150 ಬಾಡಿ ಗಾರ್ಡ್​ ಹೊಂದಿದ್ದಾರೆ ಈ Bigg Boss ಚೆಲುವೆ? ಯಾರೀಕೆ? ಏನಿದರ ಅಸಲಿಯತ್ತು?

Published : Jan 03, 2026, 12:29 PM IST

ಬಿಗ್‌ಬಾಸ್‌ 19ರ ಫೈನಲಿಸ್ಟ್  ತಮಗೆ 150 ಅಂಗರಕ್ಷಕರು ಇದ್ದಾರೆ ಎಂದು ಹೇಳಿ ಸುದ್ದಿಯಾಗಿದ್ದರು. ಆದರೆ, ಶೋ ಮುಗಿದ ನಂತರ ತಮ್ಮ ಹೇಳಿಕೆಯನ್ನು ನಿರಾಕರಿಸಿರುವ ಅವರು, ತನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಯಾರೀಕೆ?

PREV
15
ಕಾಂಟ್ರವರ್ಸಿ ಲೇಡಿ

ಖ್ಯಾತ ಉದ್ಯಮಿಯೂ ಆಗಿರೋ ತಾನ್ಯಾ ಮಿತ್ತಲ್​, Salman Khan ನಡೆಸಿಕೊಡುವ ಹಿಂದಿಯ ಬಿಗ್‌ಬಾಸ್‌ 19ನ ಫೈನಲಿಸ್ಟ್​ ಆದವರು. ಈಕೆ ಕಾಂಟ್ರವರ್ಸಿ ಲೇಡಿ ಎನ್ನುವ ಕಾರಣಕ್ಕೇನೇ ಬಿಗ್​ಬಾಸ್​​ನಲ್ಲಿ ಅವಕಾಶ ಸಿಕ್ಕಿದ್ದು, ಕೊನೆಯವರೆಗೂ ಇದ್ದರು. ಬಿಗ್​ಬಾಸ್​​ ಮನೆಯಲ್ಲಿಯೂ ತಾನ್ಯಾ ಕೆಲವೊಂದು ಬಿಗ್‌ ಸ್ಟೇಟ್‌ಮೆಂಟ್‌ ನೀಡುತ್ತಲೇ ಫೇಮಸ್​ ಆದವರು. ಸ್ನಾನ ಮಾಡೋಕೆ ಮುಂಚೆ ಬಾತ್‌ರೂಮ್‌ಗೆ ಏನನ್ನು ತೆಗೆದುಕೊಂಡು ಹೋಗಬೇಕು ಅನ್ನೋದನ್ನೂ ತಿಳಿದಿಲ್ಲದಂತೆ ವರ್ತಿಸುತ್ತಲೇ ನಾಟಕ ಮಾಡುವಲ್ಲಿ ಫೇಮಸ್​ ಆದವರು.

25
150ಕ್ಕೂ ಹೆಚ್ಚು ಅಂಗರಕ್ಷಕರು

ಇಂಥ ಸ್ಟೇಟ್​ಮೆಂಟ್​ಗಳ ನಡುವೆ ಕೇಳಿಬಂದದ್ದು, ತಮ್ಮ ಬಳಿ 150 ಕ್ಕೂ ಹೆಚ್ಚು ಅಂಗರಕ್ಷಕರು ಇದ್ದಾರೆ ಎಂದದ್ದು. ಹಾಗೂ ಬಕ್ಲಾವಾ ತಿನ್ನಲು ಮಾತ್ರ ದುಬೈಗೆ ಪ್ರಯಾಣಿಸಿದ್ದಾಗಿ ಉಲ್ಲೇಖಿಸಿದ್ದರು. ಇದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಅಷ್ಟಕ್ಕೂ ಈಕೆ ಆಗರ್ಭ ಶ್ರೀಮಂತೆಯಾಗಿರುವ ಹಿನ್ನೆಲೆಯಲ್ಲಿ ಇಷ್ಟು ಬಾಡಿ ಗಾರ್ಡ್​ ಇದ್ದರೂ ಇರಬಹುದು ಎನ್ನುವ ಮಾತು ಕೂಡ ಕೇಳಿಬಂದಿತ್ತು.

