ಚಿಕನ್​-ಮಟನ್​ ಕೂಗಲ್ಲ: ನನ್​ ಊಟ ಯಾರಿಗೂ ಇಷ್ಟ ಆಗಲ್ಲ- ಕಿಚ್ಚ ಸುದೀಪ್​ ಊಟದ ಗುಟ್ಟು ರಟ್ಟು

Published : Dec 19, 2025, 08:07 PM IST

ನಟ ಕಿಚ್ಚ ಸುದೀಪ್ ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಶಾಂತವಾಗಿರುವುದರ ಹಿಂದಿನ ರಹಸ್ಯವನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಖಾರ ಮತ್ತು ಮಸಾಲೆ ಪದಾರ್ಥಗಳಿಂದ ದೂರವಿದ್ದು, ದೇಹ ಮತ್ತು ಹೊಟ್ಟೆಯನ್ನು ತಂಪಾಗಿರಿಸುವ ದಾಲ್​ನಂತಹ ಆಹಾರ ಸೇವಿಸುವುದೇ ತಮ್ಮ ಕೂಲ್ ಸ್ವಭಾವಕ್ಕೆ ಕಾರಣ ಎಂದಿದ್ದಾರೆ

PREV
16
ಕಾಮ್​ ಆಗಿರೋ ಸುದೀಪ್​

ಕೆಲವೇ ಗಂಟೆಗಳ ಕಾಲ ನಿದ್ದೆ ಮಾಡಿ, ಇಡೀ ದಿನ ಕೆಲಸ ಮಾಡಿದರೂ ಕಾಮ್​ ಆಗಿ ಇರುವವರು ಕಿಚ್ಚ ಸುದೀಪ್​. ಒಂದು ಕಡೆ ಸಿನಿಮಾ, ಇನ್ನೊಂದು ಕಡೆ ಬಿಗ್​ಬಾಸ್​, ಮತ್ತೊಂದು ಕಡೆ ಫ್ಯಾಮಿಲಿ, ಮಗದೊಂದು ಕಡೆ ಬೇರೆ ಬೇರೆ ಕಮಿಟ್​ಮೆಂಟ್ಸ್​ ಹೀಗೆ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗ್ತಾರೆ.

26
ಸುವರ್ಣ ಟಿವಿಗೆ ಸಂದರ್ಶನ

ಇದೀಗ ಅವರು ಸುವರ್ಣ ಟಿವಿ (Asianet Suvarna Tv) ನೀಡಿದ ಎಕ್ಸ್​ಕ್ಲೂಸಿವ್​ ಸಂದರ್ಶನದಲ್ಲಿ ತಮ್ಮ ಊಟದ ಬಗ್ಗೆ ಮಾತನಾಡಿದ್ದಾರೆ. ನನಗೆ ಬೆವರಿಕೊಂಡು ಊಟ ಮಾಡುವುದು ಎಂದರೆ ಇಷ್ಟವಾಗುವುದಿಲ್ಲ.

36
ಬೆವರಿ ಊಟ

ಖಾರ ಖಾರ ಎಂದು ಹಾಕಿಕೊಂಡು ಅದೇನು ಬೆವರೆಲ್ಲಾ ಒರೆಸಿಕೊಳ್ತಾ ಊಟ ಮಾಡ್ತಿರೋದನ್ನು ನೋಡಿದ್ರೆ ಯುದ್ಧ ಮಾಡ್ತಾ ಇದ್ದಾರೆ, ಊಟನಾ ಎನ್ನೋದು ಅರ್ಥವಾಗೋದೇ ಇಲ್ಲ, ಅಷ್ಟೊಂದು ಕಷ್ಟಪಟ್ಟು ಊಟ ಯಾಕೆ ಮಾಡಬೇಕು ಎನ್ನೋದೇ ತಿಳಿಯಲ್ಲ ಎಂದಿದ್ದಾರೆ ಸುದೀಪ್​.

46
ಸ್ಪೈಸಿ ಯಾವುದೂ ಇಷ್ಟವಾಗುವುದಿಲ್ಲ

ನನಗೆ ಈ ಖಾರ, ಸ್ಪೈಸಿ ಯಾವುದೂ ಇಷ್ಟವಾಗುವುದಿಲ್ಲ. ತಂಪಾಗಿ, ದೇಹ ಕೂಲಾಗಿ, ಹೊಟ್ಟೆಯೂ ಕೂಲ್​ ಆಗಿ ಇರುವ ಆಹಾರ ಬೇಕು. ಇಂಥ ಆಹಾರ ತಿನ್ನುವುದಕ್ಕೇನೇ ನಾನು ಕೂಲ್​ ಆಗಿಯೇ ಇರುತ್ತೇನೆ ಎಂದು ತಮ್ಮ ತಣ್ಣಗಿನ ಸೀಕ್ರೇಟ್​ ರಿವೀಲ್​ ಮಾಡಿದ್ದಾರೆ.

56
ಚಿಕನ್​, ಮಟನ್​ ಕೂಗಲ್ಲ

ಹೊಟ್ಟೆ ಒಳಗೆ ಚಿಕನ್​, ಮಟನ್​ ಕೂಗಿದ್ರೆ ರಂಪಾಟ, ಕಿರುಚಾಟ ಇರುತ್ತದೆ. ಅವೆಲ್ಲಾ ಪ್ರೊವೋಕ್​ ಮಾಡ್ತವೆ ಎಂದಿದ್ದಾರೆ. ನನ್ನ ಹೊಟ್ಟೆಯಲ್ಲಿ ಅದು ಇರದ ಕಾರಣ, ಕೂಲ್​ ಆಗಿ ಇರ್ತೇನೆ ಎಂದು ಸುದೀಪ್​ ಹೇಳಿದ್ದಾರೆ. ನನಗೆ ಇಂಥದ್ದೇ ಊಟ ಬೇಕು ಎಂದೇನೂ ಇಲ್ಲ. ತಿನ್ನೋದನ್ನು ಇಷ್ಟಪಟ್ಟು ತಿನ್ನುತ್ತೇನೆ ಎಂದಿದ್ದಾರೆ.

66
ದಾಲ್​ ಇರೋದು

ನನ್ನ ಹೊಟ್ಟೆಯಲ್ಲಿ ದಾಲ್​ ಇರೋದಕ್ಕೆ ತಣ್ಣಗೆ ಇರುತ್ತೆ. ಅದಕ್ಕಾಗಿಯೇ ಯಾವಾಗಲೂ ಚಟುವಟಿಕೆಯಿಂದ ಇರಲು ಸಾಧ್ಯ ಎಂದು ಕಿಚ್ಚ ಹೇಳಿದ್ದಾರೆ.

Read more Photos on
click me!

Recommended Stories