ಭಾನುವಾರದ ಸಂಚಿಕೆಯಲ್ಲಿ, ಸ್ಪರ್ಧಿಗಳು ಅಶ್ವಿನಿ ಗೌಡರನ್ನು ಗುರಿಯಾಗಿಸಿಕೊಂಡು ತಮ್ಮ ಕೋಪವನ್ನು ಹೊರಹಾಕಿದರು. ಗಿಲ್ಲಿ ನಟ ತಾನು ಅಶ್ವಿನಿಯಿಂದಲೇ ಫೂಟೇಜ್ ಪಡೆದಿದ್ದಾಗಿ ಒಪ್ಪಿಕೊಂಡಿದ್ದು, ಈ ವಾರ ಸ್ಪಂದನಾ ಸೋಮಣ್ಣ ಮನೆಯಿಂದ ಹೊರಬಂದಿದ್ದಾರೆ.
ಭಾನುವಾರದ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ತಮ್ಮ ಎದುರಾಳಿಯ ನೆಗೆಟಿವ್ ಹೇಳಿ ಅವರ ಹೆಸರಿನ ಬ್ಯಾಗ್‌ಗೆ ಪಂಚ್ ನೀಡಬೇಕು. ಈ ವೇಳೆ ಗಿಲ್ಲಿ ನಟ, ರಾಶಿಕಾ ಶೆಟ್ಟಿ, ಕಾವ್ಯಾ ಶೈವ, ಧನುಷ್ ಎಲ್ಲರೂ ಅಶ್ವಿನಿ ಗೌಡ ಹೆಸರಿನ ಬ್ಯಾಗ್‌ಗೆ ಸಾಲು ಸಾಲು ಪಂಚ್ ನೀಡಿ ತಮ್ಮ ಕೋಪವನ್ನು ಹೊರ ಹಾಕಿದರು.
25
ಯಾರಿಂದ ಯಾರಿಗೆ ಫೂಟೇಜ್?
ಈ ವೇಳೆ ಗಿಲ್ಲಿ ನಟ ಹೇಳಿದ ಮಾತು ಕೇಳಿ ಅಶ್ವಿನಿ ಗೌಡ ಅಚ್ಚರಿಗೊಂಡರು. ಸುದೀಪ್ ಸೂಚನೆ ಮೇರೆಗೆ ಅಶ್ವಿನಿ ಗೌಡ ತಮ್ಮ ಆಟದಲ್ಲಿ ಕೆಲವೊಂದ ಬದಲಾವಣೆ ಮಾಡಿಕೊಂಡಿದ್ದರು. ಅಶ್ವಿನಿ ಗೌಡ ಸುಮ್ಮನಿದ್ರೆ ಗಿಲ್ಲಿಗೆ ಫೂಟೇಜ್ ಸಿಗಲ್ಲ ಎಂಬ ಮಾತನ್ನು ಧನುಷ್ ಹೇಳಿದ್ದರು. ಇದೇ ರೀತಿಯ ಅಭಿಪ್ರಾಯವನ್ನು ಹಲವು ಸ್ಪರ್ಧಿಗಳು ವ್ಯಕ್ತಪಡಿಸಿದ್ದರು.
35
ಗಿಲ್ಲಿ ನಟ ವರ್ಸಸ್ ಅಶ್ವಿನಿ ಗೌಡ
ಇದೇ ಅಭಿಪ್ರಾಯವನ್ನು ಅಶ್ವಿನಿ ಗೌಡ ನಿರಂತರವಾಗಿ ಹೇಳಿಕೊಂಡು ಬರುತ್ತಲೇ ಇದ್ದಾರೆ. ಅಶ್ವಿನಿ ಗೌಡ ಎದುರಾಳಿಯಾದ್ರೆ ಮಾತ್ರ ಗಿಲ್ಲಿ ಮನೆಯಲ್ಲಿ ಕಾಣಿಸಿಕೊಳ್ಳಲು ಸಾಧ್ಯ ಎಂಬ ಅಭಿಪ್ರಾಯ ಮನೆಯ ಹೊರೆಗಡೆಯೂ ವ್ಯಕ್ತವಾಗಿತ್ತು. ಇದೀಗ ಸ್ವತಃ ಗಿಲ್ಲಿ ಇದೇ ಹೇಳಿಕೆಯನ್ನು ನೀಡಿ ಅಶ್ವಿನಿ ಗೌಡ ಚಿತ್ರವುಳ್ಳ ಬ್ಯಾಗ್‌ಗೆ ಪಂಚ್ ನೀಡಿದ್ದಾರೆ.
ಹೌದು, ನಾನು (ಅಶ್ವಿನಿ ಗೌಡ) ನಿಮ್ಮಿಂದ ಫೂಟೇಜ್ ತೆಗೆದುಕೊಂಡಿದ್ದೇನೆ. ಅದಕ್ಕೆ ನಾನು 14ನೇ ವಾರದವರೆಗೆ ಬಂದಿದ್ದೇನೆ. ನಾನು ಯಾರನ್ನು ಫಿನಾಲೆಗೆ ಕರೆದುಕೊಂಡು ಹೋಗಲು ಬಂದಿಲ್ಲ. ನಿಮ್ಮ ಆಟ ನೀವು ಶುರು ಮಾಡ್ಕೊಳ್ಳಿ ಎಂದು ಗಿಲ್ಲಿ ನಟ ಹೇಳಿದ್ದಾರೆ. ಈ ಮಾತನ್ನು ಕೇಳಿದ ವೀಕ್ಷಕರು, ಕೊನೆಗೂ ಅಶ್ವಿನಿ ಗೌಡ ಅವರಿಂದ ಫೂಟೇಜ್ ತೆಗೆದುಕೊಂಡಿದ್ದನ್ನು ಗಿಲ್ಲಿ ನಟ ಒಪ್ಪಿಕೊಂಡರಲ್ಲಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಈ ವಾರ ಮನೆಯಿಂದ ಸ್ಪಂದನಾ ಸೋಮಣ್ಣ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಸುದೀಪ್ ಜೊತೆ ವೇದಿಕೆ ಹಂಚಿಕೊಂಡ ಸ್ಪಂದನಾ ಸೋಮಣ್ಣ, ಇಷ್ಟು ದಿನ ನಾನು ಮನೆಯಲ್ಲಿ ಉಳಿತೀನಿ ಎಂದು ಅಂದುಕೊಂಡಿರಲಿಲ್ಲ ಎಂದು ಹೇಳಿದರು. ನಾಳೆಯಿಂದ ವೇಕಪ್ ಸಾಂಗ್ ಮತ್ತು ನನ್ನ ಸ್ಪರ್ಧಿಗಳನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.