ಅಮೃತಧಾರೆ ಧಾರಾವಾಹಿಯು ಮೂರನೇ ಅಧ್ಯಾಯಕ್ಕೆ ಕಾಲಿಟ್ಟಿದ್ದು, ಗೌತಮ್ ಮತ್ತು ಭೂಮಿಕಾ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ವಠಾರದಲ್ಲಿ ಗೌತಮ್ ಮೇಲೆ ಹುಡುಗಿಯರ ಕ್ರಷ್ ಹೆಚ್ಚಾಗಿದ್ದು, ಡುಮ್ಮ ಸರ್ ಸುಸ್ತಾಗಿದ್ದಾನೆ. ಏನಿದು ನೋಡಿ ರೋಚಕ ಟ್ವಿಸ್ಟ್!
ಅಮೃತಧಾರೆ (Amruthadhaare) ಸೀರಿಯಲ್ ಎರಡನೇ ಪಾರ್ಟ್ ಮುಗಿದು ಈಗ ಮೂರನೆಯ ಪಾರ್ಟ್ ಶುರುವಾಗಿದೆ. ಎರಡನೆಯ ಹಂತದಲ್ಲಿ ಇನ್ನೇನು ಗೌತಮ್ ಮತ್ತು ಭೂಮಿಕಾ ಒಂದಾಗುತ್ತಾರೆ ಎಂದುಕೊಳ್ಳುವಷ್ಟರಲ್ಲಿಯೇ ಎಲ್ಲರೂ ಅಯೋಮಯವಾಗಿದೆ. ಭೂಮಿಕಾ ಕೊಡಗಿನ ಮನೆಯನ್ನು ಬಿಟ್ಟು ಬೆಂಗಳೂರು ಸೇರಿದ್ದಾಳೆ. ಐದು ವರ್ಷ ಹೆಂಡತಿ-ಮಗನಿಗಾಗಿ ಹುಡುಕಿದ್ದ ಗೌತಮ್ಗೆ ಕೊನೆಗೂ ಸಿಕ್ಕಿದ್ದು ನಿರಾಸೆಯೇ.
26
ಬೆಂಗಳೂರು ಸೇರಿದ ಜೋಡಿ
ಅತ್ತ ಭೂಮಿಕಾ ಬೆಂಗಳೂರು ಸೇರಿದ್ರೆ, ಇತ್ತ ಗೌತಮ್ ಕೂಡ ಬೆಂಗಳೂರಿನ ವಠಾರದಲ್ಲಿ ವಾಸವಾಗಿದ್ದಾನೆ. ವಠಾರದ ಜನರ ಪ್ರೀತಿಗೆ ಪಾತ್ರನಾಗಿದ್ದಾನೆ ಗೌತಮ್. ಎಲ್ಲರಿಗೂ ಗೌತಮ್ ಕಂಡ್ರೆ ತುಂಬಾ ಇಷ್ಟ. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಾ, ಎಲ್ಲರ ಕೆಲಸವನ್ನೂ ಮಾಡಿಕೊಡುತ್ತಾ, ಯಾರಿಗೆ ಏನು ಬೇಕೋ ಎಲ್ಲವನ್ನೂ ತಂದುಕೊಡುತ್ತಾ, ಎಲ್ಲರ ಆರೋಗ್ಯ ವಿಚಾರಿಸುತ್ತಾ, ಸಮಾಧಾನ ಹೇಳುತ್ತಾ ವಠಾರದವರ ಪ್ರೀತಿ ಗಳಿಸಿದ್ದಾನೆ ಆತ.
36
ಹುಡುಗಿಯರಿಗೆ ಕ್ರಷ್
ಅದೇ ಇನ್ನೊಂದೆಡೆ, ಆತನ ಮೇಲೆ ಅಲ್ಲಿಯ ಹುಡುಗಿಯರಿಗೂ ಲವ್ ಶುರುವಾಗಿದೆ. ಗೌತಮ್ ಒಂಟಿಯಾಗಿ ಇರುವ ಕಾರಣದಿಂದ ಆತನ ಬಗ್ಗೆ ಗೊತ್ತಿಲ್ಲದ ಇಬ್ಬರು ಯುವತಿಯರು, ಗೌತಮ್ ಕನಸು ಕಾಣುತ್ತಿದ್ದಾರೆ. ಇಬ್ಬರೂ ಪ್ರೀತಿಯಿಂದ ಗೌತಮ್ನನ್ನು ಮಾತನಾಡಿಸಿದ್ದಾರೆ. ನೀವು ಇಲ್ಲದೇ ತುಂಬಾ ಬೇಸರವಾಗಿತ್ತು ಎಂದು ನುಲಿಯುತ್ತಾ ಮಾತನಾಡಿದ್ದಾರೆ. ಅವರ ಈ ನುಲಿಯುವ ಮಾತು ಕೇಳಿ ಗೌತಮ್ಗೆ ಸುಸ್ತಾಗಿ ಹೋಗಿದೆ. ಅಲ್ಲಿಂದ ತಪ್ಪಿಸಿಕೊಂಡರೆ ಸಾಕು ಎನ್ನುವಂತಾಗಿದೆ.
