ಗುಟ್ಟಾಗಿ ಮದ್ವೆಯಾದ್ರಾ Bigg Boss ತನಿಷಾ ಕುಪ್ಪಂಡ? ತಾಳಿ ಹಾಕಿಕೊಂಡು ಪ್ರೆಸ್​ಮೀಟ್​ನಲ್ಲಿ ನಟಿ ಹೇಳಿದ್ದೇನು?

Published : Oct 18, 2025, 11:48 AM IST

ಬಿಗ್​ಬಾಸ್​ ಖ್ಯಾತಿಯ ನಟಿ ತನಿಷಾ ಕುಪ್ಪಂಡ ತಮ್ಮ ಮುಂಬರುವ 'ಕೋಣ' ಚಿತ್ರಕ್ಕಾಗಿ ಚಾಮುಂಡಿ ದೇವಿಗೆ ಹರಕೆ ಹೊತ್ತು ನಾನ್‌ವೆಜ್ ತ್ಯಜಿಸಿದ್ದಾರೆ.  ಇದರ ನಡುವೆಯೇ ಅವರು ತಾಳಿ ಹಾಕಿಕೊಂಡು ಪ್ರೆಸ್​ಮೀಟ್​ ಮಾಡಿರುವ ವಿಡಿಯೋ ವೈರಲ್​ ಆಗ್ತಿದೆ.  ಏನಿದು ಸುದ್ದಿ? 

PREV
18
ಬಿಗ್​ಬಾಸ್​ ಖ್ಯಾತಿಯ ತನಿಷಾ ಕುಪ್ಪಂಡ

ಬಿಗ್​ಬಾಸ್​ ಖ್ಯಾತಿಯ ತನಿಷಾ ಕುಪ್ಪಂಡ (Bigg Boss Tanisha Kuppanda) ಈಗ ಕಿರುತೆರೆ, ಹಿರಿತೆರೆ ಎಲ್ಲಾ ಕಡೆಯೂ ಫೇಮಸ್​ ಆಗಿದ್ದಾರೆ. ಅದರಲ್ಲಿಯೂ ಬಿಗ್​ಬಾಸ್​ ಇವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿದೆ. ಪೆಂಟಗನ್ ಚಿತ್ರದ ಮೂಲಕ ಎಂಥ ಪಾತ್ರಕ್ಕೂ ಸೈ ಎನ್ನುವಂಥ ನಟನೆ ಮಾಡಿದ್ದಾರೆ ತನಿಷಾ. ಇಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಕಚಗುಳಿ ನೀಡಿದ್ದಾರೆ. ‘ಮಂಗಳಗೌರಿ ಮದುವೆ’, ‘ಇಂತಿ ನಿಮ್ಮ ಆಶಾ’ ಮುಂತಾದ ಸೀರಿಯಲ್‌ಗಳಲ್ಲಿ ನಟಿಸುವ ಮೂಲಕ ಮನೆಮಾತಾಗಿರುವ ನಟಿ ಇದೀಗ ಪೆನ್​ಡ್ರೈವ್​ ಸಿನಿಮಾದಲ್ಲಿಯೂ ಸಕತ್​ ನಟನೆ ಮಾಡಿದ್ದಾರೆ. ಇಲ್ಲಿ ಅವರು ಪೊಲೀಸ್​​ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

28
ನಾನ್​ವೆಜ್​ ಬಿಟ್ಟು ಸದ್ದು

ಇಂತಿಪ್ಪ ತನಿಷಾ ಇದೀಗ ನಾನ್​ವೆಜ್​ ಬಿಟ್ಟು ಸದ್ದು ಮಾಡುತ್ತಿದ್ದಾರೆ. ಈ ಬಗ್ಗೆ ಅವರೇ ಖುದ್ದಾಗಿ ವಿಷಯ ತಿಳಿಸಿದ್ದಾರೆ. ಹಾಗೆಂದು ಅವರು ಪರ್ಮನೆಂಟ್​ ಆಗೇನೂ ನಾನ್​ವೆಜ್​ ಬಿಟ್ಟಿಲ್ಲ. ಆದ್ರೆ ಕೆಲವು ದಿನಗಳ ಮಟ್ಟಿಗೆ ಬಿಟ್ಟಿರುವುದಾಗಿ ಹೇಳಿದ್ದಾರೆ. ಅದಕ್ಕೆ ಕಾರಣವೂ ಇದೆ. ಅಂದಹಾಗೆ ತನಿಷಾ ಅವರ ಕೋಣ ಚಿತ್ರ ಮುಂದಿನ ಚಿತ್ರ ನವೆಂಬರ್​ ತಿಂಗಳಿನಲ್ಲಿ ರಿಲೀಸ್​ ಆಗಲಿದೆ. ಅದರ ಪ್ರಮೋಷನ್​ ಶುರು ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ಚಾಮುಂಡೇಶ್ವರಿ ದೇವಿಯಲ್ಲಿ ಪೂಜೆ ಸಲ್ಲಿಸಲು ಹೋಗಿದ್ದಾರೆ. ಆಗ ಅವರಿಗೆ ನಾನ್​ ವೆಜ್​ ಬಿಡಬೇಕು ಎನ್ನಿಸಿದೆಯಂತೆ. ಅದಕ್ಕಾಗಿ ಇದನ್ನು ಬಿಟ್ಟಿರುವುದಾಗಿ ಹೇಳಿದ್ದಾರೆ.

38
ಚಾಮುಂಡಿ ಬೆಟ್ಟದಲ್ಲಿ ಪ್ರತಿಜ್ಞೆ

ನಾನು ಮೊದಲ ಸಲ ಚಾಮುಂಡಿ ಬೆಟ್ಟಕ್ಕೆ ಹೋದೆ. ಅಲ್ಲಿಗೆ ಹೋಗಿ ಬಂದಾಗ ನಾನ್​ವೆಜ್​ ಬಿಡಬೇಕು ಎನ್ನಿಸಿತು. ಆದ್ದರಿಂದ ದೇವಿಯ ಬಳಿ ಹೇಳಿಕೊಂಡಿದ್ದೇನೆ, ಆದ್ದರಿಂದ ನಾನ್​ವೆಜ್​ ತಿನ್ನುವುದಿಲ್ಲ ಎಂದಿದ್ದಾರೆ. ಹಾಗೆಂದು ದೇವಿಯ ಬಳಿ ಅವರು ಬೇಡಿಕೊಂಡದ್ದು ಅವರ ಮುಂಬರುವ ಚಿತ್ರ ರಿಲೀಸ್​ ಆಗುವವರೆಗೂ ನಾನ್​ವೆಜ್​ ತಿನ್ನಲ್ಲ ಎಂದು ಅಷ್ಟೇ.

48
ಕೊರಳಲ್ಲಿ ತಾಳಿ

ಇಂತಿಪ್ಪ ತನಿಷಾ ಕುಪ್ಪಂಡ ದಿಢೀರ್ ಸುದ್ದಿಗೋಷ್ಠಿಯಲ್ಲಿ ತಾಳಿ ಹಾಕಿಕೊಂಡು ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದವರು ಶಾಕ್​ ಆಗಿದ್ದಾರೆ. ಮದ್ವೆ ಆಯ್ತಾ? ಯಾವಾಗ ಆಯ್ತು ಎಂದೆಲ್ಲಾ ಕೇಳಿದ್ದಾರೆ. ಎಷ್ಟು ವರ್ಷ ಆಯ್ತು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ನಟಿ, ಎಷ್ಟು ವರ್ಷ ಎಂದು ಕೇಳ್ತೀರಲ್ಲ. ನನ್ನನ್ನು ನೀವು ನೋಡಿರಲಿಲ್ವಾ ಎಂದಿದ್ದಾರೆ. ಕೊನೆಗೆ ಅಲ್ಲಿಗೆ ಬಂದವರು ಒಬ್ಬರು ನಾನು ಹೇಳಲಾ ಎಂದಾಗ ತನಿಷಾ ಬೇಡ ಎಂದಿದ್ದಾರೆ. ಗಂಡ ರೋಬೋ ಜೊತೆಯಲ್ಲಿ ಕೆಲಸ ಮಾಡುತ್ತಾರೆ ಎಂದಿದ್ದಾರೆ.

