BBK 12: ಬೆನ್ನಿಗೆ ಚೂರಿ ಹಾಕಿದ್ಯಾರು? ಕಾವ್ಯಾ Vs ರಕ್ಷಿತಾ, ಇಬ್ಬರಲ್ಲಿ ಚೀಪ್ ಗಿಮಿಕ್ ಯಾರದ್ದು?

Published : Dec 01, 2025, 02:47 PM IST

ಬಿಗ್‌ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಜೋರಾಗಿದ್ದು, ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಕಾವ್ಯಾ ಶೈವ ಮತ್ತು ರಕ್ಷಿತಾ ಶೆಟ್ಟಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಒಬ್ಬರನ್ನೊಬ್ಬರು ಸ್ಟ್ರಾಟಜಿ, ಡ್ರಾಮಾ ಮತ್ತು ಚೀಪ್ ಗಿಮಿಕ್ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.

PREV
15
ನಾಮಿನೇಷನ್ ಭರಾಟೆ

ಸದ್ಯ ಬಿಗ್‌ಬಾಸ್ ಮನೆಯಲ್ಲಿ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿದ್ದು, ನಾಮಿನೇಷನ್ ಭರಾಟೆ ಶುರುವಾಗಿದೆ. ಸೀಸನ್ 11ರಲ್ಲಿ ಬಳಸಲಾದ ಬೆನ್ನಿಗೆ ಕಟ್ಟಿಕೊಂಡಿರುವ ಅರ್ಧವೃತ್ತಾಕಾಲದ ಹಲಗೆಗೆ ಚೂರಿ ಹಾಕುವ ಮೂಲಕ ಸ್ಪರ್ಧಿಗಳನ್ನು ನಾಮಿನೇಟ್ ಮಾಡಬೇಕು. ಅತ್ಯಧಿಕ ಚೂರಿ ಪಡೆದವರು ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆಗುತ್ತಾರೆ.

25
ಕಾವ್ಯಾ ಶೈವ ಮತ್ತು ರಕ್ಷಿತಾ ಶೆಟ್ಟಿ

ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಕಾವ್ಯಾ ಶೈವ ಮತ್ತು ರಕ್ಷಿತಾ ಶೆಟ್ಟಿ ನಡುವಿನ ಮಾತಿನ ಚಕಮಕಿಯನ್ನು ತೋರಿಸಲಾಗಿದೆ. ಇಬ್ಬರು ಒಬ್ಬರ ಮೇಲೆ ಮತ್ತೊಬ್ಬರ ಮೇಲೆ ಆರೋಪಗಳನ್ನು ಮಾಡಿದ್ದಾರೆ. ಹಾಗಾಗಿ ಇಬ್ಬರಲ್ಲಿ ಯಾರು ಸ್ಟ್ರಾಟಜಿ ಮಾಡೋರು ಎಂದು ವೀಕ್ಷಕರು ತಲೆಕೆಡಿಸಿಕೊಳ್ಳುತ್ತಿದ್ದಾರೆ.

35
ವಿನ್ನಿಂಗ್ ಟ್ಯಾಗ್

ಕಾವ್ಯಾ ಅವರನ್ನು ನಾಮಿನೇಟ್ ಮಾಡಿದ ರಕ್ಷಿತಾ ಶೆಟ್ಟಿ, ವೀಕ್ ಇದ್ದವರನ್ನು ಮೊದಲು ಮನೆಯಿಂದ ಹೊರಗೆ ಹಾಕಬೇಕು. ಎಲ್ಲಿಯೂ ನನೆಗ ನೀವು ನನ್ನ ಎದುರಾಳಿ ಅಂತ ಅನ್ನಿಸುತ್ತಿಲ್ಲ. ಯಾವುದೇ ಶ್ರಮವಿಲ್ಲದೇ ಇವರಿಗೆ ವಿನ್ನಿಂಗ್ ಟ್ಯಾಗ್ ಬೇಕು ಎಂದು ಹೇಳುತ್ತಾರೆ.

45
ರಕ್ಷಿತಾ ಆರೋಪ

ರಕ್ಷಿತಾ ಆರೋಪಗಳಿಗೆ ಪ್ರತಿಕ್ರಿಯಿಸಿದ ಕಾವ್ಯಾ ಶೈವ, ನಿನ್ನ ಸ್ಟ್ರಾಟಜಿ, ಡ್ರಾಮಾ ಮತ್ತು ಚೀಪ್ ಗಿಮಿಕ್ ನನ್ನ ಹತ್ರ ನಡೆಯಲ್ಲ. ನಾನು ಹೇಳೋದನ್ನು ಕೇಳಿಸಿಕೊಳ್ಳಲು ನಿನಗೆ ಮೀಟರ್ ಇಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ನಿಮ್ಮದು ಸ್ಟ್ರಾಟಜಿ ಎಂದು ಹೇಳುತ್ತಾ ರಕ್ಷಿತಾ ಶೆಟ್ಟಿ ಕುಣಿದಾಡುತ್ತಾರೆ.

ಇದನ್ನೂ ಓದಿ: BBK 12: ಮಲ್ಲಮ್ಮ ಅವರ ಮೇಡಂ ಪ್ರಿಯಾಂಕಾ ವಿರುದ್ಧ ಗಂಭೀರ ಆರೋಪ: ರಿವೀಲ್ ಆಯ್ತು ಸಂಭಾವನೆ

55
ನೆಟ್ಟಿಗರ ಕಮೆಂಟ್

ಬಿಗ್‌ಬಾಸ್ ಮನೆಯಲ್ಲಿರೋ ಇವರಿಬ್ಬರು ಡ್ರಾಮಾ ಮಾಡ್ತಿದ್ದಾರೆ. ಗಿಲ್ಲಿ ನಟ ಇಲ್ಲ ಅಂದ್ರೆ ಕಾವ್ಯಾ ಕಾಣಿಸಿಕೊಳ್ಳಲ್ಲ. ಅದೇ ರೀತಿ ಇತ್ತ ರಕ್ಷಿತಾ ಶೆಟ್ಟಿ ತುಂಬಾ ಓವರ್ ಆಕ್ಟಿಂಗ್ ಮಾಡುತ್ತಿದ್ದಾರೆ. ರಕ್ಷಿತಾ ಶೆಟ್ಟಿಯದ್ದು ಆಕ್ಟಿಂಗ್ ಅಂತ ಧ್ರುವಂತ್ ಹೇಳಿದ ಮಾತು ಸತ್ಯ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: BBK 12: ಮನದಾಳದ ನೋವು ಹಂಚಿಕೊಳ್ಳುತ್ತಾ ಮನೆಯಲ್ಲಿನ ರಾಜಕೀಯ ರಿವೀಲ್ ಮಾಡಿದ ರಾಶಿಕಾ

Read more Photos on
click me!

Recommended Stories