ಬಿಗ್‌ಬಾಸ್ ಕನ್ನಡ ಸೀಸನ್ 12ರ ಅಂತಿಮ ಹಂತದಲ್ಲಿ ಧ್ರುವಂತ್ ಎಲಿಮಿನೇಟ್ ಆದ ನಂತರ ಅಶ್ವಿನಿ ಒಂಟಿಯಾಗಿದ್ದಾರೆ. ಸಂಕ್ರಾಂತಿ ಹಬ್ಬದ ವಿಶೇಷ ಪ್ರೋಮೋದಲ್ಲಿ, ನಾಲ್ವರು ಸ್ಪರ್ಧಿಗಳು ಮಾತ್ರ ಶುಭಾಶಯ ಕೋರಿದ್ದು, ಅಶ್ವಿನಿ ಮತ್ತು ರಕ್ಷಿತಾ ಕಾಣಿಸಿಕೊಳ್ಳದಿರುವುದು ವೀಕ್ಷಕರಲ್ಲಿ ಚರ್ಚೆಗೆ ಕಾರಣವಾಗಿದೆ.
ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳೆಲ್ಲರೂ ಅಲ್ಲಿ ಏನೇ ಮಾತಾಡಿದ್ರೂ ಅದರ ಹಿಂದೆ ಟ್ರೋಫಿ ಗೆಲ್ಲುವ ಉದ್ದೇಶವಿರುತ್ತೆ ಎಂಬ ಮಾತಿರುತ್ತದೆ. ಬಿಗ್‌ಬಾಸ್ ಆರಂಭವಾದ ನಾಲ್ಕೈದು ವಾರಗಳು ಕಳೆಯತ್ತಿದ್ದಂತೆ ಕೆಲವು ಗುಂಪುಗಳು ರಚನೆಯಾಗುತ್ತವೆ. ಹಾಗೆಯೇ ಕೆಲ ಸ್ಪರ್ಧಿಗಳಲ್ಲಿ ಗಾಢವಾದ ಸ್ನೇಹ ಬೆಳೆಯುತ್ತದೆ. ಕೆಲವೊಮ್ಮೆ ಆಟವನ್ನು ಮರೆತೂ ಸ್ನೇಹಕ್ಕೆ ಆದ್ಯತೆ ನೀಡುತ್ತಾರೆ.
26
ಒಂಟಿಯಾದ ಅಶ್ವಿನಿ
ಫಿನಾಲೆ ವೇಳೆಯಲ್ಲಿ ಉಳಿದುಕೊಳ್ಳುವ ಸ್ಪರ್ಧಿಗಳು ಎಲ್ಲವನ್ನು ಮರೆತು ಒಂದಾಗಿ, ಸ್ಪರ್ಧೆಯನ್ನು ಆಟಕ್ಕೆ ಮಾತ್ರ ಸೀಮಿತ ಮಾಡಿಕೊಳ್ಳುತ್ತಾರೆ. ಶೋ ಮುಕ್ತಾಯದ ಬಳಿಕವೂ ಈ ಸ್ನೇಹವನ್ನು ಮುಂದುವರಿಸುತ್ತಾರೆ. ಈ ಬಾರಿಯ ಸೀಸನ್‌ನಲ್ಲಿಯೂ ಅಂತಿಮ ಹಂತದಲ್ಲಿ ಎರಡು ಗುಂಪುಗಳ ರಚನೆಯಾಗಿತ್ತು. ಧ್ರುವಂತ್-ಅಶ್ವಿನಿ ಗೌಡ ಒಂದಾಗಿದ್ರೆ, ಇನ್ನುಳಿದ ಎಲ್ಲಾ ಸ್ಪರ್ಧಿಗಳು ಮತ್ತೊಂದು ಗುಂಪು ಆಗಿದ್ದರು. ಇದೀಗ ಧ್ರುವಂತ್ ಹೊರಗೆ ಹೋಗಿದ್ದರಿಂದ ಅಶ್ವಿನಿ ಒಂಟಿಯಾಗಿದ್ದಾರೆ.
36
ವೀಕ್ಷಕರಲ್ಲಿ ಕಸಿವಿಸಿಯನ್ನುಂಟು ಮಾಡಿದ ಪ್ರೋಮೋ
ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ತೋರಿಸಲಾಗಿದೆ. ಹಾಗೆಯೇ ಬಿಗ್‌ಬಾಸ್ ಮನೆಗೆ ಹೊಸ ಧಾರಾವಾಹಿ 'ರಾಣಿ' ತಂಡದ ಅಮ್ಮ-ಮಗಳು ಬಂದಿದ್ದಾರೆ. ಈ ಪ್ರೋಮೋದಲ್ಲಿನ ಒಂದು ದೃಶ್ಯ ವೀಕ್ಷಕರಲ್ಲಿ ಕಸಿವಿಸಿಯನ್ನುಂಟು ಮಾಡಿದೆ. ಕೊನೆ ಕ್ಷಣದಲ್ಲಿಯೂ ಸ್ಪರ್ಧಿಗಳು ತಮ್ಮ ದ್ವೇಷ ಮುಂದುವರಿಸಿದ್ರಾ ಅಥವಾ ವಿಡಿಯೋ ಎಡಿಟರ್‌ನಿಂದ ತಪ್ಪಾಯ್ತಾ ಎಂದು ಅನುಮಾನ ಮೂಡಿದೆ.
ಸದ್ಯ ಬಿಗ್‌ಬಾಸ್ ಮನೆಯಲ್ಲಿ ಆರು ಸ್ಪರ್ಧಿಗಳಿದ್ದಾರೆ. ಆದರೆ ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯವನ್ನು ನಾಲ್ಕು ಜನರು ಜೊತೆಯಾಗಿ ಹೇಳಿರೋದನ್ನು ತೋರಿಸಲಾಗಿದೆ. ಈ ನಾಲ್ಕು ಜನರ ಗುಂಪಿನಲ್ಲಿ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ಕಾಣಿಸುತ್ತಿಲ್ಲ. ಸದ್ಯ ಈ ವಿಷಯ ಇವರಿಬ್ಬರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗುತ್ತಿದೆ.
ರಘು, ಗಿಲ್ಲಿ ನಟ, ಧನುಷ್ ಮತ್ತು ಕಾವ್ಯಾ ಶೈವ ಜೊತೆಯಾಗಿ ಕ್ಯಾಮೆರಾ ಮುಂದೆ ಬಂದು ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಇವರ ನಾಲ್ವರ ಜೊತೆಯಲ್ಲಿ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ಕಾಣಿಸಿಕೊಂಡಿದ್ರೆ ಚೆನ್ನಾಗಿರುತ್ತಿತ್ತು ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಫಿನಾಲೆ ಸಂದರ್ಭದಲ್ಲಿ ಸ್ಪರ್ಧಿಗಳ ಒಗ್ಗಟ್ಟನ್ನು ತೋರಿಸಬೇಕಿತ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ.
ಧ್ರುವಂತ್ ಮನೆಯಿಂದ ಹೊರಗೆ ಹೋದ ನಂತರ ಎರಡನೇ ಬಾರಿಗೆ ವೋಟಿಂಗ್ ಪ್ರಾರಂಭಗೊಂಡಿದೆ. ಇಂತಹ ಸಂದರ್ಭದಲ್ಲಿ ವೀಕ್ಷಕರಿಗೆ ತೋರಿಸಲಾಗುವ ಪ್ರತಿಯೊಂದು ಅಂಶವೂ ವೋಟ್ ಮೇಲೆ ನೇರ ಪ್ರಭಾವ ಬೀರುತ್ತದೆ. ಈ ನಾಲ್ವರು ಉದ್ದೇಶಪೂರ್ವಕವಾಗಿ ಇಬ್ಬರನ್ನು ಬಿಟ್ಟು ಶುಭಾಶಯ ತಿಳಿಸಿದ್ರಾ ಅಥವಾ ಅವರಿಬ್ಬರೇ ಈ ಗುಂಪಿನಿಂದ ಹೊರಗೆ ಉಳಿದ್ರಾ ಅಥವಾ ಪ್ರೋಮೋ ವಿಡಿಯೋ ಎಟಿಟರ್ ಕೊನೆ ಕ್ಷಣದಲ್ಲಿ ಎಚ್ಚರ ತಪ್ಪಿದ್ರಾ ಎಂಬ ಪ್ರಶ್ನೆಗಳು ಮುನ್ನಲೆಗೆ ಬಂದಿದ್ದು, ಇವುಗಳಿಗೆ ಉತ್ತರ ಸಿಗೋದು ಸಹ ಅನುಮಾನ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.