35
ಉಲ್ಟಾ ಹೊಡೆದ ಉದ್ಯಮಿ

ಆದರೆ ಬಿಗ್​ಬಾಸ್​ ಮುಗಿಯುತ್ತಿದ್ದಂತೆಯೇ ಉಲ್ಟಾ ಹೊಡೆದಿರುವ ತಾನ್ಯಾ, ಹಾಗೆ ನಾನು ಹೇಳೇ ಇಲ್ಲ. ನನ್ನ ಮಾತನ್ನು ಅಪಾರ್ಥ ಮಾಡಿಕೊಳ್ಲಳಾಗಿದೆ ಎಂದಿದ್ದಾರೆ. ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತಾನ್ಯಾ, "ನಾನು ಹಾಗೆ ಹೇಳಲೇ ಇಲ್ಲ.ಹಾಗೆ ಹೇಳುವ ಯಾವುದೇ ವೀಡಿಯೊ ಇಲ್ಲ. ಇದೆಲ್ಲವೂ ಕಟ್ಟುಕಥೆ. ನನಗೆ 150 ಅಂಗರಕ್ಷಕರಿದ್ದಾರೆ ಎಂದು ನಾನು ಹೇಳುವ ಒಂದೇ ಒಂದು ವೀಡಿಯೊವನ್ನು ನೀವು ಇಂಟರ್ನೆಟ್‌ನಲ್ಲಿ ಕಾಣುವುದಿಲ್ಲ. ಇನ್ನೋರ್ವ ಸ್ಪರ್ಧಿ ಈ ಬಗ್ಗೆ ತಮಾಷೆ ಮಾಡಿದ್ದರು ಅಷ್ಟೇ. ಏಕೆಂದರೆ, ನನ್ನಲ್ಲಿ 150 ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ ಎಂದು ನಾನು ಅವನಿಗೆ ಹೇಳಿದ್ದೆ ಎಂದಿದ್ದಾರೆ!

45
ವಿಡಿಯೋ ಇಲ್ಲ

ಅಲ್ಲಿಗೆ ತಾವು ಹೇಳಿದ್ದನ್ನು ಒಪ್ಪಿಕೊಂಡರೂ, ಆ ಬಗ್ಗೆ ಯಾವುದೇ ವಿಡಿಯೋ ಇಲ್ಲದ ಕಾರಣ ಹಾಗೆ ಹೇಳಿದ್ದೇ ಸುಳ್ಳು ಎಂದೂ ಹೇಳಿದ್ದಾರೆ. ಒಟ್ಟಿನಲ್ಲಿ ಕಾಂಟ್ರವರ್ಸಿ ಮಾಡಿಕೊಂಡು ಬಿಗ್​ಬಾಸ್​ನ ಟಿಆರ್​ಪಿಯನ್ನೂ ಏರಿಸಿ, ತಾವು ಕೂಡ ಫೈನಲ್​ವರೆಗೆ ಬಂದಿರೋ ಸಾಧನೆ ಮಾಡಿ ಬಿಗ್​ಬಾಸ್​ನಿಂದ ಹೊರಕ್ಕೆ ಬಂದವರು ತಾನ್ಯಾ.

55
ನಿಖರ ಸಂಖ್ಯೆ ಗೊತ್ತಿಲ್ಲ

ಅಂದಹಾಗೆ ತಾನ್ಯಾ ಅವರೇ ಹೇಳಿದಂತೆ, "ನನಗೆ ಗಾರ್ಮೆಂಟ್ ಕಾರ್ಖಾನೆ, ಔಷಧ ಕಾರ್ಖಾನೆ ಮತ್ತು ಉಡುಗೊರೆ ಕಾರ್ಖಾನೆ ಇದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ನಿಮಗೆ ಎಲ್ಲವನ್ನೂ ತೋರಿಸಲು ಸಾಧ್ಯವಿಲ್ಲ. ನನ್ನ ಬೆಂಬಲಿಗರು ಸುಳ್ಳುಗಾರರಲ್ಲ ಮತ್ತು ನಾನು ಎಂದಿಗೂ ಸುಳ್ಳು ಹೇಳಿಲ್ಲ. ನನ್ನ ಬಳಿ ಅಂಗರಕ್ಷಕರು ಇರುವುದು ಕೂಡ ನಿಜ, ಆದರೆ ಅವರು ಎಷ್ಟು ಮಂದಿ ಎಂದು ಗೊತ್ತಿಲ್ಲ. ಎಲ್ಲಾ ಕಡೆಗಳಲ್ಲಿಯೂ ಅಂಗರಕ್ಷಕರು ಇರುವುದರಿಂದ ಅವರ ನಿಖರ ಸಂಖ್ಯೆ ನನಗೆ ಗೊತ್ತಿಲ್ಲ ಎಂದಿದ್ದಾರೆ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories