Aase Serial: ರೋಹಿಣಿ ಪಾತ್ರಕ್ಕೆ ಆಯ್ಕೆಯಾದ ಒಂದೇ ದಿನಕ್ಕೆ ಧಾರಾವಾಹಿಯಿಂದ ಹೊರ ಬಂದ ನಟಿ ರೋಶಿನಿ

Published : Dec 19, 2025, 08:58 PM IST

Aase Serial: ಆಸೆ ಸೀರಿಯಲ್ ನಿಂದ ರೋಹಿಣಿ ಪಾತ್ರಧಾರಿ ಅಮೃತಾ ರಾಮಮೂರ್ತಿ ಹೊರಬಂದಿದ್ದರು, ಆ ಪಾತ್ರಕ್ಕೆ ಇನ್ನೊಬ್ಬ ನಟಿಯ ಆಯ್ಕೆಯೂ ಆಗಿತ್ತು. ಸೀರಿಯಲ್ ಶೂಟಿಂಗ್ ಕೂಡ ಶುರು ಮಾಡಿದ್ದರು. ಆದರೆ ಇದೀಗ ಒಂದೇ ದಿನಕ್ಕೆ ಆ ನಟಿಯೂ ಸೀರಿಯಲ್ ನಿಂದ ಹೊರ ಬಂದಿದ್ದಾರೆ. 

PREV
17
ಆಸೆ ಸೀರಿಯಲ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನ ಮನ ಗೆದ್ದಿರುವ ಮಿಡಲ್ ಕ್ಲಾಸ್ ಫ್ಯಾಮಿಲಿ ಕತೆಯನ್ನು ಹೊಂದಿರುವ ಸೀರಿಯಲ್ ಆಸೆ. ಈ ಸೀರಿಯಲ್ ನಿಂದ ರೋಹಿಣಿ ಪಾತ್ರಧಾರಿ ಅಮೃತ ರಾಮಮೂರ್ತಿ ಹೊರಗೆ ಬಂದಿರುವುದಾಗಿ ಇತ್ತೀಚೆಗೆ ತಿಳಿಸಿದ್ದರು. ಹೊಸ ನಟಿಯ ಎಂಟ್ರಿ ಕೂಡ ಆಗಿತ್ತು. ಇದೀಗ ಅವರು ಕೂಡ ಸೀರಿಯಲ್ ನಿಂದ ಹೊರ ಬಂದಿದ್ದಾರೆ.

27
ಜನಪ್ರಿಯ ಧಾರಾವಾಹಿ

ಸಿಂಪಲ್ ಮಿಡಲ್ ಕ್ಲಾಸ್ ಕುಟುಂಬದಲ್ಲಿ ನಡೆಯುವ ಕಥೆಯನ್ನು ಅದ್ಭುತವಾಗಿ ಕಟ್ಟಿಕೊಟ್ಟಿರುವ ಆಸೆ ಧಾರಾವಾಹಿಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಈ ಧಾರಾವಾಹಿಯ ಪ್ರತಿಯೊಂದು ಪಾತ್ರಗಳನ್ನು ಸಹ ಜನರು ಇಷ್ಟಪಟ್ಟಿದ್ದರು. ಅದರಲ್ಲೂ ರೋಹಿಣಿ ಪಾತ್ರವನ್ನು ಜನ ನೆಗೆಟಿವ್ ಆದ್ರು ಅವರ ನಟನೆ ಇಷ್ಟಪಟ್ಟಿದ್ದರು.

37
ಅಮೃತಾ ರಾಮಮೂರ್ತಿ

ಈ ಮೊದಲು ರೋಹಿಣಿ ಪಾತ್ರವನ್ನು ನಟಿ ಅಮೃತಾ ರಾಮಮೂರ್ತಿ ಮಾಡುತ್ತಿದ್ದರು. ಈ ಪಾತ್ರ ತುಂಬಾನೆ ಇಂಟ್ರೆಸ್ಟಿಂಗ್ ಆಗಿತ್ತು. ಮನೋಜ್‌ ಅವರನ್ನು ಮದುವೆಯಾಗಿರೋ ರೋಹಿಣಿಗೆ ಮೊದಲೇ ಮದುವೆಯಾಗಿ, ಮಗ ಕೂಡ ಇರುತ್ತಾನೆ. ಇದೆಲ್ಲಾ ಸತ್ಯವನ್ನು ಮುಚ್ಚಿಟ್ಟು, ತಾನು ಶ್ರೀಮಂತೆ, ತಂದೆ ವಿದೇಶದಲ್ಲಿ ಇದ್ದಾರೆ ಎಂದು ಸುಳ್ಳು ಹೇಳಿ ಅತ್ತೆಯ ಮುದ್ದಿನ ಸೊಸೆಯಾಗಿ ಅದ್ಭುತವಾಗಿ ನಟಿಸುತ್ತಿದ್ದರು ಅಮೃತಾ.

47
ಧಾರಾವಾಹಿಯಿಂದ ಹೊರನಡೆದ ಅಮೃತಾ

ಇದೀಗ ಈ ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರೆ. ಈ ವಿಷಯವನ್ನು ಅವರು ಸೋಶಿಯಲ್‌ ಮೀಡಿಯಾ ಮೂಲಕ ಅಧಿಕೃತಪಡಿಸಿದ್ದಾರೆ. ವಿಡಿಯೋ ಮಾಡಿದ್ದು, “ಆಸೆ ಧಾರಾವಾಹಿಗೆ ನೀವು ತುಂಬ ಪ್ರೀತಿ ಕೊಟ್ಟಿದ್ದೀರಿ. ನಾನು ಕಾರಣಾಂತರಗಳಿಂದ ಆಸೆ ಸೀರಿಯಲ್‌ ಬಿಟ್ಟಿದ್ದೀನಿ. ಒಂದು ಬ್ರೇಕ್‌ ತಗೊಂಡು ನಾನು ತೆರೆ ಮೇಲೆ ಕಾಣಿಸಿಕೊಳ್ತೀನಿ” ಎಂದು ಹೇಳಿದ್ದಾರೆ.

57
ಬಳಿಕ ಆಯ್ಕೆಯಾಗಿದ್ದ ರೋಶಿನಿ ತೇಲ್ಕರ್

ಅಮೃತಾ ಹೊರಬಂದ ಬಳಿಕ ಈ ಪಾತ್ರಕ್ಕೆ ಕಿರುತೆರೆ ನಟಿ ರೋಶಿನಿ ತೇಲ್ಕರ್ ಆಯ್ಕೆಯಾಗಿದ್ದರು. ಅವರು ಶೂಟಿಂಗ್ ಕೂಡ ಮಾಡಿದ್ದರು. ಆದರೆ ಕಾರಣಾoತರಗಳಿಂದ ಅವರು ಕೂಡ ಈ ಪಾತ್ರದಿಂದ ಹೊರಬಂದಿದ್ದಾರೆ!

67
ಏನ್ ಹೇಳಿದ್ರು ರೋಶಿನಿ

ಧಾರವಾಹಿಯಿಂದ ಹೊರಬಂದಿರುವ ವಿಷಯವನ್ನು ರೋಶಿನಿ ತಮ್ಮ ಇನ್’ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ದಯವಿಟ್ಟು ಕ್ಷಮಿಸಿ, ನಾನು ಆಸೆ ಧಾರಾವಾಹಿಯಿಂದ ಹೊರ ಬಂದೆ. ನಾನು ಅವರ ನಿರೀಕ್ಷೆಗೆ ಸರಿಹೊಂದದೇ ಇರಬಹುದು ಎಂದು ಬರೆದುಕೊಂಡಿದ್ದಾರೆ.

77
ರೋಶಿನಿ ನಟಿಸಿದ್ದ ಸೀರಿಯಲ್ ಗಳು

ರೋಶಿನಿಈ ಹಿಂದೆ ಕಿನ್ನರಿ, ನಮ್ಮನೆ ಯುವರಾಣಿ ಧಾರಾವಾಹಿಗಳಲ್ಲಿ ನಟಿಸಿದ್ದರು. ಹೆಚ್ಚಾಗಿ ವಿಲನ್ ರೋಲ್ ಗಳನ್ನೆ ಮಾಡಿಕೊಂಡು ಬಂದಿದ್ದರು ರೋಶನಿ. ಇದೀಗ ದಿಢೀರ್ ಆಗಿ ಸೀರಿಯಲ್ ಗೆ ಎಂಟ್ರಿ ಕೊಟ್ಟು, ಮತ್ತೆ ಹೊರ ನಡೆದಿದ್ದಾರೆ. ಮುಂದೆ ಯಾರು ರೋಹಿಣಿ ಪಾತ್ರದಲ್ಲಿ ನಟಿಸುತ್ತಾರೆ ಕಾದು ನೋಡಬೇಕು.

Read more Photos on
click me!

Recommended Stories