58
ಚಿತ್ರದ ಪ್ರಮೋಷನ್​

ಇದು ಕೋಣ ಚಿತ್ರದ ಪ್ರಮೋಷನ್ ಸಮಯದಲ್ಲಿ ನಡೆದ ಪತ್ರಿಕಾಗೋಷ್ಠಿ ಆಗಿದೆ. ಅದೀಗ ಮತ್ತೆ ವೈರಲ್​ ಆಗಿದೆ ಅಷ್ಟೇ. ತನಿಷ್​ ಮೀಡಿಯಾ ಇದನ್ನು ಪುನಃ ಶೇರ್​ ಮಾಡಿಕೊಂಡಿರುವ ಕಾರಣ ವೈರಲ್​ ಆಗಿದೆ. ಇದರಲ್ಲಿ ತನಿಷಾ ತಾಳಿ ಬಗ್ಗೆ  ಏನೂ ಹೇಳಿಲ್ಲ. ಅಷ್ಟಕ್ಕೂ ಸಿನಿಮಾದ ಪ್ರಮೋಷನ್​ಗಾಗಿ ವಿಭಿನ್ನ ರೀತಿಯ ಗಿಮಿಕ್​ ಮಾಡಲೇಬೇಕು. ಆಗಲೇ ಅದು ಸದ್ದು ಮಾಡುವುದು ಎಂದು ಚಿತ್ರತಂಡಕ್ಕೆ ಗೊತ್ತಿರುತ್ತೆ. ಸುಮ್ಮನೇ ಪ್ರೆಸ್​ಮೀಟ್​ ಮಾಡಿ ಹೇಳಿದ್ರೂ ಅದು ಅಷ್ಟು ಸದ್ದು ಮಾಡಲ್ಲ, ಸೋಷಿಯಲ್​ ಮೀಡಿಯಾದಲ್ಲಿ ಹವಾ ಸೃಷ್ಟಿಸಬೇಕಾದರೆ ಇಂಥ ಗಿಮಿಕ್​ಗಳು ಅನಿವಾರ್ಯ ಎನ್ನುವ ಕಾರಣಕ್ಕೆ ಹೀಗೆ ಮಾಡಿರಲೂಬಹುದು.

68
ಕೋಣ ಚಿತ್ರದ ಡಿಟೇಲ್ಸ್​

ಅಂದಹಾಗೆ, ಕುಪ್ಪಂಡಾಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತನಿಷಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕ ಪಾಲ್, ರವಿಕಿರಣ್ .ಎನ್ ಅವರು ‘ಕೋಣ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಶಾಂಕ್ ಶೇಷಗಿರಿ ಅವರ ಸಂಗೀತ ನಿರ್ದೇಶನವಿದೆ. ವೀನಸ್ ನಾಗರಾಜ್‌ ಮೂರ್ತಿ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಉಮೇಶ್ ಆರ್. ಬಿ. ಅವರ ಸಂಕಲನವಿದ್ದು, ಸಾಹಸ ನಿರ್ದೇಶಕರಾಗಿ ವಿನೋದ್‌ಕುಮಾರ್ ಹಾಗೂ ನೃತ್ಯ ನಿರ್ದೇಶನವನ್ನು ಮುರುಗನ್ ಮಾಡಿದ್ದಾರೆ.

78
ಟ್ರೇಲರ್​ ರಿಲೀಸ್​

ಕೋಮಲ್ ಕುಮಾರ್ ಹೊಸ ಅವತಾರದಲ್ಲಿ ಕಾಣಿಸುತ್ತಾರೆ. ಇದಾಗಲೇ ಟೀಸರ್ ಕುತೂಹಲ ಹೆಚ್ಚಿಸಿತ್ತು. ಬಳಿಕ ಮೊನ್ನೆಯಷ್ಟೇ ಕೋಣ ಚಿತ್ರದ ಟ್ರೇಲರ್ ಕೂಡ ರಿಲೀಸ್ ಆಗಲಿದೆ. ಕಾಮಿಡಿ, ಆಕ್ಷನ್, ಸಸ್ಪೆನ್ಸ್ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ.

88
ತನಿಷಾ ಕುಪ್ಪಂಡ ನಾಯಕಿ

ನಿರ್ಮಾಣದಲ್ಲಿ ಕೈ ಜೋಡಿಸಿರುವ ತನಿಷಾ ಕುಪ್ಪಂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೀರ್ತಿ ರಾಜ್, ರಿತ್ವಿ ಜಗದೀಶ್, ನಮ್ರತಾ ಗೌಡ, ವಿನಯ್ ಗೌಡ, ರಾಘು ರಾಮನಕೊಪ್ಪ, ವಿಜಯ್ ಚೆಂಡೂರ್, ಎಂ.ಕೆ.ಮಠ್, ರಂಜಿತ್ ಗೌಡ, ತುಕಾಲಿ ಸಂತೋಷ್, ಹುಲಿ ಕಾರ್ತಿಕ್, ನಿರಂಜನ್, ಅನಂತ್, ಶಿಶಿರ್ ಶಾಸ್ತಿç, ಗೋಲ್ಡ್ ಸುರೇಶ್, ಸುಷ್ಮಿತ, ಜಗಪ್ಪ, ಮಂಜು ಪಾವಗಡ, ಕುರಿ ಸುನಿಲ್, ಮೋಹನ್ ಕೃಷ್ಣರಾಜ್ ಹೀಗೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories