ಬಿಗ್‌ಬಾಸ್‌ ಮನೆಯಲ್ಲಿ ನಾಮಿನೇಷನ್ ಜ್ವಾಲೆ: ರಕ್ಷಿತಾ -ರಾಶಿಕಾ ನಡುವೆ ಮಹಾ ಕಾಳಗ!

Published : Oct 21, 2025, 08:47 AM IST

ರಕ್ಷಿತಾ ಶೆಟ್ಟಿ ಮತ್ತು ರಾಶಿಕಾ ಶೆಟ್ಟಿ ನಡುವೆ ತೀವ್ರ ವಾಗ್ವಾದ ನಡೆದಿದೆ. ರಾಶಿಕಾ ಬೇರೆಯವರ ಮೇಲೆ ಅವಲಂಬಿತರಾಗಿದ್ದಾರೆ ಎಂದು ರಕ್ಷಿತಾ ನಾಮಿನೇಟ್ ಮಾಡಿದ್ದಕ್ಕೆ, ರಾಶಿಕಾ ತೀವ್ರವಾಗಿ ಪ್ರತಿಕ್ರಿಯಿಸಿ ಜಗಳವಾಡಿದ್ದಾರೆ. ಈ ವಾರ ಗಿಲ್ಲಿ ನಟ ಕೂಡ ನಾಮಿನೇಟ್ ಆಗಿದ್ದಾರೆ.

PREV
15
ಬಿಗ್‌ಬಾಸ್ ನಾಲ್ಕನೇ ವಾರದ ನಾಮಿನೇಷನ್

ಬಿಗ್‌ಬಾಸ್ ನಾಲ್ಕನೇ ವಾರದ ನಾಮಿನೇಷನ್ ಪ್ರಕ್ರಿಯೆ ಇಡೀ ಮನೆಯಲ್ಲಿ ಕಿಚ್ಚು ಹತ್ತಿಸಿದೆ. ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ರಕ್ಷಿತಾ ಶೆಟ್ಟಿ ಮತ್ತು ರಾಶಿಕಾ ಶೆಟ್ಟಿ ನಡುವೆ ಬೆಂಕಿ ಹತ್ತಿಕೊಂಡಿದೆ. ನಾಮಿನೇಷನ್ ಮಾಡಿದ್ದಕ್ಕೆ ರಕ್ಷಿತಾ ನೀಡಿದ ಕಾರಣಗಳಿಗೆ ರಾಶಿಕಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

25
4ಕ್ಕಿಂತ ಅಧಿಕ ಸ್ಟಿಕ್ಕರ್

ನಾಮಿನೇಟ್ ಮಾಡಿದ ಸ್ಪರ್ಧಿಯ ಹಣೆ ಅಥವಾ ಮುಖಕ್ಕೆ ನಾಮಿನೇಟೆಡ್ ಸ್ಟಿಕ್ಕರ್ ಅಂಟಿಸಬೇಕಾಗುತ್ತದೆ. ಪ್ರೋಮೋದಲ್ಲಿ ಗಿಲ್ಲಿ ನಟ ಅವರಿಗೆ 4ಕ್ಕಿಂತ ಅಧಿಕ ಸ್ಟಿಕ್ಕರ್ ಅಂಟಿಸಲಾಗಿರೋದನ್ನು ಕಾಣಬಹುದು. ಈ ವಾರ ಮನೆಯಿಂದ ಹೊರ ಹೋಗಲು ಗಿಲ್ಲಿ ನಟ ನಾಮಿನೇಟ್ ಆಗಿದ್ದಾರೆ. ಕಳೆದ ವಾರವಷ್ಟೇ ಗಿಲ್ಲಿ ನಟ ಕಿಚ್ಚನ ಚಪ್ಪಾಳೆ ಪಡೆದುಕೊಂಡಿದ್ದರು.

35
ರಕ್ಷಿತಾ ನೀಡಿದ ಕಾರಣ ಏನು?

ರಾಶಿಕಾ ವೈಯಕ್ತಿಕವಾಗಿ ಸ್ಟ್ರಾಂಗ್ ಆಗಿಲ್ಲ. ಇದು, ಅದು ತೆಗೆದುಕೊಂಡು ಬಾ ಎಂದು ಆರ್ಡರ್ ಮಾಡುತ್ತಾರೆ. ಬೇರೆಯವರ ಮೇಲೆ ರಾಶಿಕಾ ಡಿಪೆಂಡ್ ಆಗಿದ್ದಾರೆ ಎಂದು ರಕ್ಷಿತಾ ಹೇಳುತ್ತಾರೆ. ನಾಮಿನೇಷನ್ ಪ್ರಕ್ರಿಯೆ ಬಳಿಕ ರಿಯಾಕ್ಟ್ ಮಾಡಿರುವ ರಾಶಿಕಾ, ನಾನು ಯಾರ ಮೇಲೆ ಡಿಪೆಂಡ್ ಅಗಿದ್ದೀನಿ ಆಗಿದ್ದೇನೆ ಎಂದು ತಿಳಿಸು. ಈ ಮನೆಯಲ್ಲಿ ನಿನಗೆ ಏನು ಆರ್ಥವಾಗಲ್ಲ. ಬಿಗ್‌ಬಾಸ್‌ಗೆ ಸುಮ್ಮನೆ ಬಂದಿದ್ದೀಯಾ ಎಂದು ಹೇಳಿದ್ದಾರೆ.

45
ತಿರುಗೇಟು ನೀಡಿದ ರಕ್ಷಿತಾ ಶೆಟ್ಟಿ

ಇದಕ್ಕೆ ತಿರುಗೇಟು ನೀಡಿರುವ ರಕ್ಷಿತಾ ಶೆಟ್ಟಿ, ಮನೆಯಲ್ಲಿ ಎಲ್ಲರನ್ನು ಗೌರವಿಸಬೇಕು. ಅದನ್ನು ಮಾಡೋದು ಆರ್ಡರ್ ಮಾಡೋದು ಅಲ್ಲ. ಇದುವೇ ಅವಲಂಬನೆ. ನಾವು ನಿಮ್ಮ ಸೇವಕರಲ್ಲ ಎಂದಿದ್ದಾರೆ. ಹೌದು, ಈ ಮನೆಯಲ್ಲಿ ನೀನು ಸರ್ವಂಟ್ ಎಂದು ರಾಶಿಕಾ ಕೂಗಾಡಿದ್ದಾರೆ.

ಇದನ್ನೂ ಓದಿ: BBK 12: ಕಾಲು ಮುಗಿತೀನಿ ಅಂದ್ರು ಬಿಡಲಿಲ್ಲ: ಗಿಲ್ಲಿ ನಟನಿಗೆ ಶಾಕ್ ಕೊಟ್ಟ ಸ್ಪರ್ಧಿಗಳು

55
ನೆಟ್ಟಿಗರು ಹೇಳಿದ್ದೇನು?

ಏನೂ ಅರ್ಥವಾಗದೆ ಬಿಗ್ ಬಾಸ್ ಗೆ ಬಂದವಳಲ್ಲ ರಕ್ಷಿತಾ. ಎಲ್ಲರಿಗೂ ಸರಿಯಾಗಿ ಕರಾವಳಿಯ ಪುಳಿ ಮುಂಚಿ ತಿನ್ನಿಸ್ತಿದ್ದಾಳೆ ರಕ್ಷಿತಾ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಮತ್ತೊಂದೆಡೆ ಸೋಮವಾರ ಸಂಚಿಕೆಯಲ್ಲಿ ಮಹಿಳಾ ಸ್ಪರ್ಧಿ ಹಿಂದೆ ಗಿಲ್ಲಿ ನಟ ಓಡಾಡಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ತಾಳಿ ಕಟ್ಟಲಿಲ್ಲ, ಗಂಡನಾಗಲಿಲ್ಲ; ನಿತ್ಯಾ ಹೊಟ್ಟೆಯಲ್ಲಿ ಬೆಳೆಯುವ ಮಗುವಿಗೆ ಅಪ್ಪನಾಗ್ತಾನಾ ಕರ್ಣ?

Read more Photos on
click me!

Recommended Stories