BBK 12: ತಳ್ಳಾಟ, ನೂಕಾಟ, ಕಿತ್ತಾಟ; ಇದು ರಕ್ಷಿತಾ ಶೆಟ್ಟಿ Vs ರಾಶಿಕಾ ಶೆಟ್ಟಿ; ಜಗಳದಲ್ಲಿ ಯಾರು ಸರಿ?

Published : Jan 05, 2026, 07:53 AM IST

ಬಿಗ್‌ಬಾಸ್ ಕನ್ನಡ ಸೀಸನ್ 12ರ 15ನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ರಾಶಿಕಾ ಶೆಟ್ಟಿ ಮತ್ತು ರಕ್ಷಿತಾ ಶೆಟ್ಟಿ ನಡುವೆ ತೀವ್ರ ಜಗಳ ನಡೆದಿದೆ. ರಾಶಿಕಾ ಅವರು ರಕ್ಷಿತಾರನ್ನು ನಾಟಕಗಾರ್ತಿ ಎಂದಿದ್ದಕ್ಕೆ, ರಕ್ಷಿತಾ ಅವರು ಕುಟುಂಬದ ವಿಷಯ ಎತ್ತಿ ತಿರುಗೇಟು ನೀಡಿದ್ದಾರೆ.

PREV
15
ರಾಶಿಕಾ ಶೆಟ್ಟಿ ಮತ್ತು ರಕ್ಷಿತಾ ಶೆಟ್ಟಿ

ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಎರಡು ವಾರ ಉಳಿದುಕೊಂಡಿದ್ದು, ಎಂಟು ಸ್ಪರ್ಧಿಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. 15ನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ರಾಶಿಕಾ ಶೆಟ್ಟಿ ಮತ್ತು ರಕ್ಷಿತಾ ಶೆಟ್ಟಿ ಕಿತ್ತಾಡಿಕೊಂಡಿದ್ದಾರೆ. ಇಂದಿನ ಪ್ರೋಮೋದಲ್ಲಿ ಇಬ್ಬರ ಜಗಳವನ್ನು ತೋರಿಸಲಾಗಿದೆ.

25
ರಕ್ಷಿತಾರನ್ನು ನಾಮಿನೇಟ್ ಮಾಡಿದ ರಾಶಿಕಾ

ಸ್ಪರ್ಧಿಗಳ ಭಾವಚಿತ್ರವನ್ನು ನೀಡಲಾಗಿರುವ ಬಾಲ್‌ಗೆ ಅಂಟಿಸಬೇಕು. ನಂತರ ಆ ಚೆಂಡನ್ನು ಕಾಲಿನಿಂದ ಒದ್ದು ಮನೆಯ ಮುಖ್ಯದ್ವಾರದಿಂದ ಹೊರಗೆ ಹಾಕಬೇಕು. ಈ ಮೂಲಕ ಸ್ಪರ್ಧಿಗಳು ನಾಮಿನೇಟ್ ಮಾಡಬೇಕು. ರಾಶಿಕಾ ಅವರು ರಕ್ಷಿತಾರನ್ನು ನಾಮಿನೇಟ್ ಮಾಡಿ ಕೆಲ ಕಾರಣ ನೀಡಿದ್ದಾರೆ.

35
ಇದನ್ನೆಲ್ಲಾ ಹೇಳಿಕೊಟ್ರಾ?

ನೀನು ಎಷ್ಟು ನಾಟಕ ಮಾಡ್ತೀಯಾ ಎಂದು ನನಗೂ ಮತ್ತು ಮನೆಯವರಿಗೆ ಗೊತ್ತಾಗಿದೆ. ಇಡೀ ವಾರ ಮನೆಯಲ್ಲಿ ಚೆನ್ನಾಗಿ ಮಾತನಾಡುವ ನೀನು ಸುದೀಪ್ ಸರ್ ಮುಂದ್ಯಾಕೆ ಮಾತನಾಡಲ್ಲ ಎಂದು ರಾಶಿಕಾ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಕ್ಷಿತಾ ಶೆಟ್ಟಿ, ಹಾಗಾದ್ರೆ ನಿಮ್ಮ ಫ್ಯಾಮಿಲಿಯವರು ನಿಮಗೆ ಇದನ್ನೆಲ್ಲಾ ಹೇಳಿಕೊಟ್ರಾ ಎಂದು ತಿರುಗೇಟು ನೀಡುತ್ತಾರೆ.

45
ಜಗಳದಲ್ಲಿ ಯಾರು ಸರಿ?

ಇದರಿಂದ ಕೋಪಗೊಳ್ಳುವ ರಾಶಿಕಾ ಶೆಟ್ಟಿ, ಕೈಯಲ್ಲಿದ್ದ ಬಾಲ್ ಕೆಳಗೆ ಬಿಟ್ಟು ಫ್ಯಾಮಿಲಿಯ ವಿಷಯಕ್ಕೆ ಬರಬೇಡ ಎಂದು ಎಚ್ಚರಿಸುತ್ತಾರೆ. ಹೌದು, ನಿಮಗೆ ಫ್ಯಾಮಿಲಿ ಅವರು ಹೇಳಿಕೊಟ್ರಾ ಎಂದು ರಕ್ಷಿತಾ ಶೆಟ್ಟಿ ಮತ್ತೆ ಮಾತನ್ನು ಪುನರುಚ್ಚಿಸುತ್ತಾರೆ. ಆದ್ರೆ ಇವರಿಬ್ಬರ ಜಗಳದಲ್ಲಿ ಯಾರು ಸರಿ ಎಂಬುವುದು ಇಂದಿನ ಸಂಚಿಕೆಯಲ್ಲಿ ಬಯಲಾಗಲಿದೆ.

ಇದನ್ನೂ ಓದಿ: BBK 12: ಕೊನೆಗೂ ಸುದೀಪ್ ಮುಂದೆಯೇ ಸತ್ಯ ಒಪ್ಪಿಕೊಂಡ ಗಿಲ್ಲಿ ನಟ

55
ಅಶ್ವಿನಿ ಗೌಡ ನೀಡಿದ ಕಾರಣ

ಭಾನುವಾರದ ಸಂಚಿಕೆ ಬಳಿಕ ಅಶ್ವಿನಿ ಗೌಡ ನೀಡಿದ ಕಾರಣಕ್ಕೆ ರಾಶಿಕಾ ಮತ್ತು ರಘು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ರಘು ತೊಡೆ ಮೇಲೆ ರಾಶಿಕಾ ಮಲಗ್ತಾಳೆ. ಅವರಿಗೆ ಒರಗಿಕೊಂಡು ಕೂರ್ತಾಳೆ. ಮನೆಯಲ್ಲಿ ಒಂದು ಮತ್ತೊಂದು ಟ್ರ್ಯಾಕ್ ಮಾಡಿಕೊಂಡಿದ್ದಾಳೆ ಎಂಬಿತ್ಯಾದಿ ಕಾರಣಗಳನ್ನು ಸುದೀಪ ಮುಂದೆಯೇ ಅಶ್ವಿನಿ ಗೌಡ ನೀಡಿದ್ದರು.

ಇದನ್ನೂ ಓದಿ: ಕುತೂಹಲದ ಲವ್​ಸ್ಟೋರಿ ಹೇಳಿದ ನಟಿ ದಿಶಾ: ಪೂರ್ಣ ಸಂದರ್ಶನದಲ್ಲಿ 8 ಕನ್ನಡ ಪದ ಬಳಕೆಗೆ ನೆಟ್ಟಿಗರ ಧನ್ಯವಾದ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories