'ಲಕ್ಷ್ಮೀನಿವಾಸ' ಸೀರಿಯಲ್ ಖ್ಯಾತಿಯ ನಟಿ ದಿಶಾ ಮದನ್ ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶಶಾಂಕ್ ವಾಸುಕಿ ಗೋಪಾಲ್ ಜೊತೆ ಶುರುವಾದ ಪ್ರೀತಿ, ಸುಲಭವಾಗಿ ಮದುವೆಯಾದ ಕಥೆಯನ್ನು ಹಂಚಿಕೊಂಡಿದ್ದಾರೆ.
ನಟಿ ದಿಶಾ ಮದನ್ (Disha Madan) ಎಂದರೆ ಕಿರುತೆರೆ ವೀಕ್ಷಕರಿಗೆ ಯಾರೆಂದು ತಿಳಿಯದೇ ಹೋಗಬಹುದು. ಆದರೆ ಲಕ್ಷ್ಮೀನಿವಾಸ ಸೀರಿಯಲ್ ಭಾವನಾ, ಸಿದ್ದೇಗೌಡ್ರ ಮುದ್ದಿನ ಹೆಂಡ್ತಿ ಎಂದರೆ, ಸಾಫ್ಟ್ ಆಗಿರೋ ತುಂಬಾ ಮಿತವಾಗಿ ಮಾತನಾಡುವ ಹೆಣ್ಣುಮಗಳೊಬ್ಬಳು ಕಣ್ಣೆದುರು ಬರುತ್ತಾಳೆ. ಆಕೆಯೇ ನಿಜ ಜೀವನದಲ್ಲಿ ಸ್ಟೈಲಿಷ್ ಆಗಿರೋ ನಟಿ ದಿಶಾ ಮದನ್.
25
ಕರ್ನಾಟಕಕ್ಕೆ ಕೀರ್ತಿ
ಕಳೆದ ವರ್ಷ ಕೇನ್ಸ್ ಫಿಲ್ಮ್ಫೆಸ್ಟಿವಲ್ನ ರೆಡ್ ಕಾರ್ಪೆಟ್ ಮೂಲಕ ಮಿಂಚುವ ಮೂಲಕ ಕರುನಾಡಿಗೂ ಕೀರ್ತಿ ತಂದಿರುವ ನಟಿ ಈಕೆ. ಅಸಲಿ ಜೀವನದಲ್ಲಿ ಇಬ್ಬರು ಮಕ್ಕಳ ಅಮ್ಮನಾಗಿರುವ ನಟಿ ದಿಶಾ ಅವರು ರೇಡಿಯೋಸಿಟಿ ಕನ್ನಡ ಚಾನೆಲ್ಗೆ ಸಂದರ್ಶನ ನೀಡಿದ್ದು, ಅದರಲ್ಲಿ ತಮ್ಮ ಕುತೂಹಲದ ಲವ್ಸ್ಟೋರಿ ಬಗ್ಗೆ ಮಾತನಾಡಿದ್ದಾರೆ.
35
ಜಾಲತಾಣದಲ್ಲಿ ಲವ್ಸ್ಟೋರಿ ಶುರು
ನನಗೆ ಸೋಷಿಯಲ್ ಮೀಡಿಯಾದಲ್ಲಿ 25 ಸಾವಿರ ಫಾಲೋವರ್ಸ್ ಇದ್ರು. ನನ್ನ ಪ್ರೊಫೈಲ್ ನೋಡಿದ ಶಶಾಂಕ್ ವಾಸುಕಿ ಗೋಪಾಲ್ ಅವರು ನಿಮ್ಮ ಪ್ರೊಫೈಲ್ ನೋಡಿದ್ರೆ ಫನ್ನಿ ಎನ್ನಿಸುತ್ತದೆ ಎಂದು ಮೆಸೇಜ್ ಮಾಡಿದ್ರು. ನಾನು ಕೂಡ ಅವರ ಮೆಸೇಜ್ ನೋಡಿ ರಿಪ್ಲೈ ಮಾಡಿದೆ. ಹೀಗೆ ಮಾತನಾಡುತ್ತಾ ನಮ್ಮಿಬ್ಬರಲ್ಲಿ ಎಲ್ಲವೂ ಕಾಮನ್ ಇದೆ ಎನ್ನುವುದು ತಿಳಿಯಿತು ಎಂದಿದ್ದಾರೆ.
ಆಗಿನ್ನೂ ನನಗೆ 24 ವರ್ಷ ವಯಸ್ಸಾಗಿತ್ತು. ಆದರೆ ಅದಾಗಲೇ ಮನೆಯಲ್ಲಿ ಮದುವೆಗೆ ಸಿಕ್ಕಾಪಟ್ಟೆ ಪ್ರೆಷರ್ ಇತ್ತು. ಬ್ರೋಕರ್ಗೆಲ್ಲಾ ಜಾತಕ ಕೊಟ್ಟುಬಿಟ್ಟಿದ್ರು. ಆದ್ದರಿಂದ ನಾನು ಶಶಾಂಕ್ ಅವರಲ್ಲಿ ಈ ಬಗ್ಗೆ ಮಾತನಾಡಿದಾಗ ಅವರು ಮದುವೆಗೆ ಒಪ್ಪಿಗೆ ಕೊಟ್ಟೇ ಬಿಟ್ಟರು. ಆದ್ದರಿಂದ ಕುತೂಹಲದ ತಿರುವಿನಲ್ಲಿ ನಾವಿಬ್ಬರು ತುಂಬಾ ಈಸಿಯಾಗಿ ಮದ್ವೆಯಾದ್ವಿ ಎಂದಿದ್ದಾರೆ ನಟಿ. ಅವರು ಈಗ ವಿಯಾನ್, ಅವೈರಾ ಎನ್ನುವ ಮಕ್ಕಳ ಅಪ್ಪ-ಅಮ್ಮ.
55
ಎಂಟು ಕನ್ನಡ ಶಬ್ದ
ಆದರೆ, ಇವರ ಈ ಸಂಪೂರ್ಣ ಸಂದರ್ಶನದಲ್ಲಿ ಇವರ ಲವ್ಸ್ಟೋರಿ ಕೇಳುವುದನ್ನು ಬಿಟ್ಟು ನೆಟ್ಟಿಗರು ನಿಮ್ಮ ಎರಡು ನಿಮಿಷಗಳ ಲವ್ಸ್ಟೋರಿಯಲ್ಲಿ 8 ಶಬ್ದ ಬಳಕೆ ಮಾಡಿರುವುದಕ್ಕೆ ಧನ್ಯವಾದ ಎಂದು ಹೇಳುತ್ತಿದ್ದಾರೆ! ಇದು ಇಂಗ್ಲಿಷ್ ಸಂದರ್ಶನ ಎಂದುಕೊಂಡ್ವಿ. ಆದರೆ ಕನ್ನಡ ಮಾತನಾಡಿದ ಕಾರಣ, ಕನ್ನಡದ ಸಂದರ್ಶನ ಎಂದು ತಿಳಿಯಿತು, ಕೆಲವು ಶಬ್ದ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.