ನಾಲ್ಕು ವಾರದಿಂದ ಕಾಣೆಯಾಗಿದ್ದ ಮೂವರಿಗೆ ಸ್ವಾಗತಿಸಿ ಅಶ್ವಿನಿ ಗೌಡರಿಂದ ಹುಷಾರ್ ಆಗಿರಿ ಎಂದ ಕಿಚ್ಚ ಸುದೀಪ್

Published : Nov 02, 2025, 09:45 PM IST

ಕಳೆದ ನಾಲ್ಕು ವಾರಗಳಿಂದ ತೆರೆಮರೆಯಲ್ಲಿದ್ದ ಮೂವರು ಸ್ಪರ್ಧಿಗಳನ್ನು ಕಿಚ್ಚ ಸುದೀಪ್ ಸ್ವಾಗತಿಸಿದ್ದಾರೆ. ಈ ವಾರ ಧನುಷ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದು, ಮನೆಯ ಲವ್ ಬರ್ಡ್ಸ್ ಸೂರಜ್-ರಾಶಿಕಾ ಪ್ರೀತಿಯ ವಿಚಾರವನ್ನು ಸುದೀಪ್ ಬಯಲು ಮಾಡಿದ್ದಾರೆ.

PREV
15
ಮೂವರಿಗೆ ಸ್ವಾಗತ!

ಭಾನುವಾರದ ಸಂಚಿಕೆಯಲ್ಲಿ ಕಳೆದ ನಾಲ್ಕು ವಾರಗಳಿಂದ ಕಾಣೆಯಾಗಿದ್ದ ಮೂವರು ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಸ್ವಾಗತಿಸಿದ್ದಾರೆ. ಹಿಂದಿನ ವಾರದಿಂದ ಮೂವರು ಆಟ ಆರಂಭಿಸಿದ್ದು, ಎಲ್ಲರ ಕಣ್ಣಿಗೂ ಕಾಣಿಸುತ್ತಿದ್ದಾರೆ. ನಮ್ಮ ಸ್ಪರ್ಧಿಗಳು ಎಲ್ಲಿ ಅಂತ ವೀಕ್ಷಕರು ಹುಡುಕುತ್ತಿದ್ದರು. ಇದೀಗ ನೀವು ಕಾಣಿಸುತ್ತಿದ್ದೀರಿ ಎಂದು ಸುದೀಪ್ ಹೇಳಿದರು. ಈ ಮೂಲಕ ಮೂವರಿಗೂ ಎಚ್ಚರಿಕೆಯಿಂದ ಆಟ ಮುಂದುವರಿಸುವಂತೆ ಸಲಹೆ ನೀಡಿದರು.

25
ನೀವು ಹುಷಾರಾಗಿರಿ!

ಅಶ್ವಿನಿ ಗೌಡ ಅವರಿಗೆ ಮೊದಲ ವಾರದಿಂದ ನಿಲ್ಲಿ ಅಂದ್ರೆ ನಿಲ್ಲಿಸುತ್ತಿಲ್ಲ. ಅಶ್ವಿನಿ ಗೌಡ ಟೀಚರ್‌ ಅವರಿಗೆ ಹಗ್ಗ ಹಾಕಿ ಹಿಡಿದರೂ ಅವರು ನಿಲ್ಲುತ್ತಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಶ್ವಿನಿ ಗೌಡ ಮೂವರ ಸ್ಪರ್ಧಿಗಳನ್ನು ಸ್ವಾಗತಿಸಿದರು. ಇದಕ್ಕೆ ತಕ್ಷಣವೇ ಉತ್ತರಿಸಿದ ಸುದೀಪ್, ನೋಡಿ ಈ ವಾರ ನಿಮಗೆ ಅಶ್ವಿನಿ ಗೌಡ ನಿಮಗೆ ಆಲ್ ದಿ ಬೆಸ್ಟ್ ಅಂತ ಹೇಳಿದ್ದಾರೆ. ಹಾಗಾಗಿ ಮುಂದಿನ ವಾರ ನೀವು ಹುಷಾರಾಗಿರಿ ಎಂದು ಎಚ್ಚರಿಕೆ ನೀಡಿದರು.

35
ಯಾರು ಆ ಮೂವರು?

ಧನುಷ್, ಅಭಿಷೇಕ್ ಮತ್ತು ಸ್ಪಂದನಾ ಸೋಮಣ್ಣ ಮೂವರು ತಡವಾಗಿ ಆಟ ಆರಂಭಿಸಿದ್ದಾರೆ. ಸ್ಪಂದನಾ ಅವರು ನಾಮಿನೇಟ್ ಆಗಿ ಮೇನ್ ಡೋರ್‌ವರೆಗೆ ಹೋಗಿ ಬಂದ ನಂತರ ಆಟ ಆಡುತ್ತಿದ್ದಾರೆ. ಧನುಷ್ ಕ್ಯಾಪ್ಟನ್ ಆಗಿ ಈ ವಾರ ಕಾಣಿಸಿದರು. ಅಭಿಷೇಕ್ ಸಹ ಟಾಸ್ಕ್‌ಗಳಲ್ಲಿ ತಮ್ಮ ಸಾಮರ್ಥ್ಯ ತೋರಿಸಿದರು. ಸೋಶಿಯಲ್ ಮೀಡಿಯಾದಲ್ಲಿಯೂ ಧನುಷ್ ಮತ್ತು ಅಭಿಷೇಕ್ ಅವರನ್ನು ತೋರಿಸಿ ಎಂದು ಟ್ರೋಲ್ ಮಾಡಲಾಗುತ್ತಿತ್ತು.

45
ಸೂರಜ್-ರಾಶಿಕಾ ಲವ್

ಇದೇ ವೇಳೆ ಸುದೀಪ್ ಅವರು ಮನೆಯಲ್ಲಿ ಲವ್ ಬರ್ಡ್ಸ್ ಆಗಿ ಕಾಣಿಸಿಕೊಂಡಿರುವ ಸೂರಜ್ ಮತ್ತು ರಾಶಿಕಾ ಬಗ್ಗೆಯೂ ಸುದೀಪ್ ಮಾತನಾಡಿದರು. ಆರಂಭದಲ್ಲಿ ನಾನು ಐ ಲವ್ ಯು ಅಂತ ಹೇಳಿಲ್ಲ ಎಂದು ಸೂರಜ್ ಮತ್ತು ರಾಶಿಕಾ ವಾದಿಸಿದರು. ವಿಡಿಯೋ ಕ್ಲಿಪ್ ತೋರಿಸೋದಾಗಿ ಹೇಳುತ್ತಿದ್ದಂತೆ ಇಬ್ಬರು ಲವ್ ಪ್ರಪೋಸ್ ಮಾತನ್ನು ಒಪ್ಪಿಕೊಂಡರು.

ಇದನ್ನೂ ಓದಿ: BBK 12: ಸುದೀಪ್ ಮುಂದೆಯೇ ಅಶ್ವಿನಿ ಗೌಡ ಮುಖವಾಡ ಕಳಚಿದ ಕಾವ್ಯಾ; ಪ್ರೇಕ್ಷಕರಿಂದ ಸಿಕ್ತು ಚಪ್ಪಾಳೆ

55
ಈ ವಾರದ ಕ್ಯಾಪ್ಟನ್

ಬಿಗ್‌ಬಾಸ್‌ ಮನೆಗೆ ಮ್ಯೂಟಂಟ್ ರಘು ಮೊದಲನೇ ಕ್ಯಾಪ್ಟನ್ ಆಗಿದ್ದರು. ಎರಡನೇ ಕ್ಯಾಪ್ಟನ್ ಆಗಿ ಧನುಷ್ ಆಯ್ಕೆಯಾಗಿದ್ದಾರೆ. ಗಿಲ್ಲಿ ನಟ ಮತ್ತು ಮಲ್ಲಮ್ಮ ಹೊರತುಪಡಿಸಿ ಇನ್ನುಳಿದ ಎಲ್ಲಾ ಸದಸ್ಯರು ಧನುಷ್ ಅವರಿಗೆ ತಮ್ಮ ವೋಟ್ ಹಾಕಿದ್ದರು. ಗಿಲ್ಲಿ ನಟ ಬಳಿಕ ರಘು ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು, ಸುದೀಪ್ ಅವರಿಂದ ವಿಶೇಷ ಉಡುಗೊರೆಯೂ ಸಿಕ್ಕಿದೆ.

ಇದನ್ನೂ ಓದಿ: ನನ್ನ ಹಿಂದೆ ಬೀಳಬೇಡಿ, I am Committed ಎಂದ ಗಿಲ್ಲಿ ನಟ; ನನ್ನ ಗುಂಡಿ ನಾನ್ಯಾಕೆ ತೋಡಿಕೊಳ್ಳಲಿ

Read more Photos on
click me!

Recommended Stories