ಥರ್ಡ್ ಕ್ಲಾಸ್ ರೀತಿ ವರ್ತಿಸಿದ್ದ, ಅವಾಜ್ ಹಾಕಿದ್ಮೇಲೆ ಬಕೆಟ್ ಹಿಡಿತಿದ್ದಾನೆ: ಸತೀಶ್ ಹೇಳಿದ್ಯಾರಿಗೆ?

Published : Oct 04, 2025, 11:05 AM IST

Bigg Boss: ನಾಮಿನೇಷನ್ ಪ್ರಕ್ರಿಯೆ ಬಳಿಕ ಸತೀಶ್ ಮತ್ತು ಅಭಿಷೇಕ್ ನಡುವೆ ಮಾತಿನ ಚಕಮಕಿ ನಡೆದಿದೆ. ಈಗ ಬಕೆಟ್ ಹಿಡಿಯುತ್ತಿದ್ದಾರೆ ಮತ್ತು ಮನೆಯಲ್ಲಿ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಆರೋಪಿಸಿದ್ದಾರೆ. ಈ ನಡುವೆ, ಸತೀಶ್ ಮತ್ತು ಚಂದ್ರಪ್ರಭ ಜೋಡಿ ಸೀಕ್ರೆಟ್ ಟಾಸ್ಕ್ ಗೆದ್ದು ಗಮನ ಸೆಳೆದಿದ್ದಾರೆ.

PREV
15
ಬಿಗ್‌ಬಾಸ್ ಮನೆ

ನಾಯಿ ಪ್ರೇಮಿ ಮತ್ತು ಮಾರಾಟಗಾರರಾಗಿರುವ ಸತೀಶ್ ಬಿಗ್‌ಬಾಸ್ ಮನೆಯಲ್ಲಿ ತಮ್ಮ ಅದ್ಧೂರಿ ಜೀವನಶೈಲಿಯಿಂದಲೇ ಫೇಮಸ್ ಆಗುತ್ತಿದ್ದಾರೆ. ಹಾಸ್ಯ ಕಲಾವಿದ ಚಂದ್ರಪ್ರಭ ಅವರೊಂದಿಗೆ ಜಂಟಿಯಾಗಿ ಬಂದಿರುವ ಸತೀಶ್‌ ನಾಮಿನೇಷನ್ ಪ್ರಕ್ರಿಯೆ ಬಳಿಕ ಕೆಲವೊಂದು ವಿಷಯಗಳನ್ನು ಮಾತನಾಡಿದ್ದಾರೆ.

25
ಅಭಿಷೇಕ್-ಅಶ್ವಿನಿ ಎಸ್‌ಎನ್ ನಾನಿನೇಟ್

ಈ ವಾರ ಮನೆಯಿಂದ ಹೊರಗೆ ಹೋಗಲು ಅಭಿಷೇಕ್-ಅಶ್ವಿನಿ ಎಸ್‌ಎನ್ ನಾನಿನೇಟ್ ಆಗಿದ್ದಾರೆ. ಚಂದ್ರಪ್ರಭ ಮತ್ತು ಸತೀಶ್ ಜೊತೆಯಾಗಿ ಅಭಿಷೇಕ್ ಅವರನ್ನು ನಾಮಿನೇಟ್ ಮಾಡುತ್ತಾರೆ. ಈ ಪ್ರಕ್ರಿಯೆ ಬಳಿಕ ಚಂದ್ರಪ್ರಭ-ಸತೀಶ್ ಬಳಿಯಲ್ಲಿ ಬಂದ ಅಭಿಷೇಕ್ ಮತ್ತು ಅಶ್ವಿನಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಾರೆ.

35
ಕೆಟ್ ಹಿಡಿಯುತ್ತಿದ್ದಾನೆ

ಆ ಬಳಿಕ ಮಾತನಾಡಿದ ಸತೀಶ್, ಮೊದಲು ಮನೆಗೆ ಬಂದಾಗ ಬೆಡ್ ವಿಷಯವಾಗಿ ನನ್ನ ಮೇಲೆ ಮೂರು ಬಾರಿ ಗದರಿದ್ದನು. ನಾಳೆ ಮನೆಯಿಂದ ಹೊರ ಹೋಗ್ತಾರೆ ಅನ್ನೋ ರೀತಿ ಮಾತನಾಡಿದ್ದನು. ಒಂದು ಸಾರಿ ಅವಾಜ್ ಹಾಕಿದ ನಂತರ ಈಗ ಬಂದು ಬಕೆಟ್ ಹಿಡಿಯುತ್ತಿದ್ದಾನೆ ಎಂದು ಹೇಳುತ್ತಾರೆ.

45
ಅಭಿಷೇಕ್

ಅಭಿಷೇಕ್ ತಮ್ಮ ಕಂಫರ್ಟ್ ಜೋನ್‌ನಲ್ಲಿಯೇ ಇರುತ್ತಾರೆ. ಯಾವ ಕೆಲಸವನ್ನು ಸಹ ಮಾಡಲ್ಲ. ಕಣ್ಮುಂದೆ ಕೆಲಸಗಳಿದ್ರೂ ಅದನ್ನು ಮಾಡದೇ ಬೇರೆಯವರಿಗೆ ಹೇಳುತ್ತಾರೆ. ನಾವು ಸೇವಕರಾಗಿರುವ ಕಾರಣ ಕೆಲಸ ಮಾಡಬೇಕಾಗುತ್ತದೆ ಎಂದು ಸತೀಶ್ ಹೇಳುತ್ತಾರೆ.

ಇದನ್ನೂ ಓದಿ:Karna Serial ಮದ್ವೆ ವಿಡಿಯೋ ಶೇರ್​ ಮಾಡಿ ಬಿಗ್​ ಅಪ್​ಡೇಟ್​ ಕೊಟ್ಟ ನಮ್ರತಾ ಗೌಡ- ಫ್ಯಾನ್ಸ್ ಬೇಸರ

55
ಸತೀಶ್ ಮತ್ತು ಚಂದ್ರಪ್ರಭ ಜೋಡಿ

ಸತೀಶ್ ಮತ್ತು ಚಂದ್ರಪ್ರಭ ಜೋಡಿ ಬಿಗ್‌ಬಾಸ್ ನೀಡಿದ ಸೀಕ್ರೆಟ್ ಟಾಸ್ಕ್‌ ನಲ್ಲೂ ಗೆದ್ದಿದ್ದರು. ತಮ್ಮದೇ ತಂಡವನ್ನು ಸೋಲಿಸಿ ಇಬ್ಬರು ಫೈನಲ್ ಕಂಟೆಂಡರ್ ಆಗಿದ್ದರು. ಆದರೆ ಟಾಸ್ಕ್ ಅರ್ಥ ಮಾಡಿಕೊಳ್ಳುವಲ್ಲಿ ಸದಸ್ಯರು ಫೇಲ್ ಆಗಿದ್ದರು.

ಇದನ್ನೂ ಓದಿ: BBK 12: ಜಾನ್ವಿ ರೀತಿಯಲ್ಲಿರೋ ಆಂಟಿಗಳಂದ್ರೆ ನನಗಿಷ್ಟ ಎಂದ ಅಭಿಷೇಕ್ ಫ್ಲರ್ಟ್

Read more Photos on
click me!

Recommended Stories