Bigg Boss Kannada "ಪ್ರೋಮೋ ನಿಜವಾಗಿದ್ರೆ ಮಾತ್ರ ಕರ್ನಾಟಕ ನಿಮ್ಮನ್ನು ನಂಬುತ್ತೆ"

Published : Oct 11, 2026, 08:51 AM IST

ಅವಾಚ್ಯ ಶಬ್ದಗಳ ಬಳಕೆ ಹಾಗೂ ಅತಿರೇಕದ ವರ್ತನೆಯಿಂದಾಗಿ ಬಿಗ್‌ಬಾಸ್ ಮನೆಯಿಂದ ಮಂಜುನಾಥ್ ಹೊರಬಂದಿದ್ದಾರೆ ಎನ್ನಲಾದ ಪ್ರೋಮೋ ಬಿಡುಗಡೆಯಾಗಿದೆ. ಈ ಬೆಳವಣಿಗೆಯಿಂದ ಯಶಸ್ ಕೃಷ್ಣ ಸೇರಿದಂತೆ ಕೆಲವರು ಸಂಭ್ರಮಿಸಿದರೆ, ವೀಕ್ಷಕರಲ್ಲಿ ಇದು ನಿಜವೇ ಎಂಬ ಗೊಂದಲ ಮೂಡಿದೆ.

PREV
15
ಮಾಡರ್ನ್ ಮಹಾಕವಿ ಮಂಜ ಔಟ್?

ಅವಾಚ್ಯ ಪದಗಳ ಬಳಕೆ, ಅತಿರೇಕದ ವರ್ತನೆಯಿಂದಾಗಿ ಬಿಗ್‌ಬಾಸ್ ಮನೆಯ ಮಾಡರ್ನ್ ಮಹಾಕವಿ ಮಂಜುನಾಥ್ ಹೊರಗೆ ಬಂದಿದ್ದಾರೆ ಎನ್ನಲಾದ ಪ್ರೋಮೋ ಬಿಡುಗಡೆಯಾಗಿದೆ. ಮೂಲನಿಯಮಗಳ ಉಲ್ಲಂಘನೆಯ ಕಾರಣಗಳನ್ನು ನೀಡಿ ಮನೆಯಿಂದ ಹೊರಗೆ ಬರುವಂತೆ ಸೂಚಿಸಲಾಗಿದೆ. ಹಾಗೆಯೇ ಮಂಜು ಸಹ ಮುಖ್ಯದ್ವಾರದಿಂದ ಹೊರಗೆ ಬಂದಿದ್ದಾರೆ.

25
ಮನೆಯಿಂದ ಹೊರಗೆ ಬಂದ್ರಾ ಮಂಜ?

ಶನಿವಾರದ ವೀಕೆಂಡ್ ಪಂಚಾಯ್ತಿ ಬಳಿಕ ಈ ಪ್ರಕ್ರಿಯೆ ನಡೆದಿದ್ದು, ನಿಜವಾಗ್ಲೂ ಮಂಜುನಾಥ್ ಮನೆಯಿಂದ ಹೊರಗೆ ಬಂದ್ರಾ ಎಂಬುದರ ಬಗ್ಗೆ ಇನ್ನೂ ಪ್ರೇಕ್ಷಕರಲ್ಲಿ ಗೊಂದಲಗಳಿವೆ. ಮತ್ತೊಂದು ಕಡೆ ಬಿಗ್‌ಬಾಸ್ ಮನೆಯ ಸೂಚನೆಯನ್ನು ಕೇಳಿಸಿಕೊಂಡು ಇನ್ನುಳಿದ ಸ್ಪರ್ಧಿಗಳು,ಸಂತೋಷದಿಂದ ಒಬ್ಬರಿಗೊಬ್ಬರು ತಬ್ಬಿಕೊಂಡು ನಿರಾಳರಾಗಿದ್ದಾರೆ.

35
ಸಿಹಿ ತಿಂದ ಬಾಕ್ಲೇಟ್ ಹುಡುಗ ಯಶಸ್ ಕೃಷ್ಣ

ಇತ್ತ ಮಂಜು ಜೊತೆಯಲ್ಲಿ ನೇರವಾಗಿ ಕಣಕ್ಕಿಳಿದಿದ್ದ ಯಶಸ್ ಕೃಷ್ಣ, ಸಿಹಿ ತಿನ್ನುವ ಮೂಲಕ ಆ ಕ್ಷಣವನ್ನು ಸಂಭ್ರಮಿಸಿದ್ದಾರೆ. ಇನ್ನುಳಿದಂತೆ ಮಂಜು ಜೊತೆ ಆಟದ ಹೊರತಾಗಿ ಉತ್ತಮ ಒಡನಾಟ ಹೊಂದಿದ್ದ ಸ್ಪರ್ಧಿಗಳು ಬೇಸರದ ಜೊತೆ ಶಾಕ್ ಹೊರಗೆ ಹಾಕಿದ್ದಾರೆ. ಆದ್ರೆ ಈ ಪ್ರೋಮೋ ಎಷ್ಟು ಸತ್ಯ ಎಂಬುದರ ಬಗ್ಗೆ ವೀಕ್ಷಕರಲ್ಲಿ ಗೊಂದಲಗಳಿವೆ.

45
ವೀಕ್ಷಕರ ಅಭಿಪ್ರಾಯ ಏನು?

ಈ ಪ್ರೋಮೋಗೆ ಕಮೆಂಟ್ ಮಾಡಿರುವ ರಜಾಕ್ ಎಂಬವರು, ಬಿಗ್ ಬಾಸ್ ಇದೆ ಸತ್ಯ ಆಗಿದ್ದರೆ ಕರ್ನಾಟಕ ಜನ ನಿಮ್ಮನ್ನು ಮೆಚ್ಚುತ್ತಾರೆ. ಆದರೆ ಇದು ಸುಳ್ಳು ಆಗಿದ್ದರೆ ಮುಂದೆ ಬರುವ ಸ್ಪರ್ಧಿಗಳು ಇದೇ ತಪ್ಪು ಮಾಡುತ್ತಾರೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಯಾರೇ ತಪ್ಪು ಮಾಡಿದ್ರು ಅಷ್ಟೆ ಮನೆಗೆ ಹೋಗ್ತಾ ಇರ್ಬೇಕು ಒಳ್ಳೆಯ ನಿರ್ಧಾರ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

55
ಯಾಕೆ ಪಕ್ಷಪಾತ?

ಮಂಜು ಅವರು ಒಬ್ಬರೇ ಅವಚ್ಯಾ ಶಬ್ದ ಬಳಿಸಿ ಇರೋದು ಗಗನ್ ಮಾತಾಡಿರೋದು ಹಾಕಿ ವಿಡಿಯೋ, ಸೌಂದರ್ಯ ಮಾತಾಡು ಇರೋ ವಿಡಿಯೋ ಆಡಿಯೋ ಹಾಕಿ ಯಶಸ್ಸು ಆಡಿಯೋ ಹಾಕಿ ಗಗನ್ ಒಂದು ಹೆಣ್ಣು ಮಗಳು ಪ್ಯಾಂಟ್ ರೇಟ್ ಇಲ್ಲ ಅಂತ ಹೇಳುತ್ತಾರೆ. ಇತ್ತ ಗಾನವಿ ಒಬ್ಬ ಮಗನ ಮುಂದೆ ಆತನ ತಾಯಿಯ ರೇಟ್ ಎಷ್ಟು ಎಂದು ಕೇಳುತ್ತಾಳೆ. ಆ ಎಲ್ಲವನ್ನು ಸಹ ಪರಿಗಣಿಸಬೇಕು ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿವೆ .

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories