವ ಎಲ್ಲಾ ಶಬ್ದಗಳನ್ನೂ ಕಮೆಂಟ್ ಬಾಕ್ಸ್ನಲ್ಲಿ ಹಾಕಿ ತೃಪ್ತಿಪಟ್ಟುಕೊಳ್ಳುತ್ತಾರೆ.
ಈಗ ಇದೇ ಮಾತನ್ನು ಹೇಳಿದ್ದಾರೆ ಕರ್ಣ ಸೀರಿಯಲ್ ಖ್ಯಾತಿಯ ಭುವನೇಶ್ವರಿ ಅರ್ಥಾತ್ ಕರ್ಣನ ತಾಯಿ ಸೀತಾ ಪಾತ್ರ ಮಾಡುತ್ತಿರುವ ನಟಿ ಜಯಶ್ರೀ ಬಿ.ರಾಜ್ ಅವರು. ಇವರು ಬಿಗ್ಬಾಸ್ನ 6ನೇ ಸೀಸನ್ನಲ್ಲಿ ಸ್ಪರ್ಧಿಯಾಗಿದ್ದರು. ಬಿಗ್‌ಬಾಸ್ ಬಗ್ಗೆ ಕೇಳಿದಾಗ, ನಾನು ಮಾತನಾಡಿದರೆ ಕ್ಯಾಕರಿಸಿ ಉಗಿಯುತ್ತಾರೆ ಎನ್ನುತ್ತಲೇ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ ನಟಿ ಜಯಶ್ರೀ.
56
ಕ್ಯಾಕರಿಸಿ ಉಗೀತಾರೆ ನೋಡಿ
statenewsind ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಜಯಶ್ರೀ ಅವರು, ತಮ್ಮ ಮಾತನ್ನು ಕೇಳಿ ಅದರ ಅಭಿಮಾನಿಗಳು ಉಗಿಯುತ್ತಾರೆ ಎನ್ನುತ್ತಲೇ, ನನ್ನ ಅಭಿಪ್ರಾಯ ನಾನು ಹಂಚಿಕೊಳ್ಳುತ್ತೇನೆ. ಅದು ನಿಮ್ಮ ಅಭಿಪ್ರಾಯವೇ ಆಗಿರಬೇಕೆಂದೇನೂ ಇಲ್ಲ. ಒಬ್ಬೊಬ್ಬರ ಅಭಿಪ್ರಾಯ ಒಂದೊಂದು ರೀತಿ ಇರುತ್ತದೆ ಎಂದು, ನೀವು ಗೆಲ್ಲಲು ಯಾವ ಮಟ್ಟಿಗಾದರೂ ಹೋಗುತ್ತೀರಿ ಎನ್ನುವವರಿಗೆ ಬಿಗ್‌ಬಾಸ್ ಷೋ ಎಂದಿದ್ದಾರೆ ನಟಿ.
66
ನೀವು ಯಾವ ಲೆವೆಲ್ಲಿಗಾದರೂ ಇಳೀತೇನೆ
ಬಿಗ್‌ಬಾಸ್ ಸೈಕಾಲಾಜಿಕಲ್ ಗೇಮ್. ಮೈಂಡ್ಸೆಟ್ ಮೇಲೆ ಇರುವಂಥದ್ದು. ನೀವು ಯಾವ ಲೆವೆಲ್ಲಿಗಾದರೂ ಇಳೀತೇನೆ, ಇದನ್ನು ಗೆಲ್ಲುತ್ತೇನೆ ಎನ್ನುವವರಿಗೆ ಈ ಷೋ. ನನಗೆ ನನ್ನ ಪರ್ಸನಲ್ ವಿಷಯವನ್ನು ಬಿಗ್‌ಬಾಸ್ ಮನೆಯಲ್ಲಿ ಓಪನ್ ಆಗಿ ಹೇಳಲು ಇಷ್ಟವಿರಲಿಲ್ಲ. ಗೆಲ್ಲಬೇಕು ಎನ್ನುವ ಉದ್ದೇಶದಿಂದ ಬಚ್ಚಲು ಮನೆಯ ವಿಷಯವನ್ನೂ ಬಿಚ್ಚಿಡುವವಳಲ್ಲ ನಾನು. ಪರ್ಸನಲ್ ಲೈಫೇ ಬೇರೆ, ಷೋನೇ ಬೇರೆ. ವೈಯಕ್ತಿಯ ಬದುಕನ್ನೂ ಬಿಗ್ಬಾಸ್ನಂಥ ಷೋನಲ್ಲಿ ಹೇಳಿ ಎಲ್ಲರ ಸೆಂಟಿಮೆಂಟ್ ಜೊತೆ ಆಟವಾಡಲು ನನಗೆ ಇಷ್ಟವಿರಲಿಲ್ಲ. ಅದಕ್ಕಾಗಿಯೇ ಬಿಗ್‌ಬಾಸ್ ಮನೆಯಿಂದ ಬೇಗ ಹೊರಕ್ಕೆ ಬಂದೆ ಎಂದಿದ್ದಾರೆ. ಆದ್ದರಿಂದ ಯಾವ ಲೆವೆಲ್ಗಾದರೂ ಇಳೀತೇನೆ ಎನ್ನುವವರಿಗೆ ಈ ಷೋ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.