BBK 12: ಧ್ರುವಂತ್ ನೆಮ್ಮದಿ ನನ್ನ ಕೈಯಲ್ಲುಂಟು: ಸುದೀಪ್ ಮುಂದೆ ಕಣ್ಣೀರಿನ ಕಥೆ ಹೇಳಿಕೊಂಡ ರಕ್ಷಿತಾ ಶೆಟ್ಟಿ

Published : Dec 20, 2025, 07:56 AM IST

ಸೀಕ್ರೆಟ್‌ ರೂಮ್‌ನಲ್ಲಿರುವ ರಕ್ಷಿತಾ ಶೆಟ್ಟಿ, ಕಿಚ್ಚ ಸುದೀಪ್ ಮುಂದೆ ತಮ್ಮ ಕಣ್ಣೀರಿನ ಕಥೆ ಹೇಳಿಕೊಂಡಿದ್ದಾರೆ. ಧ್ರುವಂತ್ ಜೊತೆ ಇರಲು ಸಾಧ್ಯವಾಗುತ್ತಿಲ್ಲ, ನನ್ನ ನೆಮ್ಮದಿ ಹಾಳಾಗುತ್ತಿದೆ ಎಂದು ಅವರು ಮನವಿ ಮಾಡಿದ್ದಾರೆ. ಇವರಿಬ್ಬರ ತದ್ವಿರುದ್ಧ ಮನಸ್ಥಿತಿಯೇ ಸೀಕ್ರೆಟ್ ರೂಮ್‌ನ ಮನರಂಜನೆಯಾಗಿದೆ.

PREV
15
ರಕ್ಷಿತಾ ಶೆಟ್ಟಿ ಕಣ್ಣೀರಿನ ಕಥೆ

ಶನಿವಾರದ ಕಿಚ್ಚನ ಪಂಚಾಯ್ತಿಯಲ್ಲಿ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಸೀಕ್ರೆಟ್‌ ರೂಮ್‌ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಕಾರ್ಯಕ್ರಮದ ನಿರೂಪಕ ಸುದೀಪ್ ಅವರ ಮುಂದೆ ರಕ್ಷಿತಾ ಶೆಟ್ಟಿ ತಮ್ಮ ಕಣ್ಣೀರಿನ ಕಥೆ ಹೇಳಿಕೊಂಡಿದ್ದಾರೆ.

25
ಶನಿವಾರದ ಸಂಚಿಕೆ

ಶನಿವಾರದ ಸಂಚಿಕೆ ವೇಳೆಗೆ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಮನೆಗೆ ಕಂಬ್ಯಾಕ್ ಮಾಡ್ತಾರೆ ಅಂತ ಎಲ್ಲರೂ ಅಂದ್ಕೊಂಡಿದ್ದರು. ಆದ್ರೆ ಈ ಬಾರಿ ವೀಕೆಂಡ್ ಸಂಚಿಕೆಯ ಶೂಟಿಂಗ್ ಒಂದು ದಿನ ಮುಂಚೆಯೇ ನಡೆದಿದ್ದರಿಂದ ಸೀಕ್ರೆಟ್ ರೂಮ್‌ನಿಂದಲೇ ಸುದೀಪ್ ಅವರೊಂದಿಗೆ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಮಾತನಾಡಿದ್ದಾರೆ.

35
ಅಳು ಬರುತ್ತೆ

ನೀವು ಬಂದಾಗ ಧ್ರುವಂತ್ ನಗುಮೊಗದಿಂದ ಇರುತ್ತಾರೆ. ನೀವು ಹೋದ್ಮೇಲೆ ತುಂಬಾ ಗಂಭೀರವಾಗುತ್ತಾರೆ. ಧ್ರುವಂತ್ ಮುಖ ನೋಡಿದ್ರೆ ನನಗೆ ಅಳು ಬರುತ್ತೆ ಸರ್ ಎಂದು ರಕ್ಷಿತಾ ಶೆಟ್ಟಿ ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್, ಇಬ್ಬರು ಒಪ್ಪಿಕೊಂಡ್ರೆ ಮಾತ್ರ ಮನೆಯೊಳಗೆ ಹೋಗಬಹುದು ಎಂದು ಹೇಳುತ್ತಾರೆ. ಇಷ್ಟು ಹೇಳುತ್ತಿದ್ದಂತೆ ಧ್ರುವಂತ್ ಮನವೊಲಿಸಲು ರಕ್ಷಿತಾ ಮುಂದಾಗುತ್ತಾರೆ.