ಒಟ್ಟಿನಲ್ಲಿ, ಇಷ್ಟು ದಿನ ಸೀರಿಯಸ್ ಆಗಿ ನಡೆಯುತ್ತಿದ್ದ ಸೀರಿಯಲ್ನಲ್ಲಿ ಒಂದಿಷ್ಟು ಹಾಸ್ಯವನ್ನು ಲೇಪಿಸಲಾಗಿದೆ. ಆದರೆ ಅದೇ ಇನ್ನೊಂದೆಡೆ ಭೂಮಿಕಾ ಶಾಲೆಯಲ್ಲಿ ಹೆಡ್ಮಿಸ್ ಆಗಿ ಕೆಲಸಕ್ಕೆ ಸೇರಿದ್ದಾಳೆ. ಆಕೆಯ ಸ್ನೇಹಿತೆ ಮಗುವನ್ನು ದತ್ತು ಪಡೆದುಕೊಂಡಿದ್ದಳು. ಆ ಮಗುನೇ ಭೂಮಿಕಾಳ ಮಗು ಆಗಿರುವ ಸಾಧ್ಯತೆ ಇದೆ.
56
ಭೂಮಿಕಾಳಿಗೆ ಮಗಳು ಸಿಗುವ ಟೈಮ್
ಆ ಸ್ನೇಹಿತೆ ಕೂಡ ಭೂಮಿಕಾ ಸಮೀಪವೇ ಇರುವ ಕಾರಣದಿಂದ ಭೂಮಿಕಾಗೆ ಮಗಳು ಸಿಗುತ್ತಾಳೆ, ಆ ಮಗು ತನ್ನದೇ ಎಂದು ಕಣ್ಣಿಗೆ ಗೊತ್ತಾಗದಿದ್ದರೂ ಕರುಳು ಎನ್ನುವುದು ಇದೆ ಅಲ್ವಾ? ಆ ಮಗುವಿಗೆ ಅಪಾರ ಪ್ರೀತಿ ತೋರುತ್ತಾಳೆ. ಇನ್ನು ಸೀರಿಯಲ್ ಮುಗಿಯುವ ಹಂತದಲ್ಲಿ ಅದು ತನ್ನದೇ ಮಗು ಎಂದು ಗೊತ್ತಾಗುವುದು ಬಾಕಿ ಇದೆ ಅಷ್ಟೇ.
66
ಭೂಮಿಕಾ ಮೇಲೆ ಸಿಟ್ಟು
ಇದೇ ವೇಳೆ, ಮಗನ ಶಾಲೆಯನ್ನು ಅರ್ಧಕ್ಕೆ ನಿಲ್ಲಿಸಿ, ಏಕಾಏಕಿ ಮನೆಬಿಟ್ಟು ಬಂದಿರುವ ಭೂಮಿಕಾ ಮೇಲೆ ಸೀರಿಯಲ್ ಪ್ರೇಮಿಗಳ ಸಿಟ್ಟು ಇನ್ನೂ ಇಳಿದಿಲ್ಲ. ಇನ್ನು ಭೂಮಿಕಾಳನ್ನು ಹುಡುಕಲು ಗೌತಮ್ ಮತ್ತೆಷ್ಟು ವರ್ಷ ಅಲೆಯಬೇಕೋ ಎಂದು ಕೇಳುತ್ತಿದ್ದಾರೆ. ಒಟ್ಟಿನಲ್ಲಿ ಸೀರಿಯಲ್ ಇನ್ನಷ್ಟು ವರ್ಷ ಹೋಗಬೇಕೆಂದರೆ ಇದೆಲ್ಲವೂ ಅನಿವಾರ್ಯ ಅಲ್ಲವೆ?