BBK 12: ಬುದ್ದಿ ಕಲಿಸದೇ ಬಿಡೋದೇ ಇಲ್ಲ: ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಗುಡುಗು

Published : Oct 18, 2025, 01:20 PM IST

ಈ ವಾರದ ಬಿಗ್‌ಬಾಸ್ ಮನೆಯಲ್ಲಿ 'ಗೆಜ್ಜೆ ಸದ್ದು' ವಿವಾದ ಸೃಷ್ಟಿಸಿದ್ದು, ಈ ವಿಚಾರವಾಗಿ ಅಶ್ವಿನಿ ಗೌಡ ಮತ್ತು ಜಾನ್ವಿ, ರಕ್ಷಿತಾ ಶೆಟ್ಟಿಯನ್ನು ಗುರಿ ಮಾಡಿದ್ದಾರೆ. ಸುದೀಪ್ ಈ ವಿಷಯವನ್ನು ಕೈಗೆತ್ತಿಕೊಂಡು ತಪ್ಪಿತಸ್ಥರಿಗೆ ಬುದ್ಧಿ ಕಲಿಸಲಿದ್ದಾರೆ ಎಂದು ವೀಕ್ಷಕರು ನಿರೀಕ್ಷಿಸುತ್ತಿದ್ದಾರೆ.

PREV
15
ವೀಕೆಂಡ್ ಪಂಚಾಯ್ತಿ ಸಂಚಿಕೆ

ಈ ವಾರದ ವೀಕೆಂಡ್ ಪಂಚಾಯ್ತಿ ಸಂಚಿಕೆ ನೀಡಲು ಬಿಗ್‌ಬಾಸ್ ವೀಕ್ಷಕರು ಕಾಯುತ್ತಿದ್ದಾರೆ. ಅಶ್ವಿನಿ ಗೌಡ ಮತ್ತು ಜಾನ್ವಿ ಅವರ ಆಟಕ್ಕೆ ಮನೆಯಲ್ಲಿರೋ ಸದಸ್ಯರು ಸೇರಿದಂತೆ ವೀಕ್ಷಕರು ಸಹ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆರಂಭದಲ್ಲಿ ಎಲ್ಲರಿಂದ ತಿರಸ್ಕೃತಗೊಳಗಾಗಿದ್ದ ರಕ್ಷಿತಾ ಶೆಟ್ಟಿ ಪರವಾಗಿ ವೀಕ್ಷಕರು ನಿಂತಿದ್ದಾರೆ.

25
ಗೆಜ್ಜೆ ಸದ್ದು

ಈ ವಾರ ಬಿಗ್‌ಬಾಸ್ ಮನೆಯಲ್ಲಿ ಗೆಜ್ಜೆ ಸದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ವಿಷಯವಾಗಿ ಅಶ್ವಿನಿ ಗೌಡ ಮತ್ತು ಜಾನ್ವಿ ಜೊತೆಯಾಗಿ ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡಿರೋದು ಕಂಡು ಬಂದಿದೆ. ಮಿಡ್‌ನೈಟ್ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯದ ಬಳಿಕ ಇದೇ ವಿಷಯವಾಗಿ ಮೂವರ ನಡುವೆ ದೊಡ್ಡ ಜಗಳವೇ ನಡೆದಿತ್ತು. ಈ ವೇಳೆ ಮಧ್ಯೆ ಪ್ರವೇಶಿಸಿದ್ದ ಕಾವ್ಯಾ ಅವರನ್ನು ಅಶ್ವಿನಿ ಗೌಡ ಮತ್ತು ಜಾನ್ವಿ ಟಾರ್ಗೆಟ್ ಮಾಡಿದ್ದರು.

35
ಅಶ್ವಿನಿ ಗೌಡ ಮತ್ತು ಜಾನ್ವಿ

ಗೆಜ್ಜೆ ಸೌಂಡ್ ಮಾಡಿದ್ದು ಅಶ್ವಿನಿ ಗೌಡ ಮತ್ತು ಜಾನ್ವಿ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅಶ್ವಿನಿ ಗೌಡ ಮತ್ತು ಜಾನ್ವಿ ಇದನ್ನು ಒಪ್ಪಿಕೊಳ್ಳಲು ಮಾತ್ರ ಸಿದ್ಧವಿಲ್ಲ. ತಪ್ಪು ತಮ್ಮದೇ ಇದ್ರೂ ರಕ್ಷಿತಾ ಜೊತೆ ಜಗಳ ಮಾಡಿದ್ದರು. ಇದೇ ಗೆಜ್ಜೆ ಸದ್ದು ವಿಷಯವಾಗಿ ಜಾನ್ವಿ ಅವರನ್ನು ಗಿಲ್ಲಿನಟ ಮತ್ತು ರಕ್ಷಿತಾ ಶೆಟ್ಟಿ ಎಲಿಮಿನೇಟ್ ಮಾಡಿದ್ದರು.

45
ಬುದ್ಧಿ ಕಲಿಸದೇ ಬಿಡಲ್ಲ

ಇಂದಿನ ಮೊದಲ ಪ್ರೋಮೋ ಬಿಡುಗಡೆಯಾಗಿದೆ. ನಾವು ಕೊಟ್ಟಿರೋ ಮಾತನ್ನು ತಪ್ಪಲ್ಲ, ತಪ್ಪಾಗಿ ಆಡಿರೋ ಮಾತಿಗೆ ಬುದ್ಧಿ ಕಲಿಸದೇ ಬಿಡಲ್ಲ. ಒಳ್ಳೆಯ ಕೆಲಸ ಮಾಡಿದಾಗ ನಾವು ಕೈ ತಟ್ಟಿ ಚಪ್ಪಾಳೆಯನ್ನು ಸಹ ಕೊಡ್ತೀವಿ. ಎಲ್ಲಿದ್ದೀವಿ ಅನ್ನೋದನ್ನು ಮರೆತು ಬಾಯಿಗೆ ಬಂದ ಹಾಗೆ ಮಾತಾಡಿದವರಿಗೆ ಚೂರು ತಲೆ ಮೇಲೆ ತಟ್ಟಿ ಬುದ್ದಿ ಹೇಳಬೇಕಾಗುತ್ತದೆ ಎಂದು ಸುದೀಪ್ ಆರಂಭದಲ್ಲಿಯೇ ಹೇಳಿದ್ದಾರೆ.

ಇದನ್ನೂ ಓದಿ: ಕೇಳಿ ಕೇಳಿ ಮರ್ಯಾದೆ ತೆಗೆಸಿಕೊಳ್ಳೋದು ಅಂದ್ರೆ ಇದೇನಾ? ಗಿಲ್ಲಿ ಉತ್ತರಗಳಿಗೆ ಅಶ್ವಿನಿ ಗೌಡ ತಬ್ಬಿಬ್ಬು 

55
ಖಡಕ್ ಆಗಿ ಮಾತಾಡಿ ಗ್ರಹಚಾರ ಬಿಡಿಸಿ

ಈ ಪ್ರೋಮೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಸರ್ ದಯವಿಟ್ಟು ಕ್ಲಾಸ್ ತೆಗೆದುಕೊಳ್ಳಿ. ಅಶ್ವಿನಿ ಗೌಡಗೆ ಇಲ್ಲ ಅಂದ್ರೆ ಬಿಗ್ ಬಾಸ್ ಶೋಗೆ ಬೆಲೆ ಇರೋದಿಲ್ಲ. ಸರ್ ನಿಮಗಾಗಿ ಕಾಯ್ತಾ ಇದ್ದೀವಿ. ಪಂಚಾಯಿತಿ ಕರೆಕ್ಟಾಗಿರಲಿ ಸ್ವಾಮಿ. ಖತರ್ನಾಕ್ ಆಂಟಿಗಳ ಅಹಂಕಾರ ಇಳಿಬೇಕು ಅಷ್ಟೆ. ಚೈತ್ರಾ ಕುಂದಾಪುರಗೆ ಹೇಗೆ ರುಬ್ಬಿದ್ರೋ ಅದೇ ರೀತಿ ರುಬ್ಬಬೇಕು ಖಡಕ್ ಆಗಿ ಮಾತಾಡಿ ಗ್ರಹಚಾರ ಬಿಡಿಸಿ ಆ ಎರಡು ಕೊಳ್ಳಿ ದೆವ್ವಗಳದ್ದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ  ಓದಿ:  ಡೋಂಟ್ ಅಂಡರ್‌ಎಸ್ಟಿಮೇಟ್ ಮಲ್ಲಮ್ಮ; ಪ್ರೆಸ್‌ಮೀಟ್‌ನಲ್ಲಿ ನೀಡಿದ ಉತ್ತರಕ್ಕೆ ಶಿಳ್ಳೆ, ಚಪ್ಪಾಳೆ, ಜೈಕಾರ 

Read more Photos on
click me!

Recommended Stories