BBK 12: ಇಂಥಾ ಟೈಮ್‌ನಲ್ಲಿ ಈ ರೀತಿ ಮಾತು ಬೇಕಿತ್ತಾ? ಕಿಚ್ಚ ಸುದೀಪ್ ಖಡಕ್ ಕ್ಲಾಸ್

Published : Jan 03, 2026, 12:41 PM IST

ವೀಕೆಂಡ್‌ ಸಂಚಿಕೆಯ ಪ್ರೋಮೋದಲ್ಲಿ ಕಿಚ್ಚ ಸುದೀಪ್, ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವಿನ ಜಗಳದ ಬಗ್ಗೆ ಪ್ರಶ್ನಿಸಿದ್ದಾರೆ. ಅಲ್ಲದೆ, ಗೆದ್ದರೂ ಸಂಭ್ರಮಿಸಲು ಆಗದಿರುವ ಧನುಷ್ ಮತ್ತು ಕ್ಯಾಪ್ಟನ್ಸಿ ಟಾಸ್ಕ್‌ನ ಗೊಂದಲಗಳ ಬಗ್ಗೆಯೂ ಚರ್ಚೆಯ ಸುಳಿವು ನೀಡಿದ್ದಾರೆ.

PREV
15
ವೀಕೆಂಡ್‌ ಸಂಚಿಕೆಯ ಪ್ರೋಮೋ

ವೀಕೆಂಡ್‌ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದ್ದು, ಬಿಗ್‌ಬಾಸ್ ವೀಕ್ಷಕರು ಮತ್ತು ಅಭಿಮಾನಿಗಳಿಗೆ ಸ್ವಾತಿಮುತ್ತು ಕಿಚ್ಚನ ದರ್ಶನವಾಗಿದೆ. ಪ್ರೋಮೋದಲ್ಲಿ ಈ ವಾರ ಚರ್ಚೆಯಾಗಬಹುದಾದ ವಿಷಯಗಳ ಸುಳಿವನ್ನು ಸುದೀಪ್ ನೀಡಿದ್ದಾರೆ.

25
ಇಂಥಾ ಮಾತುಗಳು ಬೇಕಿತ್ತಾ?

ಬಿಗ್‌ಬಾಸ್ ವೇದಿಕೆಗೆ ಆಗಮಿಸಿರುವ ಸುದೀಪ್, ಇಷ್ಟು ದಿನಗಳ ಕಾಲ ಒಳ್ಳೆಯ ಆಟದ ಮೂಲಕ ಜನರ ಮನಸ್ಸು ಗೆದ್ದಿರುವ ಕೆಲವರಿಗೆ, ಈ ಸಮಯದಲ್ಲಿ ಇಂಥಾ ಮಾತುಗಳು ಬೇಕಿತ್ತಾ ಎಂದು ಹೇಳುತ್ತಾರೆ. ಈ ಮಾತಿನ ಬಳಿಕ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವಿನ ಮಾತಿನ ಚಕಮಕಿಯನ್ನು ತೋರಿಸಲಾಗುತ್ತದೆ. ಈ ಬಾರಿ ಗಿಲ್ಲಿ ನಟ ಏಕವಚನದಲ್ಲಿಯೇ ಅಶ್ವಿನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

35
ಗೆಲುವನ್ನು ಸಂಭ್ರಮಿಸಲು ಆಗುತ್ತಿಲ್ಲ

ಮುಂದುವರಿದು ಮಾತನಾಡುವ ಸುದೀಪ್, ಆಟದಲ್ಲಿ ಗೆದ್ರೂ ಕೂಡ ಕೆಲವರಿಗೆ ಗೆಲುವನ್ನು ಸಂಭ್ರಮಿಸಲು ಆಗುತ್ತಿಲ್ಲ ಎಂದು ಹೇಳುತ್ತಾರೆ. ಈ ಮಾತುಗಳ ಬಳಿಕ ಧನುಷ್ ಮತ್ತು ಅಶ್ವಿನಿ ಗೌಡ ನಡುವಿನ ಸಂಭಾಷಣೆ ಮತ್ತು ಆಟದಲ್ಲಾದ ವ್ಯತ್ಯಾಸವನ್ನು ತೋರಿಸಲಾಗುತ್ತದೆ. ಈ ವಾರ ಪ್ರಮುಖವಾಗಿ ಎರಡು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂಬುದನ್ನು ಪ್ರೋಮೋ ಮೂಲಕ ತೋರಿಸಲಾಗಿದೆ.