45
ನೆಮ್ಮದಿ ಇಲ್ಲ

ನನಗೆ ಸೀಕ್ರೆಟ್‌ ರೂಮ್‌ನಲ್ಲಿ ಅಷ್ಟು ನೆಮ್ಮದಿ ಇಲ್ಲ. ನಿಮಗೆ ಇಲ್ಲಿ ನೆಮ್ಮದಿಯಾಗಿ ಮಲಗೋಕೆ ನಾನು ಬಿಡಲ್ಲ. ನಿಮ್ಮ ನೆಮ್ಮದಿ ನನ್ನ ಕೈಯಲ್ಲಿದೆ ಎಂದು ಧ್ರುವಂತ್‌ಗೆ ಹೇಳುತ್ತಾರೆ. ರಕ್ಷಿತಾ ಶೆಟ್ಟಿ ಮಾತುಗಳನ್ನು ಕೇಳಿ ಸುದೀಪ್ ಜೋರಾಗಿ ನಕ್ಕಿದ್ದಾರೆ. ಧ್ರುವಂತ್-ರಕ್ಷಿತಾ ಇಬ್ಬರು ತದ್ವಿರುದ್ಧ ಯೋಚನೆ ಮತ್ತು ಮನಸ್ಥಿತಿಯುಳ್ಳ ಸ್ಪರ್ಧಿಗಳಾಗಿದ್ದರಿಂದಲೇ ಸೀಕ್ರೆಟ್ ರೂಮ್‌ಗೆ ಹಾಕಲಾಗಿದೆ.

ಇದನ್ನೂ ಓದಿ: ಗಿಲ್ಲಿ ಅಂಟೆ ಗಿಲ್ಲಿ: ತೆಲುಗು ಅಭಿಮಾನಿಗಳಿಂದ ಸೂಪರ್ ಸಾಂಗ್ ಬಿಡುಗಡೆ, ಹುಚ್ಚೆದ್ದು ಕುಣಿಯುತ್ತಿರೋ ಫ್ಯಾನ್ಸ್

55
ಬಿಗ್‌ಬಾಸ್ ಮನೆಯೊಳಗೆ ಕಳುಹಿಸಿ

ನನ್ನ ನೆಮ್ಮದಿ ನಿನ್ನ ಕೈಯಲ್ಲಿ ಹೇಗಿರುತ್ತೆ ಎಂದು ಧ್ರುವಂತ್ ಪ್ರಶ್ನೆ ಮಾಡುತ್ತಾರೆ. ನೀವಿಬ್ಬರು ಈ ರೀತಿಯಾಗಿದ್ರೆ ವೈಯಕ್ತಿಯವಾಗಿ ನನಗೆ ಫುಲ್ ಮನರಂಜನೆ ಸಿಗುತ್ತದೆ ಎಂದು ಸುದೀಪ್ ಹೇಳುತ್ತಾರೆ. ಸುದೀಪ್ ಅವರ ಮಾತುಗಳನ್ನು ಕೇಳಿದ ರಕ್ಷಿತಾ ಶೆಟ್ಟಿ, ಸೀಕ್ರೆಟ್ ರೂಮ್‌ನಲ್ಲಿ ಇವರೊಂದಿಗೆ ಇದ್ದು ನನಗೆ ತಲೆನೋವು ಬರುತ್ತಿದೆ. ಪ್ಲೀಸ್ ನನ್ನನ್ನು ಬಿಗ್‌ಬಾಸ್ ಮನೆಯೊಳಗೆ ಕಳುಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: BBK 12: ಬಿಗ್‌ಬಾಸ್ ಮನೆಗೆ ಬಂದ ಸ್ಟಾರ್ ಹೀರೋ: ಗಿಲ್ಲಿಗೆ ಮೋಸ ಆಗ್ತಿದೆ ಎಂದ ಅಭಿಮಾನಿಗಳು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories