ಬಿಗ್ ಬಾಸ್ ಮನೆಯಲ್ಲಿ ತಮ್ಮ ಹಾಸ್ಯದಿಂದ ಹವಾ ಸೃಷ್ಟಿಸಿದ್ದ ಗಿಲ್ಲಿ ನಟ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಪಂದನಾ, ಅಶ್ವಿನಿ, ಹಾಗೂ ಜೋಡಿ ಕಾವ್ಯಾ ಶೈವ ಸೇರಿದಂತೆ ಹಲವು ಸ್ಪರ್ಧಿಗಳು ಅವರ ವಿರುದ್ಧ ನಂಬಿಕೆ ದ್ರೋಹ ಮತ್ತು ಸ್ವಾರ್ಥದಂತಹ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಬಿಗ್ಬಾಸ್ (Bigg Boss)ನಲ್ಲಿ ಸದ್ಯ ಗಿಲ್ಲಿ ನಟನ ಹವಾ ಜೋರಾಗಿಯೇ ನಡೆಯುತ್ತಿದೆ. ಇವರೇ ಈ ಬಾರಿಯ ವಿನ್ನರ್ ಎನ್ನುವಷ್ಟರ ಮಟ್ಟಿಗೆ ಇವರು ಹವಾ ಸೃಷ್ಟಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಗಿಲ್ಲಿ ನಟನ ಬಗ್ಗೆ ದನಿ ಜೋರಾಗಿಯೇ ನಡೆಯುತ್ತಿದೆ.
27
ಹಾಸ್ಯದಿಂದ ತಿರುಗೇಟು
ತಮ್ಮ ಹಾಸ್ಯದಿಂದಲೇ ಎಲ್ಲರ ಮನಸ್ಸನ್ನು ಗೆದ್ದವರು ಗಿಲ್ಲಿ ನಟ. ಕಾವ್ಯಾ ಜೊತೆ ರೊಮಾನ್ಸ್, ತಮ್ಮನ್ನು ಟೀಕಿಸಲು ಬರುವ ಅಶ್ವಿನಿ ಗೌಡ ಅವರಿಗೂ ಹಾಸ್ಯದಿಂದಲೇ ತಿರುಗೇಟು ನೀಡುವಲ್ಲಿ ಗಿಲ್ಲಿ ನಿಸ್ಸೀಮರು.
37
ಟಾರ್ಗೆಟ್ ಆದ ಗಿಲ್ಲಿ
ಇಂತಿಪ್ಪ ಗಿಲ್ಲಿಯನ್ನು ಈಗ ಎಲ್ಲರೂ ಟಾರ್ಗೆಟ್ ಮಾಡಿದ್ದಾರೆ. ಇವರ ವಿರುದ್ಧ ಆರೋಪಗಳ ಸುರಿಮಳೆಯೇ ಆಗುತ್ತಿದೆ. ಇವರು ನನ್ನ ಟಾರ್ಗೆಟ್ ಎಂದು ಯಾರು ಹೇಳುತ್ತೀರಿ ಎನ್ನುವ ಪ್ರಶ್ನೆಯನ್ನು ಸುದೀಪ್ ಎದುರಿಗಿಟ್ಟಿದ್ದಾರೆ.
ಆಗ ಗಿಲ್ಲಿ ವಿರುದ್ಧ ಕೆಲವರು ಆರೋಪ ಮಾಡಿದ್ದಾರೆ. ಗಿಲ್ಲಿ ನಂಬಿಕೆ ಇಟ್ಟು ಮೋಸ ಮಾಡ್ತಾರೆ. ಇದರಲ್ಲಿ ಅವರದ್ದು ಎತ್ತಿದ ಕೈ ಎಂದು ಎಂದು ಸ್ಪಂದನಾ ಸೋಮಣ್ಣ ಹೇಳಿದರು.
57
ಧನುಷ್ ಏನಂದ್ರು?
ಅವನು ಕಾಮಿಡಿ ಮಾಡ್ತಾನೆ. ವಾಪಸ್ ನಾವು ಮಾಡಿದ್ರೆ ಸೀರಿಯಸ್ ಆಗಿ ತೆಗೆದುಕೊಳ್ತಾನೆ ಎಂದು ಧನುಷ್ ಅಭಿಪ್ರಾಯ ಪಟ್ಟರು.
67
ನಾನು ಪರ್ಸನಲ್ ಆಗಿ ಟಾರ್ಗೆಟ್
ಈ ಮನೆಗೆ ಕಾಲಿಟ್ಟಾಗಿನಿಂದಲೂ ಗಿಲ್ಲಿ ನನ್ನನ್ನು ಪರ್ಸನಲ್ ಆಗಿ ಟಾರ್ಗೆಟ್ ಮಾಡ್ತಾ ಇದ್ದಾರೆ ಎನ್ನಿಸ್ತಿದೆ, ಗೇಮ್ ಅಂತ ಬಂದಾಗಲು ಕೂಡ ತುಂಬಾ ಸ್ವಾರ್ಥಿ ಎಂದು ಅಶ್ವಿನಿ ಗೌಡ ಕೋಪದಿಂದ ನುಡಿದರು.
77
ವಿಭಿನ್ನ ಪರ್ಸನ್ಯಾಲಿಟಿ
ಜಂಟಿಯಾಗಿ ಬಂದಾಗ ಎರಡು ವಿಭಿನ್ನ ಪರ್ಸನ್ಯಾಲಿಟಿ. ಅವರು ಸೂಪರ್ ಆ್ಯಕ್ಟೀವ್ ಇದ್ದಾರೆ, ಆದರೆ ನನ್ನ ಒಂದು ಸ್ಟ್ಯಾಂಡ್ ಕಾಣಿಸ್ತಾ ಇರಲಿಲ್ಲ, ಹಾಗಾಗಿ ನಾನು ಕೂಡ ಗಿಲ್ಲಿ ವಿರುದ್ಧ ಎಂದಿದ್ದಾರೆ ಕಾವ್ಯಾ ಶೈವ (Bigg Boss Kavya Shaiva)