ಇದನ್ನೂ ಓದಿ: Bigg Boss Kannada 12: ಯಾಕೆ ಈ ಮೌನ ರಾಶಿಕಾ? ನಿಮಗೆಲ್ಲಾ ಗೊತ್ತಿತ್ತು ಅಲ್ಲವಾ?

45
ಗಿಲ್ಲಿ ಆಟದ ವೈಖರಿ

14ನೇ ವಾರದ ಕ್ಯಾಪ್ಟನ್ ಆಗಿರುವ ಗಿಲ್ಲಿ ನಟ ವಿರುದ್ಧ ಅಶ್ವಿನಿ ಗೌಡ ಮತ್ತು ಧ್ರುವಂತ್ ಜೊತೆಯಾಗಿ ಹಲವು ಆರೋಪಗಳನ್ನು ಮಾಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ಮತ್ತು ಟಾಸ್ಕ್ ಉಸ್ತುವಾರಿ ಸಂಬಂಧ ಅಶ್ವಿನಿ ಗೌಡ ಬೇಸರ ವ್ಯಕ್ತಪಡಿಸಿದರು. ಇತ್ತ ಕ್ಯಾಪ್ಟನ್ ಗಿಲ್ಲಿ ಆಟದ ವೈಖರಿ ಬಗ್ಗೆ ರಕ್ಷಿತಾ ಶೆಟ್ಟಿ ಮತ್ತು ರಘು ಸಹ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: Bigg Boss ಮನೆಯಲ್ಲಿ ಗಿಲ್ಲಿ ನಟ ಎಂಥ ಕಿಲಾಡಿ ಎನ್ನೋದಿಕ್ಕೆ ಬಲವಾದ ಸಾಕ್ಷಿಗಳಿವು! ಎಲ್ರಿಗೂ ಕಾಣಿಸಿಲ್ಲ!

55
ಟಾಸ್ಕ್ ಉಸ್ತುವಾರಿ

ಮತ್ತೊಂದೆಡೆ ಕ್ಯಾಪ್ಟನ್ಸಿ ಟಾಸ್ಕ್ ಉಸ್ತುವಾರಿಯ ಎಡವಟ್ಟಿನಿಂದ ಇಡೀ ಆಟವೇ ಬದಲಾಗಿ ಅಂತಿಮವಾಗಿ ಮತದಾನದ ಮೂಲಕ ಮುಂದಿನ ವಾರ ಕ್ಯಾಪ್ಟನ್ ಆಯ್ಕೆ ಮಾಡಲಾಯ್ತು. ಕ್ಯಾಪ್ಟನ್ ಆಯ್ಕೆಯೇ ತಪ್ಪು ಎಂದು ಅಶ್ವಿನಿ ಗೌಡ ಭಾವುಕರಾಗಿದ್ದರು. ಮತ್ತೊಂದೆಡೆ ಕ್ಯಾಪ್ಟನ್ ಆದ್ರೂ ಧನುಷ್ ಮತ್ತು ಬೇರಾವ ಸದಸ್ಯರು ಸಂಭ್ರಮಿಸಲಿಲ್ಲ. ಧನುಷ್ ಸಹ ಕ್ಯಾಪ್ಟನ್ ರೂಮ್ ಬಳಸದಿರಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: BBK 12: ಕೊನೆಯ ಕ್ಯಾಪ್ಟನ್ಸಿ ಆಯ್ಕೆ ವಿವಾದ: ರಾಶಿಕಾ-ಸ್ಪಂದನಾ ಜೊತೆ ಕುಳಿತು ಧನುಷ್ ದೃಢ ನಿರ್ಧಾರ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories